ವಿಜಯಪುರದಲ್ಲಿ ಅಭಾಸಾಪದಿಂದ ಮೂರು ಪುಸ್ತಕಗಳ ಲೋಕಾರ್ಪಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ‘ಇತಿಹಾಸ ಸುಮ್ಮನೆ ಬರೋಲ್ಲ, ಆಳವಾದ ಅಧ್ಯಯನ ಬೇಕು’ ಎಂದು ಖ್ಯಾತ ಇತಿಹಾಸ ಸಂಶೋಧಕ ಡಿ ಎನ್ ಅಕ್ಕಿ ಹೇಳಿದರು.
ವಿಜಯಪುರ ನಗರದ ಬಿಡಿಇ ಸೊಸೈಟಿಯಲ್ಲಿ ರವಿವಾರ ನಡೆದ ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ಆಯೋಜನೆಯ ‘ಉಪನ್ಯಾಸ ಹಾಗೂ ಪುಸ್ತಕಗಳ ಬಿಡುಗಡೆ’ ಕಾರ್ಯಕ್ರಮದಲ್ಲಿ ಮಾತಾಡಿದ ಅವರು ‘ಸೃಜನಶೀಲ ಸಾಹಿತ್ಯ ಆದರೆ ಹೇಗೋ ನಡೆಯುತ್ತದೆ, ಇತಿಹಾಸ ಹಾಗಲ್ಲ, ಹಸಿವು ನೀಡರಿಕೆ ಬಿಟ್ಟು ಕ್ಷೇತ್ರಕಾರ್ಯ ಮಾಡಬೇಕು , ಶಾಸನಗಳ ಬಗ್ಗೆ ತಿಳಿದುಕೊಳ್ಳಬೇಕು, ಸಾಕಷ್ಟು ಅಧ್ಯಯನ ಬೇಕು ಎಂದು ಅವರು ಉಪನ್ಯಾಸದಲ್ಲಿ ತಿಳಿಸಿಕೊಟ್ಟರು.
ಸಾಹಿತ್ಯ ಎಂದೂ ಸವೆಯಬಾರದು, ಸಾಯಬಾರದು ಅಂತಹ ಸಾಹಿತ್ಯ ರಚನೆಯಾಗಬೇಕು. ಅಂತಹದ್ದೇ ರಚನೆ ಬಿಡುಗಡೆಗೊಂಡ ಪುಸ್ತಕಗಳ ಲೇಖಕರದ್ದಾಗಿದೆ ಎಂದು ಬಿಡುಗಡೆಗೊಂಡ ಪುಸ್ತಕಗಳ ಬಗ್ಗೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಎನ್. ಆರ್. ಕುಲಕರ್ಣಿ ವಿವರಿಸಿದರು.
ಇದೇ ಸಂದರ್ಭದಲ್ಲಿ ಅಭಾಸಾಪ ಜಿಲ್ಲಾಧ್ಯಕ್ಷರಾದ ನಾರಾಯಣ ಬಾಬಾನಗರ ಅವರ ‘ಕಾಖಂಡಕಿ ಮಹಿಪತಿದಾಸರ ಮುಂಡಿಗೆಗಳು’ , ಬಳವಂತ ಕುಲಕರ್ಣಿ ಅವರ ‘ ಅರುಣೋದಯ ಕಿರಣ’ ಕವನ ಸಂಕಲನ. ಕಿರಣ ಕುಮಾರ್ ಅವರ ‘ಶ್ರೀಅರವಿಂದ ಪ್ರೇಮ ಮತ್ತು ಮೃತ್ಯು’ ಪುಸ್ತಕಗಳು ಲೋಕಾರ್ಪಣೆಗೊಂಡವು. ಶಂಕರ್ ಬೈಚಬಾಳ ಪುಸ್ತಕಗಳನ್ನು ಪರಿಚಯಿಸಿದರು, ನಿರೂಪಣೆ ಶ್ರೀಮತಿ ಪ್ರಿಯಾ ಹರಿದಾಸ , ಸ್ವಾಗತ -ಪರಿಚಯ ವಿವೇಕ ಕುಲಕರ್ಣಿ , ವಂದನಾರ್ಪಣೆ ವರುಣ ಸೋಲಾಪುರ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಸುಧೀರ ಟಂಕಸಾಲೆ, ಶ್ರೀರಂಗ ಕುಲಕರ್ಣಿ , ಬಾಬುರಾವ ಕುಲಕರ್ಣಿ, ಪ್ರಕಾಶ ಇನಾಮಂದಾರ, ವಸಂತರಾವ ಕೊರ್ತಿ, ಅನಿಲ ಮಾಶ್ಯಾಳಕರ್, ಶ್ರೇಯಸ್ ಹೊನಕೆರೆ, ಆನಂದ ಗೋಡ್ಸೆ , ಶ್ರೀರಂಗ ಪುರಾಣಿಕ , ಕೇಶವ ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
— ಶ್ರೀರಂಗ ಪುರಾಣಿಕ
Mobile – 9663872037

