ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಜಾನಪದ ಅಕಾಡೆಮಿ-ಬೆಂಗಳೂರ ಇವರು ಕೊಡಮಾಡುವ 2023 ನೇ ಸಾಲಿನ ಜಾನಪದ ವಾರ್ಷಿಕ ಗೌರವ ಪ್ರಶಸ್ತಿಯನ್ನು ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ತತ್ವಪದ ಹಾಡುಗಾರ್ತಿ ಇಮಾಂಬಿ ದೊಡಮನಿ ಇವರಿಗೆ ಬೀದರನ ಚನ್ನಬಸವ ಪಟ್ಟದ್ದೆವರು ರಂಗ ಮಂದಿರದಲ್ಲಿ ನಡೆದ ಜಾನಪದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.
ಈ ಪ್ರಶಸ್ತಿ 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಕಳೆದ ಮೂರ್ನಾಲು ದಶಕಗಳಿಂದ ಜಾನಪದ, ತತ್ವದ, ಭಜನಾ ಪದ, ಸೋಬಾನ ಹಾಡು ಹಾಡುತ್ತ ಬರುತ್ತಿರುವ ಇವರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ದೊರೆತಿರುವುದಕ್ಕೆ ಬೋರಗಿ ಶ್ರೀಮಠದ ಮಹಾಲಿಂಗೇಶ್ವರ ಸ್ವಾಮಿಗಳು, ರಾಂಪೂರ ಶ್ರೀ ಮಠದ ನಿತ್ಯಾನಂದ ಮಹಾರಾಜರು, ಸಿಂದಗಿ ಕಸಾಪ ಬಳಗ ಸೇರಿದಂತೆ ಅನೇಕ ಗಣ್ಯರು, ಸಾಹಿತಿಗಳು ಅಭಿನಂದಿಸಿದ್ದಾರೆ.

