ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ವ್ಯಾಪ್ತಿಯಲ್ಲಿ ಕಳೆದ ವರ್ಷ ಏಪ್ರಿಲ್ ೩ರಂದು ಕೊಳವೆ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದ ಮಗುವಿನ ರಕ್ಷಣಾ ಕಾರ್ಯಾಚರಣೆಗಾಗಿ ಬಳಸಲಾದ ಯಂತ್ರೋಪಕರಣ ಸೇವೆ ನೀಡಿದ ಪಿಡಬ್ಲೂಡಿ ೧ನೇ ದರ್ಜೆಯ ಗುತ್ತಿಗೆದಾರರಾದ ರಾಜಶೇಖರ ಚೋರಗಿ ಅವರಿಗೆ ಯಂತ್ರೋಪಕರಣ ಬಳಕೆ ಬಿಲ್ಲಿನ ಮೊತ್ತ ರೂ. ೪,೩೬,೩೫೭ಗಳನ್ನು ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಯಂತ್ರೋಪಕರಣ ಬಳಕೆಯ ಮೊತ್ತವನ್ನು ಗ್ರಾಮ ಪಂಚಾಯತಿಯಿಂದ ಗುತ್ತಿಗೆದಾರರಿಗೆ ಪಾವತಿಸಲಾಗಿದ್ದು, ಈ ಮೊತ್ತ ಹೊರತು ಪಡಿಸಿ ಇನ್ನಿತರೆ ರೀತಿಯ ಯಾವುದೇ ಮೊತ್ತವು ಪಾವತಿಸಲು ಬಾಕಿ ಉಳಿದಿರುವುದಿಲ್ಲ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಲ್ ಪಾವತಿಸುವ ಯಾವುದೇ ಬೇಡಿಕೆ ಇರುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

