ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಹಿರೇಮಠದಲ್ಲಿ ಮಾ.12 ರಂದು ಆಚರಿಸಲ್ಪಡುವ ಜಗದ್ಗುರು ರೇಣುಕಾಚಾರ್ಯ ಜಯಂತಿಯಂಗವಾಗಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ಜಂಗಮ ಸಮಾಜ ಬಾಂಧವರ ಸಭೆ ಈಚೆಗೆ ಜರುಗಿತು.
ಸಭೆಯಲ್ಲಿ ಮಾ.12 ರಂದು ಜಗದ್ಗುರು ರೇಣುಕಾಚಾರ್ಯ ಜಯಂತಿದಂದು ಸ್ಥಳೀಯ ಪೂಜ್ಯರ ಸಾನಿಧ್ಯದಲ್ಲಿ ಬೆಳಗ್ಗೆ ಜಗದ್ಗುರು ರೇಣುಕಾಚಾರ್ಯ ಮೂರ್ತಿಗೆ ರುದ್ರಾಭಿಷೇಕ, ಅಷ್ಟೋತ್ತರ ಬಿಲ್ವಾರ್ಚನೆ, ,ಮಹಾಮಂಗಳಾರತಿ ನೆರವೇರಿಸಲು ನಿರ್ಧರಿಸಲಾಯಿತು.
ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಜರುಗಿಸಿದ ನಂತರ ಹಿರೇಮಠದಲ್ಲಿ ಕಾರ್ಯಕ್ರಮ ಜರುಗಿಸುವುದು.
ಈ ಕಾರ್ಯಕ್ರಮದ ಉದ್ಘಾಟನೆಗೆ ಸಚಿವ ಶಿವಾನಂದ ಪಾಟೀಲರನ್ನು ಸೇರಿದಂತೆ ಗಣ್ಯರನ್ನು ಆಹ್ವಾನಿಸುವದು. ಜಯಂತಿಯಂಗವಾಗಿ ಜಂಗಮ ವಟುಗಳಿಗೆ ಉಚಿತವಾಗಿ ಅಯ್ಯಾಚಾರ ಮಾಡಲಾಗುವದು. ಆಸಕ್ತರು ಹಿರೇಮಠಕ್ಕೆ ಬಂದು ತಮ್ಮ ಹೆಸರನ್ನು ನೋಂದಾಯಿಸುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಜಂಗಮ ಸಮಾಜದ ತಾಲೂಕಾಧ್ಯಕ್ಷ ರುದ್ರಮುನಿ ಸಾರಂಗಮಠ, ಮುಖಂಡರಾದ ಮುದಕಯ್ಯ ಕಾಳಹಸ್ತೇಶ್ವರಮಠ, ಶಿವಲಿಂಗಯ್ಯ ಹಿರೇಮಠ, ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಗುರುಸಿದ್ದಯ್ಯ ಹಿರೇಮಠ, ರವಿ ಹಿರೇಮಠ, ರುದ್ರಯ್ಯ ಹಿರೇಮಠ, ಬಸಯ್ಯ ಮಠ, ಶಶಿಕಾಂತ ಸ್ಥಾವರಮಠ, ಸಚೀನ ಹಿರೇಮಠ, ಶ್ರೀಶೈಲ ಕರವೀರಮಠ ಸೇರಿದಂತೆ ಇತರರು ಇದ್ದರು.

