ಉದಯರಶ್ಮಿ ದಿನಪತ್ರಿಕೆ
ಚಡಚಣ: ಹೋಳಿ ಹಬ್ಬದ ಐದನೇ ದಿವಸಕ್ಕೆ ಪಟ್ಟಣದಲ್ಲಿ ಬಣ್ಣದಾಟ ಆಡುವ ವಾಡಿಕೆಯಂತೆ ಮಂಗಳವಾರದಂದು ಮುಂಜಾನೆ ಎಂಟು ಗಂಟೆಯಿಂದಲೇ ವಿವಿಧ ಓಣಿಗಳಲ್ಲಿ ಚಿಣ್ಣರು, ಯುವಕರು, ಮಹಿಳೆಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಮಹಿಳೆಯರು ವಿವಿಧ ಬಣ್ಣಗಳಲ್ಲಿ ಮಿಂದು ಸಂತಸಪಟ್ಟರು.
ಹಲಗೆ ಮೇಳ: ವಿವಿಧ ಓಣಿಯ ಯುವಕರು ಮುಖಕ್ಕೆ ವಿವಿಧ ಬಣ್ಣ ಬಳಿದುಕೊಂಡು ಹಲಗೆ ಬಾರಿಸುತ್ತ ಓಣಿ ಓಣಿಗಳಲ್ಲಿ ಸಂಚರಿಸುತ್ತ ವಿವಿಧ ನೃತ್ಯಗಳನ್ನು ಪ್ರದರ್ಶಿಸುತ್ತ ಮೆರವಣಿಗೆ ಮಾಡಿ ನೋಡುಗರ ಕಣ್ಮನ ತಣಿಸಿದರು. ಸೋಗು ಅಣಕು ಶವಯಾತ್ರೆಬಣ್ಣ ತುಂಬಿದ ಬ್ಯಾರೆಲ್‌ಗಳು ಅಲ್ಲಲ್ಲಿ ಕಾಣಿಸಿಕೊಂಡು ಹೋಗು ಬರುವವರಿಗೆ ಬಣ್ಣ ಎರಚುತ್ತಿದ್ದರು.
ಮಹಿಳೆಯರು ಮಿಗಿಲು: ಬಣ್ಣದಾಟದಲ್ಲಿ ಪುರುಷರಿಗಿಂತ ಮಹಿಳೆಯರು, ಬಾಲಕಿಯರು ಹೆಚ್ಚಾಗಿ ಕಾಣಿಸಿಕೊಂಡು ಪ್ರೀತಿಯಿಂದ ಪರಸ್ಪರ ಬಣ್ಣ ಹಚ್ಚಿ ಖುಷಿಪಟ್ಟರು. ತಮ್ಮ ಬಂಧುಗಳಲ್ಲಿ ಸ್ನೇಹಿತೆಯರೊಂದಿಗೆ ಬಣ್ಣದಾಟವಾಡಿ ಸಂಭ್ರಮಿಸಿದರು. ಅತಿ ಹೆಚ್ಚು ನಾಕಿ ಮಂದಿ, ಕುಲಕರ್ಣಿಯವರ ಓಣಿ, ಮಾರುಕಟ್ಟೆ ಇವುಗಳಲ್ಲಿ ಅತಿ ಹೆಚ್ಚು ಬಣ್ಣದಾಟ ಜರುಗಿದವು.