ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗುವುದರಿಂದ ವಿಜಯಪುರ ಜಿಲ್ಲೆಯ ಸರ್ಕಾರಿ ಕಚೇರಿಗಳ ಸಮಯವನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1:30 ಗಂಟೆಯವರೆಗೆ ಮಾಡಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ವತಿಯಿಂದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಶೇಡಶಾಳ, ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದರಿಂದ ಏಪ್ರಿಲ್ 1 ರಿಂದ ಮೇ 31 ರವರೆಗೆ ಸರ್ಕಾರಿ ಕಚೇರಿಗಳ ಸಮಯವನ್ನು ಬೆಳಗ್ಗೆ 8 ಗಂಟೆಯಿಂದ ಮದ್ಯಾಹ್ನ 1:30 ಗಂಟೆಗೆ ಬದಲಾವಣೆ ಮಾಡಿ ನೌಕರರ ಮತ್ತು ಸಾರ್ವಜನಿಕರ ಆರೋಗ್ಯವನ್ನು ಕಾಪಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಕೋಶ್ಯಾಧ್ಯಕ್ಷ ಸಯ್ಯದ ಜುಬೇರ್ ಎಸ್. ಕೆರೂರ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಿವರಾಜ್ ಬಿರಾದಾರ, ರಾಜ್ಯ ಪರಿಷತ್ ಸದಸ್ಯ ವಿಜಯಕುಮಾರ್ ಹತ್ತಿ. ಗೌರವಾಧ್ಯಕ್ಷ ವಿಶ್ವನಾಥ ಬೆಳ್ಳನವರ, ಕಾರ್ಯಾಧ್ಯಕ್ಷ ಪ್ರಕಾಶ್ ಗೊಂಗಡಿ, ಹಿರಿಯ ಉಪಾಧ್ಯಕ್ಷ ರಾಜಶೇಖರ ದೈವಾಡಿ, ಗಂಗಾಧರ ಜೇವುರ, ಉಪಾಧ್ಯಕ್ಷರಾದ ಎಸ್. ಎಸ್. ತೇರದಾಳ, ಸಂತೋಷ ರಾಠೋಡ್, ಸಿದ್ದಲಿಂಗ ಹಂಚಿನಾಳ, ಕ್ರೀಡಾ ಕಾರ್ಯದರ್ಶಿ
ನಿಜು ಮೇಲಿನಕೇರಿ, ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಮಾಡಗಿ, ಸಂಘಟನಾ ಕಾರ್ಯದರ್ಶಿ ಶಿವಾನಂದ ಮಗ್ಗದ, ಚಂದ್ರಕಾಂತ ಬಿ. ಗಣೇಶ್ ಡೊಬಳೆ, ನಿರ್ದೇಶಕ ಸದಾನಂದ ಬಡಿಗೇರ್, ವಿಜಯಕುಮಾರ್ ಬಿಸನಾಳ, ವಿಶ್ವನಾಥ್ ಮೈತ್ರಿ, ಎಂ. ಎ. ಶೇಖ, ವಿಜಯಾನಂದ ಮುದ್ದೇಬಿಹಾಳ ಇತರರಿದ್ದರು.

