ಪೀಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ವಿಜ್ಞಾನ ವಸ್ತು ಪ್ರದರ್ಶನ
ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಿರಂತರವಾಗಿ ಭೌತಿಕ ಪರಿಸರದ ಕುರಿತು ಪ್ರಾಯೋಗಿಕವಾಗಿ ಅರಿವನ್ನು ಮೂಡಿಸುತ್ತಾ ಅವರ ಬುದ್ಧಿಮಟ್ಟವನ್ನು ಹೆಚ್ಚಿಸಿ ಅವರಲ್ಲಿ ಸೃಜನಶೀಲತೆ ಒಡಮೂಡುವಂತೆ ಮಾಡಬೇಕು ಎಂದು ಗ್ರಾಪಂ ಸದಸ್ಯ ನಬಿಲಾಲ ನಾಯ್ಕೋಡಿ ಹೇಳಿದರು.
ಗ್ರಾಮದ ಪೀಸ್ ಇಂಟರ್‌ನ್ಯಾಷನಲ್ ಪ್ರೌಢಶಾಲೆಯಲ್ಲಿ ವಾರ್ಷಿಕ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ವಿಜ್ಞಾನ ವಸ್ತು ಪ್ರದರ್ಶನದ ನಿರ್ಣಾಯಕರು ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶಿವಾನಂದ ಹರಿಜನ ಶಿಕ್ಷಕರು ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದ ಪ್ರತಿಯೊಂದು ಹಂತದಲ್ಲೂ ಕ್ರಿಯಾಶೀಲರಾಗಿ ಪ್ರತಿಯೊಂದು ಸಂದರ್ಭವನ್ನು ಅರಿತುಕೊಂಡು ಬದುಕುವ ಕಲೆಯನ್ನು ಬೆಳೆಸಬೇಕು ಹಾಗೂ ಅವರಲ್ಲಿರುವ ಪ್ರತಿಭೆಯನ್ನು ಹೊರತರಲು ಪ್ರೇರೇಪಿಸುವ ಶಿಕ್ಷಣ ನೀಡಲು ಪ್ರತಿಯೊಬ್ಬ ಶಿಕ್ಷಕರು ಮುಂದಾಗಬೇಕು ಎಂದು ಹೇಳಿದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಮಾನವನ ದೇಹದ ವಿವಿಧ ಅಂಗಗಳಾದ ಹೃದಯ, ಕಿಡ್ನಿ, ರಕ್ತನಾಳಗಳು, ಮಿದುಳು ಕೆಲಸ ಮಾಡುವ ಬಗೆ ಮತ್ತು ರಾಕೆಟ್ ಉಡಾವಣೆ, ಪರಿಸರ ರಕ್ಷಣೆ, ಭೂಮಿ, ನೀರು, ವಾತಾವರಣ ಕಲುಷಿತವಾಗುವನ್ನು ತಪ್ಪಿಸುವ ಬಗೆ, ನೀರು ಸಂಗ್ರಹಣೆಯ ಅರಿವು ಮತ್ತು ಮಹತ್ವ ಹೀಗೆ ಹಲವಾರು ರೀತಿಯ ವ್ಯಜ್ಞಾನಿಕ ವಸ್ತು ಪ್ರದರ್ಶನಗಳನ್ನು ವಿವರಣೆಯೊಂದಿಗೆ ಬಂದಿರುವ ಅತಿಥಿಗಳು, ಗಣ್ಯಮಾನ್ಯರು ಮತ್ತು ಪಾಲಕರಿಗೆ ವಿವರಣೆ ನೀಡಿದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅತ್ಯುತ್ಮಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪುರಸ್ಕರಿಸಿ ಪ್ರೋತ್ಸಾಹಿಸಲಾಯಿತು.
ಈ ವೇಳೆ ರಾಜಸಾಬ ಬಡೇಘರ, ರಮೇಶ ಕೌದಿ, ರವಿಕುಮಾರ ಚಟ್ಟರಕಿ, ದೇವಿಂದ್ರ ಬಡಿಗೇರ, ಬುಕ್ಕಪ್ಪ ಹರಿಜನ, ಕಾಶೀಮ್ ಬಿರಾದಾರ, ಬಂದೇನವಾಜ್ ಹೊನ್ನಳ್ಳಿ, ಹುಸೇನಬಾಶಾ ನದಾಫ, ರುದ್ರಸ್ವಾಮಿ ಚಿಕ್ಕಮಠ, ಬಾಬುಸಾಬ ತಾಳಿಕೋಟಿ, ಮಾಂತೇಶ ಬಡಿಗೇರ, ಶಿವಾನಂದ, ಪ್ರೌಢಶಾಲೆಯ ಮುಖ್ಯಗುರುಗಳಾದ ಚಾಂದಪಾಶಾ ಹವಲ್ದಾರ, ಶಾಕೀರ ನಾಯ್ಕೋಡಿ, ಚನ್ನಾರಡ್ಡಿ ಬಿರಾದಾರ, ಹಸನ ಬನ್ನೆಟ್ಟಿ, ಗುರುನಾಥ ಮಾಡಗಿ, ನಬಿ ಮುಳುಸಾವಳಗಿ, ಸಿದ್ದಮ್ಮ ಹಿರೇಮಠ, ಮಂಜುಳಾ ಚಿಕ್ಕಮಠ, ಸವಿತಾ ಸಾತಲಗಾಂವಿ, ಫಾತಿಮಾ ಪೀರಾಪೂರ, ಶಮಶ್ಯಾದ ಹಳ್ಳದಮನಿ, ಪ್ರಮೀಳಾ ಮಾಡಗಿ, ಸುಜಾತಾ ಬಿಸೆ ಸೇರಿದಂತೆ ಇತರರು ಇದ್ದರು.

