ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪುರಾಣ, ಪ್ರವಚನ, ಹರಿಕಥೆಗಳಂತ ಆಧ್ಯಾತ್ಮಿಕ ವಿಚಾರಧಾರೆಗಳು ಮಾನಸಿಕ ನೆಮ್ಮದಿಗೆ ಸಹಕಾರಿಯಾಗಿವೆ ಎಂದು ಬಸವನಬಾಗೇವಾಡಿ ಒಡೆಯರ್ ಹಿರೇಮಠದ ಶಿವಪ್ರಕಾಶ ಶ್ರೀಗಳು ಹೇಳಿದರು.
ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಇತ್ತೀಚಿಗೆ ಶ್ರೀವೀರಸಂಗಮೇಶ್ವರ ಹಾಗೂ ಶ್ರೀಮಹಾಂತೇಶ್ವರ ಮೇಲಿನಮಠದಲ್ಲಿ ಆರಂಭಗೊಂಡ “ವರದಾನಿ ಗುಡ್ಡಾಪೂರ ಶ್ರೀದಾನಮ್ಮದೇವಿ ಮಹಾ ಪುರಾಣಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇದೇ ದಿ:೧೨ ರಿಂದ ಎಪ್ರೀಲ್ ೧೦ ರವರೆಗೆ ರಾತ್ರಿ ೮ ರಿಂದ ೧೦ ಗಂಟೆಯವರೆಗೆ ಜರುಗುವ ಮಹಾಪುರಾಣದಲ್ಲಿ ಗ್ರಾಮದ ಸದ್ಭಕ್ತರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಕೊಕಟನೂರ ಗದ್ದುಗೆಮಠದ ಮಡಿವಾಳೇಶ್ವರಶ್ರೀಗಳು ವಹಿಸಿ ಆಶೀರ್ವಚನ ನೀಡಿದರು.
ಗ್ರಾಮದ ಗುರುಬಸಯ್ಯ ಹಿರೇಮಠ, ಸಿದ್ದಯ್ಯ ಜಾಲವಾದಿಮಠ, ಬಸಣ್ಣ ಯತ್ನಾಳ, ಸಂಗನಗೌಡ ಬಿರಾದಾರ, ಬಾಪುಗೌಡ ಬಿರಾದಾರ, ಹಣಮಂತ್ರಾಯ ಸಾಲವಾಡಗಿ,ಅಪ್ಪುಗೌಡ ಪೋಲಿಸ್ ಪಾಟೀಲ, ರಾಜಶೇಖರ ಛಾಯಾಗೋಳ, ರಫೀಕ ಬ್ಯಾಕೋಡ, ಎಂ.ಸಿ.ಸುಂಬಡ, ಭೀಮನಗೌಡ ಕುಳೇಕುಮಟಗಿ, ಎಂ.ಡಿ.ಮನಹಳ್ಳಿ , ಪ್ರಭಯ್ಯ ಮೇಲಿನಮಠ, ಬಸಯ್ಯ ಮೇಲಿನಮಠ, ರಾಚಯ್ಯ ಹಿರೇಮಠ(ವರ್ಕಾನಹಳ್ಳಿ), ಚನ್ನಪ್ಪಗೌಡ ಬಿರಾದಾರ, ಸಂಗಯ್ಯ ಮೇಲಿನಮಠ, ಮಡುಗೌಡ ಬಿರಾದಾರ, ಮತ್ತು ಗ್ರಾಮದ ಸಮಸ್ತ ಭಕ್ತರು ಇದ್ದರು.

