ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ಸರ್ವೇ ನಂ.೪೮೭ರಲ್ಲಿ ಸಮುದಾಯ ಭವನ ಸಲುವಾಗಿ ತಳವಾರ ಸಮಾಜಕ್ಕೆ ರಾಜ್ಯ ಸರಕಾರದ ವತಿಯಿಂದ ೨೦ಗುಂಟೆ ಸ್ಥಳ ಮಂಜೂರು ಮಾಡಿಸಿರುವ ಶಾಸಕ ಅಶೋಕ ಮನಗೂಳಿ ಅವರಿಗೆ ಯಂಕಂಚಿ ಗ್ರಾಮದ ತಳವಾರ ಸಮಾಜದ ಮುಖಂಡರು, ಕಾರ್ಯಕರ್ತರು ೫೦ಕೆಜಿ ಸೇಬು ಹಣ್ಣಿನ ಹಾರದೊಂದಿಗೆ ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವಾಯ್.ಪಿ.ನಾಯ್ಕೋಡಿ, ಗುರಪ್ಪ ನಾಯ್ಕೊಡಿ, ಬಸು ನಾಯ್ಕೊಡಿ, ಪರಸು ನಾಯ್ಕೊಡಿ, ಹಣಮಂತ ತೆನ್ನಳ್ಳಿ, ಮಲ್ಲು ನಾಯ್ಕೋಡಿ, ಮಲಕಪ್ಪ ಹೊಸಮನಿ, ಸುರೇಶ ನಾಯಕೊಡಿ, ಲಕ್ಷ್ಮಣ್ ಹೊಸಮನಿ ಸೇರಿದಂತೆ ಪಕ್ಷದ ಮುಖಂಡರಾದ ಷಣ್ಮುಖಯ್ಯ ಹಿರೇಮಠ, ಶಂಕರಗೌಡ ಬಿರಾದಾರ, ಜಗದೀಶ್ ಹೂವಿನಳ್ಳಿ, ಸಂಗನಗೌಡ ಬಿರಾದಾರ, ಕಲ್ಲಪ್ಪ ಬಿಸನಾಳ, ರಮೇಶ್ ತಳಗೇರಿ, ಚೇತನಗೌಡ ಪಾಟೀಲ, ಶರಣು ತಳಗೇರಿ, ಯಮನೂರ ಸುಂಬಡ, ಪ್ರಕಾಶ್ ಮುಜಾವರ, ರಾಜುಸಾಬ ಡೋಣುರ, ದಾವೂದ ಡಂಬಳ, ಬಾಬು ಬಾಳಿಕಾಯಿ, ಮೊದಿನ್ ಮುಲ್ಲಾ, ಸೇರಿದಂತೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.

