Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 08, 2026

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟಬುಕ್ ವಿತರಣೆ

ಡಾ.ಹಳಕಟ್ಟಿಯವರಿಂದ ವಚನ ಸಾಹಿತ್ಯದ ಸಮಗ್ರ ದರ್ಶನ :ಡಾ.ಮದಭಾವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಂಭ್ರಮದ ಹೋಳಿ ಆಚರಣೆ: ಬಣ್ಣದಲ್ಲಿ ಮಿಂದೆದ್ದ ಚಿಣ್ಣರು
(ರಾಜ್ಯ ) ಜಿಲ್ಲೆ

ಸಂಭ್ರಮದ ಹೋಳಿ ಆಚರಣೆ: ಬಣ್ಣದಲ್ಲಿ ಮಿಂದೆದ್ದ ಚಿಣ್ಣರು

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ತಿಕೋಟಾ: ಪಟ್ಟಣದ ಬಸವೇಶ್ವರ ಸರ್ಕಲ್, ಅಂಬೇಡ್ಕರ್ ವೃತ್ತ ಸೇರಿದಂತೆ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಶುಕ್ರವಾರ ಯುವಕ, ಯುವತಿಯರು ಹಾಗೂ ಚಿಣ್ಣರು ಬೆಳಗ್ಗೆಯಿಂದಲೇ ಹೋಳಿ ನಿಮಿತ್ಯ ಬಣ್ಣ ಎರಚಾಡುವ ಮೂಲಕ ಸಂಭ್ರಮಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ತಮ್ಮ ಪ್ರೀತಿ ಪಾತ್ರದವರ ಮನೆ ಮುಂದೆ ಗೆಳೆಯ ಗೆಳತಿಯರೊಂದಿಗೆ ಸಾಗಿ ಹಲಗೆ ಬಡಿಯುತ್ತಾ ನೃತ್ಯ ಮಾಡುವ ಮೂಲಕ ಬಣ್ಣ ಹಚ್ಚಿದರು. ಯುವಕರು ತಂಡೋಪತಂಡವಾಗಿ ಗ್ರಾಮೀಣ ಪ್ರದೇಶದ ತೋಟದ ಮನೆಗಳಿಗೂ ತೆರಳಿ ದ್ರಾಕ್ಷಿ ಪಡ ಹಾಗೂ ಒಣದ್ರಾಕ್ಷಿ ಸೆಡ್ ನಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೂ ಸಹ ಬಣ್ಣ ಲೇಪಿಸಿ ಖುಷಿಪಟ್ಟರು.
ತಾಂಡಾ ಮಹಿಳೆಯರ ಸಂಭ್ರಮ: ತಾಲ್ಲೂಕಿನ ಎಲ್ಲ ಲಂಬಾಣಿ ತಾಂಡಾ ಮಹಿಳೆಯರಿಗೆ ಈ ಹಬ್ಬ ಖುಷಿಯೋ ಖುಷಿ. ಏಕೆಂದರೆ ಬೆಳಗ್ಗೆಯಿಂದಲೇ ಮಹಿಳೆಯರು ಬಕೇಟ್ ಗಳಲ್ಲಿ ಬಣ್ಣ , ನೀರು ತುಂಬಿಕೊಂಡು ಬಣ್ಣ ಎರಚಾಡಿ ಲಂಬಾಣಿ ಹಾಡುಗಳನ್ನು ಹಾಡುತ್ತಾ ವಿಭಿನ್ನ ನೃತ್ಯ ಮಾಡುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಿಳೆಯರ ದಂಡು ಸಾಗಿತು.
ನಾಮಕರಣ ಕಾರ್ಯ: ಸಂಜೆಯವರೆಗೂ ತಾಂಡಾದಲ್ಲಿ ಬಣ್ಣದ ಹಬ್ಬ ಆಚರಿಸಿದ ಮಹಿಳೆಯರ ಗುಂಪು ಕಳೆದ ಹೋಳಿ ಹಬ್ಬದಿಂದ ಈ ವರ್ಷದ ಹೋಳಿವರೆಗೆ ಜನಿಸಿದ ಮಕ್ಕಳ ನಾಮಕರಣ ಕಾರ್ಯಕ್ರಮ ಮಾಡಿದರು. ಈಗಾಗಲೆ ಮಗುವಿಗೆ ಕುಟುಂಬದಲ್ಲಿ ನಾಮಕರಣ ಮಾಡಿರುತ್ತಾರೆ, ಈಗ ಒಂದು ವರ್ಷದಲ್ಲಿ ತಾಂಡದಲ್ಲಿ ಜನಿಸಿದ ಎಲ್ಲ ಮಕ್ಕಳಿಗೆ ಸಾಮೂಹಿಕವಾಗಿ ನಾಮಕರಣ ಮಾಡುವ ಪದ್ದತಿ ಇದೆ. ತಾಂಡಾದ ಎಲ್ಲ ನಿವಾಸಿಗಳ ಸಮ್ಮುಖದಲ್ಲಿ ಕಂದಮ್ಮಗಳ ನಾಮಕರಣ ಮಾಡಿ ನಿವಾಸಿಗಳಿಗೆ ಊಟದ ವ್ಯವಸ್ಥೆ ಮಾಡಿಸಲಾಗಿರುತ್ತದೆ ಎಂದು ಲೋಹಗಾಂವ ತಾಂಡಾ ನಿವಾಸಿ ಮಹಾಂತೇಶ ರಾಠೋಡ ಪತ್ರಿಕೆಗೆ ಮಾಹಿತಿ ನೀಡಿದರು.

ರಸ್ತೆಗಿಳಿದ ಚಿಣ್ಣರು

ಗ್ರಾಮದ ಪ್ರಮುಖ ಬೀದಿಗಳಲ್ಲಿ ಚಿಣ್ಣರು ಕೈಯಲ್ಲಿ ಬಣ್ಣ ತುಂಬಿದ ಬಕೇಟ್, ಚಂಬು, ಬಾಟಲಿ, ಪಿಚಕಾರಿ ಹಿಡಿದುಕೊಂಡು ಹಲಗೆ ಬಾರಿಸುತ್ತಾ ರಸ್ತೆಗಿಳಿದಿದ್ದರು. ದಾರಿಯುದ್ದಕ್ಕೂ ಸಾಗುವ ಜನರಿಗೆ ಪಿಚಕಾರಿಯಿಂದ ಬಣ್ಣ ಸಿಡಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 08, 2026

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟಬುಕ್ ವಿತರಣೆ

ಡಾ.ಹಳಕಟ್ಟಿಯವರಿಂದ ವಚನ ಸಾಹಿತ್ಯದ ಸಮಗ್ರ ದರ್ಶನ :ಡಾ.ಮದಭಾವಿ

ಜು.೧೦ ರಂದು ತರಬೇತಿ, ಇ-ಹರಾಜು

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 08, 2026
    In ದಿನಪತ್ರಿಕೆ
  • ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟಬುಕ್ ವಿತರಣೆ
    In (ರಾಜ್ಯ ) ಜಿಲ್ಲೆ
  • ಡಾ.ಹಳಕಟ್ಟಿಯವರಿಂದ ವಚನ ಸಾಹಿತ್ಯದ ಸಮಗ್ರ ದರ್ಶನ :ಡಾ.ಮದಭಾವಿ
    In (ರಾಜ್ಯ ) ಜಿಲ್ಲೆ
  • ಜು.೧೦ ರಂದು ತರಬೇತಿ, ಇ-ಹರಾಜು
    In (ರಾಜ್ಯ ) ಜಿಲ್ಲೆ
  • ಎಸ್‌ಐಆರ್ ಕುರಿತು ವದಂತಿ ಹರಡಿದರೆ ಕಾನೂನು ಕ್ರಮ
    In (ರಾಜ್ಯ ) ಜಿಲ್ಲೆ
  • ಬರ: ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ
    In (ರಾಜ್ಯ ) ಜಿಲ್ಲೆ
  • ಮಳೆಗಾಗಿ ಗ್ರಾಮಸ್ಥರಿಂದ ಗುರ್ಜಿ ಪೂಜೆಗೆ ಮೊರೆ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ :ಕೊಪ್ಪಳ
    In (ರಾಜ್ಯ ) ಜಿಲ್ಲೆ
  • ಜೆಇಇಯಲ್ಲಿ ಸಾಧನೆಗೈದ ಇಂದಿರಾಬಾಯಿಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ಎಸ್‌ಐಆರ್ ನೆಪದಲ್ಲಿ ಮತದಾರರ ಹಕ್ಕು ಕಸಿವ ಕುತಂತ್ರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.