ವಿಜಯಪುರ ಪೊಲೀಸರಿಂದ ಕಂಟ್ರಿ ಪಿಸ್ತೂಲ್ ಹಾವಳಿಗೆ ಕಡಿವಾಣ | ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಎಪಿಎಮ್‌ಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ಮೂವರು ಆರೋಪಿತರಿಂದ ಒಟ್ಟು 05 ಕಂಟ್ರಿ ಪಿಸ್ತೂಲ್ ಹಾಗೂ 06 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲೆ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಶುಕ್ರವಾರ ಈ ಕುರಿತು ಮಾಹಿತಿ ನೀಡಿದ ಅವರು, ಆರೋಪಿತರನ್ನು ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದರು.
ಮಾ.೬ರಂದು ಲಕ್ಷ್ಮಣ ನಿಂಬರಗಿ, ಪೊಲೀಸ್ ಅಧೀಕ್ಷಕರು, ವಿಜಯಪುರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶಂಕರ ಮಾರಿಹಾಳ ಮತ್ತು ರಾಮನಗೌಡ ಹಟ್ಟಿ ಹಾಗೂ ಡಿಎಸ್‌ಪಿ ಬಸವರಾಜ ಯಲಿಗಾರ ರವರ ಮಾರ್ಗದರ್ಶನದಲ್ಲಿ ಮಲ್ಲಯ್ಯ ಮಠಪತಿ, ಸಿಪಿಐ ಗೋಲಗುಂಬಜ್ ವೃತ್ತ ರವರ ನೇತೃತ್ವದಲ್ಲಿ ಶ್ರೀಮತಿ ಜ್ಯೋತಿ ಖೋತ, ಪಿಎಸ್‌ಐ ಎಪಿಎಮ್‌ಸಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಜನರು ಖಚಿತ ಮಾಹಿತಿಯನ್ನು ಆಧರಿಸಿ, ವಿಜಯಪುರದ ಇಂಡಸ್ಟ್ರೀಯಲ್ ಏರಿಯಾ, ಕೆ.ಐ.ಎ.ಡಿ.ಬಿ ಹತ್ತಿರ ಆರೋಪಿತನಾದ ನಯೀಮ ಸಿರಾಜ್ ಶಾಮಣ್ಣವರ ಸಾ:ಅಹಿರಸಂಗ ತಾ: ಇಂಡಿ ಹಾಲಿ ವಾಸ: ಹವೇಲಿ ಗಲ್ಲಿ, ವಿಜಯಪುರ ಈತನಿಗೆ ವಶಕ್ಕೆ ಪಡೆದು ಆತನ ಹತ್ತಿರ ಅನಧೀಕೃತವಾಗಿ ಇಟ್ಟುಕೊಂಡಿದ್ದ 01 ಕಂಟ್ರಿ ಪಿಸ್ತೂಲ್ ಹಾಗೂ 01 ಸಜೀವ ಗುಂಡು ಜಪ್ತ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಎಪಿಎಮ್‌ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ವಿಚಾರಣೆ ಮಾಡಿದಾಗ ಇನ್ನೂ ಇಬ್ಬರಿಗೆ ಕಂಟ್ರಿ ಪಿಸ್ತೂಲ್‌ಗಳನ್ನು ಪೂರೈಸಿರುವುದಾಗಿ ಮಾಹಿತಿ ಸಿಕ್ಕಿತ್ತು. ಮಾ.೧೨ರಂದು ಇನ್ನಿಬ್ಬರು ಆರೋಪಿತರಾದ ನಿಹಾಲ @ ನೇಹಾಲ್ ಮಹಿಬೂಬಸಾಬ ತಾಂಬೋಳಿ, 25 ವರ್ಷ, ಸಾ: ಭವಾನಿ ನಗರ, ವಿಜಯಪುರ ಈತನಿಗೆ ವಶಕ್ಕೆ ಪಡೆದು ಆತನ ಹತ್ತಿರ 03 ಕಂಟ್ರಿ ಪಿಸ್ತೂಲ್ ಹಾಗೂ 04 ಸಜೀವ ಗುಂಡು ಹಾಗೂ ಸಿದ್ದು @ ಸಿದ್ಯಾ ಗುರುಪಾದ ಮೂಡಲಗಿ @ ಮೂಡಂಗಿ, 29 ವರ್ಷ ಸಾ: ಯೋಗಾಪೂರ ಕಾಲೋನಿ ವಿಜಯಪುರ ಇವನನ್ನು ವಶಕ್ಕೆ ಪಡೆದು ಆತನ ಹತ್ತಿರ 01 ಕಂಟ್ರಿ ಪಿಸ್ತೂಲ್ ಹಾಗೂ 01 ಸಜೀವ ಗುಂಡು ವಶಪಡಿಸಿಕೊಳ್ಳಲಾಯಿತು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಪೊಲೀಸರ ಕರ್ತವ್ಯಕ್ಕೆ ಎಸ್ಪಿ ಶ್ಲಾಘನೆ
ಈ ಪ್ರಕರಣದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳಾದ ಮಲ್ಲಯ್ಯ ಮಠಪತಿ, ಸಿಪಿಐ ಗೋಲಗುಂಬಜ್ ವೃತ್ತ, ಶ್ರೀಮತಿ ಜ್ಯೋತಿ ಖೋತ, ಪಿಎಸ್‌ಐ ಎಪಿಎಮ್.ಸಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಜನರಾದ ಆಸಿಫ್.ಎ. ಗುಡಗುಂಟಿ, ಸಂತೋಷ ಮೇಲಸಕ್ಕರಿ, ರಮೇಶ ಜಾಧವ, ಎಸ್.ಎ.ಬನಪಟ್ಟಿ, ಆಸೀಫ್ ಲಷ್ಕರಿ, ಯೋಗೇಶ ಮಾಳಿ, ಭೀಮಾಶಂಕರ ಮಖಣಾಪೂರ, ಆನಂದ ಹಿರೇಕುರಬರ. ಎಸ್.ಎ.ಪೂಜಾರಿ, ಎಸ್.ಬಿ.ತೆಲಗಾಂವ, ಎಸ್.ಎಸ್.ಬಿರಾದಾರ, ಶ್ರೀಕಾಂತ ಪೂಜಾರಿ ಇವರುಗಳ ಕರ್ತವ್ಯವನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ಶ್ಲಾಘಿಸಿದ್ದಾರೆ.

