Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಸಂಶೋಧನೆ ಸುಳಿಯಲ್ಲಿ ಬಹುರೂಪಿ ಚೌಡಯ್ಯ ಐಕ್ಯ ಸ್ಥಳ
ವಿಶೇಷ ಲೇಖನ

ಸಂಶೋಧನೆ ಸುಳಿಯಲ್ಲಿ ಬಹುರೂಪಿ ಚೌಡಯ್ಯ ಐಕ್ಯ ಸ್ಥಳ

By Updated:No Comments5 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನಡಾ.ಶಶಿಕಾಂತ ಪಟ್ಚಣರಾಮದುರ್ಗಮೊ:9552002338

ಉದಯರಶ್ಮಿ ದಿನಪತ್ರಿಕೆ

12 ನೇ ಶತಮಾನದಲ್ಲಿ ಕಲ್ಯಾಣವು ಅನೇಕ ಶರಣರ ಸಾಧಕರ ಕೇಂದ್ರಯಾಗಿತ್ತು . ಹಲವು ವೃತ್ತಿಯ ಜನರು ಕಲ್ಯಾಣಕ್ಕೆ ಬಂದು ತಮ್ಮ ಕಾಯಕ ನಡೆಸಿಕೊಂಡು ಸಮತೆ ಶಾಂತಿ ಪ್ರೀತಿಯ ಸಹ ಬಾಳ್ವೆ ನಡೆಸಿದರು. ವರ್ಗ ವರ್ಣ ವಿರುದ್ಧ ಸಮರ ಸಾರಿದ ಶರಣರು ಜಗತ್ತಿನ ಸಮತೆಯ ಶಿಲ್ಪಿಗಳು. ಇಂತಹ ಒಂದು ಅಪೂರ್ವ ಚಳುವಳಿಯಲ್ಲಿ ಒಬ್ಬ ಬಸವ ಪ್ರೇಮಿ ದಿಟ್ಟ ಶರಣ ಬಹುರೂಪಿ ಚೌಡಯ್ಯ ಬಹುರೂಪಿಯ ಕಾಯಕದ ಶ್ರೇಷ್ಠ ಕಲಾವಿದ ಅತ್ಯಂತ ಸುಂದರ ಅನುಭಾವದಿಂದ ಶರಣರ ಮನವ ಗೆದ್ದ ಧೀಮಂತ ಶರಣನು.
ಶರಣ ಬಹುರೂಪಿ ಚೌಡಯ್ಯ . ಇವನ ಹುಟ್ಟೂರು ರೇಕಳಿಕೆ ಬಾಲ್ಯದಿಂದಲೇ ಆಧ್ಯಾತ್ಮಿಕ ಮಾರ್ಗಕ್ಕೆ ಮನ ಸೋತು ವೇಷ ಭೂಷಣ ಬಹು ಪಾತ್ರಾಭಿನಯದ ಮೂಲಕ ಜನರನ್ನು ರಂಜಿಸುವ ಜೊತೆಗೆ ಅವರ ಆಪ್ತ ಮಾರ್ಗ ದರ್ಶಕನಾಗಿದ್ದನು. ಕಲ್ಯಾಣದ ಶರಣರಲ್ಲಿ ಬಹು ಮುಖ್ಯ ಪಾತ್ರ ವಹಿಸಿದ ಶರಣ ಬಹುರೂಪಿ ಚೌಡಯ್ಯ “ರೇಕಣ್ಣ ಪ್ರಿಯ ನಾಗಿನಾಥ “ಎಂಬ ಅಂಕಿತದೊಂದಿಗೆ 66 ವಚನಗಳನ್ನು ರಚಿಸಿದ್ದಾನೆ . ಇವನ ದೀಕ್ಷಾ ಗುರು ರೇಕನಾಥ ಜ್ಞಾನ ಗುರು ನಾಗಿನಾಥ. ಇವರಿಬ್ಬರ ನೆನಪಿಗೋಸ್ಕರ”ರೇಕಣ್ಣ ಪ್ರಿಯ ನಾಗಿನಾಥ “ಎಂಬ ಅಂಕಿತವನ್ನು ಬಳಸಿಕೊಂಡನು. ಈತನು ಪೂರ್ವಾಶ್ರಮದಲ್ಲಿ ನಾಥ ಪರಂಪರೆಯಿಂದ ಪ್ರಭಾವಿತನಾಗಿ ಕಲ್ಯಾಣವನ್ನೇ ತನ್ನ ಕಾರ್ಯ ಕ್ಷೇತ್ರವನ್ನಾಗಿ ಮಾಡಿಕೊಂಡವನು.


ಗಣ ಸಹಸ್ರ ನಾಮ ,ಗುರುರಾಜ ಚರಿತ್ರೆ , ವೀರಶೈವಾಮೃತ ಮಹಾಪುರಾಣ , ಭೈರವೇಶ್ವರ ಕಾವ್ಯದ ಕಥಾ ಮಣಿ ಸೂತ್ರ ರತ್ನಾಕರ , ಕೃತಿಗಳಲ್ಲಿ ಜಾನಪದ ಹಾಡು, ಹಂತಿ ಪದ ,ಲಾವಣಿ ಪದ, ಸುಗ್ಗಿ ಪದಗಳಲ್ಲಿ ಶರಣ ಬಹುರೂಪಿ ಚೌಡಯ್ಯನವರ ಉಲ್ಲೇಖ ದಾಖಲೆ ಕಾಣುತ್ತೇವೆ.ಬಹುರೂಪಿ ವೃತ್ತಿ ಈತನ ಪೂರ್ವಜರಿಂದ ಬಂದ ಬಳುವಳಿ. ಆದರೆ ಶರಣ ಬಹುರೂಪಿ ಚೌಡಯ್ಯ ಈ ಸುಂದರ ಕಲೆಯನ್ನು ಬಳಸಿಕೊಂಡ ಅಪ್ಪ ಬಸವಣ್ಣನವರ ಕಾಯಕ ದಾಸೋಹ ಸಿದ್ಧಾಂತದಲ್ಲಿ ನಂಬಿಕೆ ಶೃದ್ಧೆ ರೂಢಿಸಿಕೊಂಡು ಶರಣರ ಆಚರಣೆ ವೃತ ನೇಮಗಳು ಹೇಗಿರಬೇಕು ಎಂದು ಬೇರೆ ಬೇರೆ ಪಾತ್ರಗಳಲ್ಲಿ ರಸವತ್ತಾಗಿ ಹಾಸ್ಯ , ಶೃಂಗಾರ , ವಿಡಂಬನೆ ಟೀಕೆಗಳ ಮೂಲಕ ಜನರನ್ನು ಎಚ್ಚರಿಸುವ ದಿಟ್ಟ ಗಣಾಚಾರ ಈತನದಾಗಿತ್ತು..
ಗುರು ಎನ್ನ ಮುಟ್ಟಿ ಗುರು ಶುದ್ಧವಾದನಯ್ಯ.
ಲಿಂಗ ಎನ್ನ ಮುಟ್ಟಿ ಲಿಂಗ ಶುದ್ಧವಾಯಿತ್ತಯ್ಯ.
ಜಂಗಮ ಎನ್ನ ಮುಟ್ಟಿ ಜಂಗಮ ಶುದ್ಧವಾದನಯ್ಯ.
ಪ್ರಸಾದ ಎನ್ನ ಮುಟ್ಟಿ ಪ್ರಸಾದ ಶುದ್ಧವಾಯಿತ್ತಯ್ಯ.
ಈ ಚತುರ್ವಿಧ ಎನ್ನ ಮುಟ್ಟಿ ಶುದ್ಧವಾಯಿತ್ತು ಕಾಣಾ
ರೇಕಣ್ಣಪ್ರಿಯ ನಾಗಿನಾಥಾ. ಸಮಗ್ರ ವಚನ ಸಂಪುಟ: 8 ವಚನದ ಸಂಖ್ಯೆ: 151
ಪ್ರಾಯಶ ತಾನಿಲ್ಲದೆ ಗುರುವಿನ ಅಸ್ತಿತ್ವವೇ ಇಲ್ಲ , ತನ್ನತನದಿಂದ ಗುರುವು ಶುದ್ಧನಾಗುವನು ಎಂದು ಹೇಳುವ ದಿಟ್ಟತನ ಅಮೋಘವಾದದ್ದು. ಲಿಂಗ ಎನ್ನ ಮುಟ್ಟಿ ಲಿಂಗ ಶುದ್ಧವಾಯಿತ್ತಯ್ಯ. ಲಿಂಗವೆಂಬ ಸಮಷ್ಟಿ ಭಾವವು ಸಾಧಕನ ಕುರುಹಿಗೆ ತಲುಪಿ ತನ್ಮೂಲಕ ಲಿಂಗವು ಶುದ್ಧವಾಯಿತು. ಜಂಗಮ ಅಂದರೆ ಸಮಾಜವು ಶರಣನ ವ್ಯಕ್ತಿ ತತ್ವ ನಿಷ್ಠೆಯಿಂದ ಜಂಗಮವು ಶುದ್ಧೀಕರಣಗೊಂಡಿತ್ತು. ಪ್ರಸನ್ನ ಪ್ರಸಾದ ಭಾವವು ತನ್ನ ಆತ್ಮಕ್ಕೆ ಚುಳುಕಾಗಿ ಪ್ರಸಾದವು ಶುದ್ಧೀಕರಣಗೊಂಡಿತ್ತು. ಈ ಚತುರ್ವಿಧ ಎನ್ನ ಮುಟ್ಟಿ ಶುದ್ಧವಾಯಿತ್ತು ಕಾಣಾ ರೇಕಣ್ಣಪ್ರಿಯ ನಾಗಿನಾಥಾ. ಹೀಗೆ ಸತ್ಯ ಶುದ್ಧ ಕಾಯಕದಲ್ಲಿದ್ದವನ ಭಕ್ತಿಯ ಸ್ಪರ್ಶದಿಂದ ಗುರು ಲಿಂಗ ಜಂಗಮ ಪ್ರಸಾದ ಗಳು ಶುದ್ಧಗೊಂಡವು ಎಂದು ಅಭಿಮಾನ ವಿಧೇಯತನದಿಂದ ಆತ್ಮ ವಿಶ್ವಾಸಕ್ಕೆ ದಾರಿಯಾಗುತ್ತಾನೆ ಬಹುರೂಪಿ ಚೌಡಯ್ಯ.
ಬಹುರೂಪಿ ಚೌಡಯ್ಯನವರ ವಚನಗಳಲ್ಲಿ ಗಣಾಚಾರ ಲಿಂಗಾಯತ ಧರ್ಮ ತತ್ವದ ನಿಷ್ಠತೆ , ಲಿಂಗಾಂಗ ಸಾಮರಸ್ಯ ,ಜಂಗಮ ನಿಷ್ಠೆ ,ನಿಷ್ಟುರ ನೇರ ನುಡಿಗಳು, ಬಹಳಷ್ಟು ವಚನಗಳಲ್ಲಿ ಬೆಡಗಿನ ವೈಭವವನ್ನು ಕಾಣಬಹುದು. ಬಹುತೇಕ ವಚನಗಳಲ್ಲಿ ಕೊನೆಗೆ ರೇಕಣ್ಣಪ್ರಿಯ ನಾಗಿನಾಥಾ ಬಸವನಿಂದ ಬದುಕಿತೀ ಲೋಕವೆಲ್ಲಾ ಎಂದು ಕೊನೆಗೊಳಿಸಿ ತನ್ನ ಭಕ್ತಿ ಭಾವವನ್ನು ವ್ಯಕ್ತ ಪಡಿಸುತ್ತಾನೆ.
ಗಾರುಡಿಗನ ವಿಷವಡರಬಲ್ಲುದೆ ?
ಸೂರ್ಯನ ಮಂಜು ಮುಸುಕಬಲ್ಲುದೆ ?
ಗಾಳಿಯ ಮೊಟ್ಟೆಯ ಕಟ್ಟಬಹುದೆ ?
ಅಗ್ನಿಯ ಕೈಯಿಂದ ಆಕಾಶ ಬೇಯಬಲ್ಲುದೆ ?
ನಿಮ್ಮನರಿದ ನಿಜಯೋಗಿಗೆ ಕರ್ಮಪಾಶವೆಲ್ಲಿಯದೊ
ರೇಕಣ್ಣಪ್ರಿಯ ನಾಗಿನಾಥ .
ಹಾವನ್ನು ಆಡಿಸುವವ ಗಾರುಡಿಗನಿಗೆ ಹಾವು ಕಚ್ಚ ಬಲ್ಲುದೇ? ಮಂಜು ಎಷ್ಟೇ ದಟ್ಟವಾಗಿದ್ದಾರೂ ಸೂರ್ಯನಿಗೆ ಮುಸುಕಾಗಬಲ್ಲುದೆ ಗಾಳಿಯನ್ನು ಮೂಟೆಯಲ್ಲಿ ಕಟ್ಟಿ ಹಿಡಿಯಬಹುದೇ? ಅಗ್ನಿಯಿಂದ ಆಕಾಶವನ್ನು ಬೇಯಿಸಬಲ್ಲುದೆ. ನಿಮ್ಮನರಿದ ನಿಜಯೋಗಿಗೆ ಕರ್ಮಪಾಶವೆಲ್ಲಿಯದೊ
ರೇಕಣ್ಣಪ್ರಿಯ ನಾಗಿನಾಥ .ಇಲ್ಲಿ ಸಮಷ್ಟಿಯನ್ನು ಅರಿಯುವ ಪ್ರಜ್ಞೆ ಇದ್ದರೆ ಅವನಿಗೆ ಕರ್ಮ ಪಾಶವು ಕಟ್ಟಿ ಹಾಕಲು ಸಾಧ್ಯವಿಲ್ಲ.
ಬಹುರೂಪಿ ಚೌಡಯ್ಯನವರ ವಚನಗಳಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮ, ಮಡಿವಾಳಮಾಚಿದೇವ ಮುಂತಾದವರನ್ನು ಪ್ರಾಸಂಗಿಕವಾಗಿ ನೆನೆದಿರುವುದನ್ನು ಕಾಣಬಹುದು. ಬಹುರೂಪಿ ಚೌಡಯ್ಯನವರ ವಚನಗಳಲ್ಲಿ ಬೆಡಗು ಇದ್ದರೂ ಅವುಗಳಲ್ಲಿನ ಸರಳತೆ ಸೊಬಗು ಅಪಾರವಾಗಿದೆ.
ಕೈಯ ಮರದು ಕಾದುವ ಅಂಕವದೇನೊ ?
ಭಾವ ಮರದು ನೋಡುವ ನೋಟವದೇನೊ ?
ಭಯವ ಮರದು ಮಾಡುವ ಭಕ್ತಿಯದೇನೊ ?
ರೇಕಣ್ಣಪ್ರಿಯ ನಾಗಿನಾಥನಲ್ಲಿ ಗುರುವ ಮರದು
ಲಿಂಗವನೊಲಿಸಿದೆನೆಂದಡೆ ಆ ಉಭಯ ಗುರುಲಿಂಗವೆರಡೂ ಇಲ್ಲ.
ಭಕ್ತನಾದವನು ಹೇಗಿರಬೇಕು ಎನ್ನುವ ಉದಾಹರಣೆಯನ್ನು ಹೀಗೆ ಹೇಳುತ್ತಾನೆ. ಖಡ್ಗವಿಲ್ಲದೆ ಕಾದಾಡುವ ಸೈನಿಕನು ದಡ್ಡತನ. ಯಾವುದೇ ಭಾವಯಿಲ್ಲದೆ ನೋಡುವ ಶೂನ್ಯ ನೋಟದ ಗಮ್ಯತೆ ಪ್ರಯೋಜನ ,ಭಯ ಶೃದ್ಧೆ ನಿಷ್ಠೆಯಿಲ್ಲದೆ ಮಾಡುವ ಸೇವೆ ಭಕ್ತಿ. ರೇಕಣ್ಣ ಪ್ರಿಯ ನಾಗನಾಥನಲ್ಲಿ ಅರಿವೆಂಬ ಗುರುವ ಮರೆತು ಲಿಂಗವನೊಲಿಸುವೆಡೆ ಅಲ್ಲಿ ಗುರು ಲಿಂಗಗಳ ಅಸ್ತಿತ್ವವೇ ಇಲ್ಲ ಎಂದು ದಿಟ್ಟವಾಗಿ ಹೇಳಿದ್ದಾನೆ. ವಚನಗಳಲ್ಲಿ ದಿಟ್ಟತನ ಸಾಮಾಜಿಕ ಕಳಕಳಿಯನ್ನು ಕಾಣಬಹುದು .
ಅಲ್ಲಿಯ ಬಹುರೂಪ ಇಲ್ಲಿಗೆ ಬಂದಿತ್ತು.
ಇಲ್ಲಿಯ ಬಹುರೂಪ ಎಲ್ಲಿ ಅಡಗಿತ್ತೋ?
ಎನ್ನ ಬಹುರೂಪ ಬಲ್ಲವರಾರೋ ?
ನಾದ ಹರಿದು ಸ್ವರವು ಸೂಸಿದ ಬಳಿಕ
ಈ ಬಹುರೂಪ ಬಲ್ಲವರಾರೋ ?
ರೇಕಣ್ಣಪ್ರಿಯ ನಾಗಿನಾಥನಲ್ಲಿ
ಬಸವಣ್ಣನಿಂದ ಬದುಕಿತೀ ಲೋಕವೆಲ್ಲ.
ಬಹುರೂಪಿ ಚೌಡಯ್ಯನು ರೇಕಳಿಕೆ ಗ್ರಾಮದವನು ಅವರ ಕುಲ ಕಸುಬು ಬಹುರೂಪದ ಪಾತ್ರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಜಾನಪದ ಕಲೆಯ ವೃತ್ತಿ. ಇದನ್ನು ಅತ್ಯಂತ ಸೂಕ್ಷ್ಮವಾಗಿ ಹೀಗೆ ಹೇಳಿದ್ದಾನೆ.ಅಲ್ಲಿಯ ಬಹುರೂಪ ಇಲ್ಲಿಗೆ ಬಂದಿತ್ತು. ಅಂದರೆ ಅವನ ಪೂರ್ವಾಶ್ರಮದ ಕುಲ ಕಸಬು ಕಲ್ಯಾಣಕ್ಕೆ ಬಂದಿತ್ತು. ಕಲ್ಯಾಣಕ್ಕೆ ಕುಲ ಕಸಬು ಬಂದ ಮೇಲೆ ಕಾಯಕದ ಜೊತೆಗೆ ಅನುಭಾವ ದಾಸೋಹ ಮಾಡಿದ ಶರಣ ಬಹುರೂಪಿ ಚೌಡಯ್ಯನು ಇಲ್ಲಿನ
ಬಹುರೂಪತನವು ಎತ್ತ ಹೋಯಿತು ಎಂಬ ಅರಿವಿಲ್ಲ ಲೆಕ್ಕವಿಲ್ಲವೆಂದಿದ್ದಾನೆ. ತಾನು ವ್ಯಕ್ತಿಗತ ಮಾಡಿದ ಕ್ರಿಯೆಯ ಬಹುರೂಪದ ಲೆಕ್ಕ ಬಲ್ಲವರಾರು. ತನ್ನನ್ನು ಪ್ರಶ್ನಿಸಬೇಕೆನ್ನುವ ಅಭಿಲಾಷೆ ಚೌಡಯ್ಯನದು. ಉತ್ತಮ ಆತ್ಮ ನಿವೇದನೆ ವಿಮರ್ಶೆಗೆ ಒಳಪಡುವ ಸುಂದರ ವಿಶ್ಲೇಷಣೆಯನ್ನು ವಚನಗಳಲ್ಲಿ ಕಾಣಬಹುದು.
ನಾದ ಹರಿದು ಸ್ವರವು ಸೂಸಿದ ಬಳಿಕ ಮನುಷ್ಯನು ಅಸ್ತಂಗತನಾದ ಮೇಲೆ ತೀರಿದ ಮೇಲೆ ಆತನ ಬಹುರೂಪತನವನ್ನು ಯಾರು ಅಳೆಯುವರು ಎಂದು ಕೇಳಿದ್ದಾನೆ, ನಾದ ಬಿಂದು ಕಳಾತೀತವಾದ ಈ ಜಗತ್ತು ಬಸವಣ್ಣನಿಂದ ಬದುಕಿತೀ ಲೋಕವೆಲ್ಲ ಎಂದು ಹೆಮ್ಮೆಯಿಂದ ಬಸವಣ್ಣನವರ ಬಗೆಗಿನ ಅಪಾರ ಪೀತಿ ಗೌರವ ಚೌಡಯ್ಯ ಹೊರ ಹಾಕಿದ್ದಾನೆ.
ಕಲ್ಯಾಣ ಕ್ರಾಂತಿಯ ನಂತರ ರಕ್ತ ಸಿಕ್ತ ಹೋರಾಟದಲ್ಲಿ ಚೆನ್ನ ಬಸವಣ್ಣನವರ ನೇತೃತ್ವದಲ್ಲಿ ಮಡಿವಾಳ ಮಾಚಿದೇವರು ಕಕ್ಕ್ಯಯ್ಯ ಚೌಡಯ್ಯನವರು ಶರಣ ಸೇನೆಯನ್ನು ಹುರುದುಂಬಿಸಿ ಶರಣರ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಸೋವಿದೇವನ ಸೈನಿಕರಿಗೆ ಪ್ರತಿರೋಧ ತೋರಿಸುತ್ತಾ. ಮಾದನ ಹಿಪ್ಪರಗಿ ಮಾರ್ಗವಾಗಿ ತಮ್ಮ ಸಂಘರ್ಷ ಮುಂದುವರೆಸುತ್ತಾರೆ. ಇಂತಹ ಘನ ಸಮರದಲ್ಲಿ ಬಹುರೂಪಿ ಚೌಡಯ್ಯ ಭಾಗವಿಹಿಸಿ ಹೋರಾಡಿ ವಚನಗಳನ್ನು ಕಾಪಾಡುವಲ್ಲಿ ಯಶವ ಕಂಡನು.ಇಂತಹ ಹೋರಾಟ ಸಂಘರ್ಷ ಸಮರದಲಿ ದಾರಿ ಮಧ್ಯೆ ಹುಬ್ಬಳ್ಳಿಗೆ 10 ಕಿಲೋ ಮೀಟರ್ ಅಂತರದಲ್ಲಿರುವ ಭೈರಿ ದೇವರ ಕೊಪ್ಪವು (ಬಹು ರೂಪಿ ದೇವರ ಕೊಪ್ಪ) ಅಲ್ಲಿ ತನ್ನ ಕಾಯಕದ ಸಹಾಯಕರೊಂದಿಗೆ ಹಲವು ವರ್ಷಗಳಿದ್ದು ಅಲ್ಲಿಯೇ ಐಕ್ಯರಾಗುತ್ತಾರೆ.
ಭರಿದೇವರಕೊಪ್ಪದಲ್ಲಿ ಬಹುರೂಪಿ ಚೌಡಯ್ಯನವರು ಐಕರಾಗಿದ್ದರ ಬಗ್ಗೆ ಅನೇಕ ಐತಿಹ್ಯಗಳಿವೆ. ಅಲ್ಲಿಂದ ಕೆಲ ಅಂತರದಲ್ಲಿ ಸಾವಿರಾರು ಶರಣರು
ಕೆಲ ಕಾಲ ಉಳಿದುಕೊಂಡರು ಕಲ್ಯಾಣದ ನೆನೆಪಿಗೊಸ್ಕರ ಕೆರೆ ಕಟ್ಟಿಕೊಂಡು ಅಂದು ಶರಣರು ಉಳಿದ ಕಲ್ಯಾಣವೇ ಇಂದಿನ ಉಣಕಲ್ಲ. ಅನೇಕ ದಿನಗಳಿಂದ ನನ್ನನ್ನು ಕಾಡುತ್ತಿರುವ ಸಮಾಧಿಯ ಶೋಧನೆಗೆ ಸಹಾಯಕ್ಕೆ ಬಂದವರು ಶ್ರೀ ಬಿ ಜಿ ಹೊಸಗೌಡರು ನವನಗರದಲ್ಲಿ ವಾಸವಾಗಿರುವ ಅಪ್ಪಟ ಬಸವ ಭಕ್ತರು. ಅವರನ್ನು ಹಲವು ಬಾರಿ ಯೋಚಿಸಿದಾಗ ಅವರು ನನ್ನಅಲ್ಲಿಗೆ ಕರೆದುಕೊಂಡು ಹೋದರು. ಭೈರಿದೇವರ ಕೊಪ್ಪದ ಊರೊಳಗೆ ಒಂದು ಸುಂದರ ಶಾಂತವಾದ ಗವಿಯು ಕಂಡು ಬಂತು.ಅಲ್ಲಿರುವ ಅನೇಕರನ್ನು ಮತ್ತು ಪೂಜಾರಿಗಳನ್ನು ಪ್ರಶ್ನಿಸಿದಾಗ ಅವರು ಇದು ಹನ್ನೆರಡನೆಯ ಶತಮಾನದ ಶರಣರೊಬ್ಬರ ಸಮಾಧಿಯೆಂದು ಹೇಳಿದರು. ಅಲ್ಪ ಸ್ವಲ್ಪ ಓದಿದ ಅವರಿಗೆ ಇತಿಹಾಸ ಚರಿತ್ರೆಯ ಮಾಹಿತಿ ಇರಲಿಲ್ಲ.
ಬಸವ ಕಲ್ಯಾಣದ ಮಾದರಿಯಲ್ಲಿನ ಅರುಹಿನ ಮನೆ ಒಳಗೆ ಇನ್ನೊಂದು ಪುಟ್ಟ ಗುಹೆ. ಗುಡಿಯ ಮುಂಭಾಗದಲ್ಲಿರುವ ಒಳಕಲ್ಲಿನ ರೂಪದ ಈಶ್ವರ ಲಿಂಗವು (ರೇಕನಾಥ) ಹಾಗು ನಾಗ ಪ್ರತಿಮೆ (ನಾಗಿನಾಥ) ರೈಲ್ವೆ ಹಳಿಗಳನ್ನು ದಾಟಿ ಹೋದಾಗ ಅಲ್ಲಿಯೂ ಮೂರು ಅಜ್ಞಾತ ಶರಣರ ಸಮಾಧಿಗಳು ಕಂಡು ಬಂದವು. ಇವು ಬಹುರೂಪಿ ಚೌಡಯ್ಯನವರ ಸಹಚರರ ಸಮಾಧಿಗಳಿರಬಹುದು.
ನಮಗೆ ಇದು ಬಹುರೂಪಿ ಚೌಡಯ್ಯನವರ ಸಮಾಧಿ ಎನ್ನಲು ಇನ್ನೊಂದು ಪ್ರಬಲ ಸಾಕ್ಷಿ ಮಾಹಿತಿ ಎಂದರೆ ಭೈರಿದೇವರಕೊಪ್ಪದಲ್ಲಿ ಬಹುರೂಪಿ ಚೌಡಯ್ಯನವರ ಸಮಾಧಿ ಬಳಿ ಕಾಡ ಸಿದ್ಧೇಶ್ವರರ ಫೋಟೋ ಮತ್ತು ಕಟ್ಟಿಗೆಯ ದಂಡ ಕಂಡು ಬಂತು. ಕ್ರಿಶ 1725 ರಲ್ಲಿ ಬರುವ ಸಿದ್ಧ ಪರಂಪರೆಯ ಕಾಡ ಸಿದ್ಧೇಶ್ವರರು ಸುಮಾರು 500 ವಚನಗಳನ್ನು ರಚಿಸಿದ್ದಾರೆ. ಒಂದು ಪ್ರಕಾರ ಸಿದ್ಧ ಪರಂಪರೆಗೂ ನಾಥ ಪರಂಪರೆಗೂ ಸ್ವಲ್ಪ ಸಾಮ್ಯತೆ ಇದ್ದು ಅಧ್ಯಯನ ಆಶ್ರಯ ಸಾಧನೆ ಯೋಗಗಲ್ಲಿ ಸಹ ಭಾಗಿತ್ವವು ಕಂಡು ಬರುವುದು ಸಹಜ. ಕಾಡ ಸಿದ್ಧೇಶ್ವರರು ಮತ್ತು ಬಹುರೂಪಿ ಚೌಡಯ್ಯನವರ ವಚನಗಳ ಧ್ವನಿ ಆಶಯ ಸಾಮ್ಯತೆ ನೋಡಿದರೆ ಕಾಡ ಸಿದ್ಧೇಶ್ವರರು ಹನ್ನೆರಡನೆಯ ಶತಮಾನದ ಬಹುರೂಪಿ ಚೌಡಯ್ಯನವರಿಂದ ಪ್ರಭಾವಿತಗೊಂಡಿದ್ದರು ಎಂದು ತಿಳಿದು ಬರುತ್ತದೆ.
ಅಷ್ಟೇ ಅಲ್ಲದೆ ಹದಿನಾರನೆಯ ಶತಮಾನದಲ್ಲಿ ಪರಿಷ್ಕರಣೆಗೊಂಡ ವಚನಗಳಲ್ಲಿನ ವೀರಶೈವ ಪದ ಬಳಕೆಯಾಗಿದ್ದನ್ನು ನೋಡಿದರೆ ಮತ್ತು ಬಹುರೂಪಿ ಚೌಡಯ್ಯನವರ ಒಂದೆರಡು ವಚನಗಳಲ್ಲಿ ವೀರಶೈವ ಪದ ಬಳಕೆಯಾಗಿದ್ದನ್ನು ಕಂಡರೆ ಕಾಡಶಿದ್ದೇಶ್ವರ ಶರಣರು ತಮ್ಮ ವಚನಗಳ ಜೊತೆಗೆ ಬಹುರೂಪಿ ಚೌಡಯ್ಯನವರ ವಚನಗಳನ್ನು ಪಾಠಾಂತರ ಮಾಡಿರುವ ಸಾಧ್ಯತೆ ಇದೆ,ಹೀಗಾಗಿ ಈ ಗವಿಯಲ್ಲಿರುವ ಸಮಾಧಿಯು ಹನ್ನೆರಡನೆಯ ಶತಮಾನದ ಬಹುರೂಪಿ ಚೌಡಯ್ಯನವರ ಸಮಾಧಿ ಎಂದು ಹೇಳಲು ಹೆಚ್ಚು ಪುಷ್ಠಿ ಸಿಗುತ್ತದೆ.
ಶರಣ ಸಮಾಧಿಯ ಅನ್ವೇಷಣೆಯಲ್ಲಿ ನನ್ನನ್ನು ನಾನು ಕಳೆದ ಮೂವತ್ತು ವರುಷಗಳಿಂದ ತೊಡಗಿಸುವದರಿಂದ ಶರಣರ ಸಮಾಧಿ ಕಾಲ ಇತಿಹಾಸ ಚರಿತ್ರೆಯ ಆಳವಾದ ಅಧ್ಯಯನದ ಅಗತ್ಯವಿದೆ.ನಾನು (M.PHARM Ph.D)ಔಷಧಶಾಸ್ತ್ರ ಸ್ನಾತ್ತಕೋತ್ತರ ಮತ್ತು ಪಿ ಎಚ್ ಡಿ ಪಡೆದ ಪ್ರಾಧ್ಯಾಪಕ ಆದರೆ ಬಾಲದಿಂದಲೂ ಶರಣ ತತ್ವ ಬಸವ ಪ್ರಜ್ಞೆಗೆ ಮಾರು ಹೋಗಿ ಅವರ ಚರಿತ್ರೆ ಇತಿಹಾಸ ವಚನ ನಿರ್ವಚನ,ಈಗ ಸಮಾಧಿಯ ವಿಷಯದಲ್ಲಿ ಆಸ್ಥೆ ವಹಿಸಿ ಅಧ್ಯಯನ ಮಾಡುತ್ತಿದ್ದೇನೆ .
ನನ್ನ ಅಧ್ಯಯನದಲ್ಲಿ ಬರುವ ಸಾಧ್ಯತೆ ಸಂಭಾವ್ಯತೆಗಳನ್ನು ಕೂಲಂಕುಷವಾಗಿ ಅಧ್ಯಯನಮಾಡಿ ಪರಾಮರ್ಶೆಗೆ ಒಳಪಡಿಸಿ ನಿರ್ಧರಿಸುತ್ತೇನೆ ಸಂಶೋಧನೆಗೆ ಅವಕಾಶವಿದ್ದಲ್ಲಿ ಸ್ವಾಗತಿಸುತ್ತೇನೆ. ಶರಣರ ಸಮಾಧಿಯ ಸ್ಥಳಗಳು ಒಂದು ಸುಂದರ ಯೋಜನೆ ಈ ನೆಪದಿಂದಾದರೂ ನಾವೆಲ್ಲ ಶರಣರ ಚರಿತ್ರೆಯನ್ನು ಮತ್ತೆ ಮತ್ತೆ ಮೆಲಕು ಹಾಕಲು ಅನುಕೂಲವಾಗುವುದು.
ಮುಂಬರುವ ದಿನಗಳಲ್ಲಿ ಹೀಗೆ ಅನೇಕ ಶರಣರ ಸಮಾಧಿಯ ವಿಷಯವಾಗಿ ಲೇಖನ ಬರೆಯಲು ಅತ್ಯಂತ ಪ್ರೀತಿ ಆಗ್ರಹದಿಂದ ಒತ್ತಾಯ ಮಾಡಿದ ಸಂಪಾದಕರಿಗೆ ಶರಣು.
ಓದಿ ತಾವು ಕೂಡ ಸಂಶೋಧನೆಗೆ ಕಾದಿರುವ ಶರಣರ ಸಮಾಧಿಗಳು ಅಭಿಯಾನದಲ್ಲಿ ಪಾಲ್ಗೊಂಡರೆ ನಾವು ಶರಣರಿಗೆ ಸಲ್ಲಿಸುವ ಅಲ್ಪ ಮಟ್ಟದ ಕೃತಜ್ಞತೆ ಎಂದು ನಾನು ತಿಳಿದಿದ್ದೇನೆ. ಶರಣಾರ್ಥಿ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ

ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ

ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .

ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಪಂಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಆಡಳಿತ ಬಲಪಡಿಸಲು ಕ್ರಮ
    In (ರಾಜ್ಯ ) ಜಿಲ್ಲೆ
  • ಮಾ.08 ರಂದು ಕಬ್ಬು ನುರಿಸುವ ಹಂಗಾಮ ಮುಕ್ತಾಯ ; ರೈತರಿಗೆ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ಪ್ರಕಟಣೆ
    In (ರಾಜ್ಯ ) ಜಿಲ್ಲೆ
  • ಜೇವೂರ ಗ್ರಾಮದ ಹಠಯೋಗಿ ಶ್ರೀ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಪುಣ್ಯಾರಾಧನೆ .
    In (ರಾಜ್ಯ ) ಜಿಲ್ಲೆ
  • ಅನ್ನದಾತರ ಸಮೃದ್ಧಿಯಲ್ಲಿ ನಮಗೆ ಸಂತೃಪ್ತಿ ಇದೆ
    In (ರಾಜ್ಯ ) ಜಿಲ್ಲೆ
  • ಸರ್ಕಾರದಿಂದ ಮೈಸೂರು ಜಿಲ್ಲೆಗೆ 5 ಕೋಟಿ 19 ಲಕ್ಷ ಅನುದಾನ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿಯಲ್ಲಿ ಭಾವೈಕ್ಯತಾ ದಿನಾಚರಣೆ…
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಭೀಮ ಗಾಯನ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ
    In (ರಾಜ್ಯ ) ಜಿಲ್ಲೆ
  • ಮಾ.೯ರಂದು ಪ್ರಧಾನ ಮಂತ್ರಿ ರಾಷ್ಟ್ರೀಯ ಶಿಶುಕ್ಷು ಮೇಳ
    In (ರಾಜ್ಯ ) ಜಿಲ್ಲೆ
  • ಹೋಳಿ ಹಬ್ಬ ಆಚರಣೆ: ವಿಶೇಷ ದಂಡಾಧಿಕಾರಿಗಳ ನೇಮಿಸಿ ಆದೇಶ
    In (ರಾಜ್ಯ ) ಜಿಲ್ಲೆ
  • ಬೇಡಿಕೆಗಳ ಈಡೇರಿಕೆಗೆ ಮಾ.೧೧ ರಿಂದ ೧೫ವರೆಗೆ ಮುಷ್ಕರಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.