Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 25, 2026

ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯಿಂದ ಭಯ ನಿವಾರಣೆ

ನೂತನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಹಿಳೆಯರು ಸ್ವಾವಲಂಬಿಯಾಗಿ ಬದುಕು ರೂಪಿಸಿಕೊಳ್ಳಿ :ಉಮಾಶ್ರೀ
(ರಾಜ್ಯ ) ಜಿಲ್ಲೆ

ಮಹಿಳೆಯರು ಸ್ವಾವಲಂಬಿಯಾಗಿ ಬದುಕು ರೂಪಿಸಿಕೊಳ್ಳಿ :ಉಮಾಶ್ರೀ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಹಾಗೂ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ ಬೆಂಗಳೂರಿನ ಸಹಯೋಗದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಛಾಯಾಗ್ರಹಣದ ಕ್ಷೇತ್ರದಲ್ಲಿರುವ ಮಹಿಳಾ ಸಾಧಕಿಯರಿಗೆ ಗೌರವ ಸನ್ಮಾನ ಹಾಗೂ ಏಪ್ರೀಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ೨೦೨೫ರ ೧೧ನೇ ಡಿಜಿ ಇಮೇಜ್ ವಸ್ತು ಪ್ರದರ್ಶನದ ಭಿತ್ತಿಪತ್ರ ಅನಾವರಣ ಕಾರ್ಯಕ್ರಮ ಈಚೆಗೆ ಉದ್ಘಾಟಿಸಲಾಯಿತು.
ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ನಡೆದ ಈ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಉಮಾಶ್ರಿ ಕೋಳಿ ಮಾತನಾಡಿ, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸ್ವಾವಲಂಭಿಯಾಗಿ ಬದುಕು ರೂಪಿಸಿಕೊಳ್ಳಬೇಕು. ಇವತ್ತು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಠವಾದ ಛಾಪು ಮೂಡಿಸುತ್ತ ಯಶಸ್ವಿಯಾಗಿ ಜೀವನ ಸಾಗಿಸುತಿದ್ದಾರೆ. ಛಾಯಾಗ್ರಹಣ ಕ್ಷೇತ್ರದಲ್ಲೂ ಮದುವೇ ಮನೆ ಸಹಿತ ವನ್ಯ ಜೀವಿ ಹವ್ಯಾಸಿ ಛಾಯಾಗ್ರಹಣ, ಡಿಸೈನಿಂಗ್, ವಿಡಿಯೊ ಎಡಿಟಿಂಗ್ ಮಾಡುವ ಎಷ್ಟೋ ಮಹಿಳೆಯರು ನಮ್ಮ ನಾಡಿನಲ್ಲಿದ್ದಾರೆ. ಅವರಿಗೆ ಸರಿಯಾದ ಅವಕಾಶ ಸಿಕ್ಕರೆ ಅವರು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಾಡಿಗೆ ಕೀರ್ತಿ ತರುತ್ತಾರೆ ಎಂದರು.
ಸರಕಾರ ಛಾಯಾಗ್ರಾಹಕ ವೃತ್ತಿಮಾಡುವವರನ್ನು ಕಾರ್ಮಿಕರ ಇಲಾಖೆಯಲ್ಲಿ ಸೇರ್ಪಡೆ ಮಾಡಿ ಅವರಿಗೂ ಎಲ್ಲ ರೀತಿಯ ಸಹಕಾರ ಸಿಗುವಂತೆ ಮಾಡಿದೆ. ಕಾರಣ ಎಲ್ಲರೂ ಕಾರ್ಮಿಕ ಇಲಾಖೆಯಲ್ಲಿ ನೋದಣಿ ಮಾಡಿಸಿ ಇಲಾಖೆಯ ಸವಲತ್ತು ಪಡೆಯಲು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಂಗಳೂರಿನ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ರಾಜ್ಯಾಧ್ಯಕ್ಷ ಎಚ್. ಎಸ್. ನಾಗೇಶ ಮಾತನಾಡುತ್ತ, ಉತ್ತರ ಕರ್ನಾಟಕದ ಭಾಗಗಳಲ್ಲಿ ಅತಿ ಹೆಚ್ಚು ಛಾಯಾಚಿತ್ರಗ್ರಾಹಕರು ಛಾಯಾಗ್ರಹಣ ಮಾಡಿ ಜೀವನ ರೂಪಿಸಿಕೊಂಡ ಸಾವಿರಾರು ಜನರಿದ್ದಾರೆ. ವಿಜಯಪುರದಲ್ಲಿಯೂ ಅಂತರ ರಾಷ್ಟ್ರೀಯ ಡಿಜಿ ಇಮೇಜ್ ವಸ್ತು ಪ್ರದರ್ಶನ ಇನ್ನು ಕೆಲವೇ ದಿನಗಳಲ್ಲಿ ಏರ್ಪಡಿಸಲಾಗುವುದು ಮತ್ತು ಮಹಿಳೆ ಮತ್ತು ಪುರುಷರಿಗೆ ಪ್ರತ್ತೇಕವಾಗಿ ಕಾರ್ಯಾಗಾರಗಳನ್ನು ಮಾಡಿ ಒಬ್ಬ ಯಶಸ್ವಿ ಉದ್ಯಮಿಯಾಗಿ ರೂಪುಗೊಳ್ಳಲು ಎಲ್ಲ ರೀತಿಯ ಸಹಾಯ ರಾಜ್ಯ ಸಂಘದಿಂದ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇನ್ನೊಬ್ಬ ಮುಖ್ಯ ಅತಿಥಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ನಿರ್ದೇಶಕ ಮಲ್ಲಕಾರ್ಜುನ ಮಾತನಾಡಿ, ಆಧುನಿಕವಾಗಿ ಬೆಳೆಯುತ್ತಿರುವ ಛಾಯಾಗ್ರಹಣ ಕ್ಷೇತ್ರ ಇಂದು ಪುರುಷ ಮಹಿಳೆ ಎನ್ನುವ ಭೇದ ಭಾವವಿಲ್ಲದೆ ಬೆಳಯುತ್ತಿದೆ ಎಂದರು.
ಜಿಲ್ಲೆಯ ಛಾಯಾಗ್ರಹಣ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ ಮಹಿಳಾ ಸಾಧಕಿಯರಾದ ಗಂಗಾ ಮಠ, ಸಿಂದಗಿ. ಲಕ್ಷ್ಮಿ ಲೋಟಗೆರಿ, ಮುದ್ದೇಬಿಹಾಳ. ಗಂಗೂ ಗೋಳಸಾರ ಇಂಡಿ. ವಿಶಾಲಾಕ್ಷಿ ಕಾಖಂಡಕಿಮಠ. ಬಸವನ ಬಾಗೇವಾಡಿ. ಪೂಜಾ ಜಾಧವ, ಇಂಡಿ. ಇವರಿಗೆ ಜಿಲ್ಲಾ ಛಾಯಾಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಪಿ.ಆರ್.ಓ ನಾಗರಾಜ ಟಿ. ಸಿ ಕರ್ನಾಟಕ ನಿರ್ದೇಶಕರಾದ ಬೆಳಗಾವಿಯ ಮಲ್ಲಿಕಾರ್ಜುನ ಕೆ. ಆರ್, ಬೀದರಿನÀ ರವಿರಾಜ ಗುರು, ಗದಗನ ಪವನ ಮೇಹರವಾಡೆ, ಧಾರವಾಡದ ಪ್ರಭಯ್ಯ ಲಕ್ಕುಂಡಿಮಠ, ಬಾಗಲಕೋಟ ಜಿಲ್ಲಾ ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ವಿಠ್ಠಲ ಶಿ. ಹಿರೇಮಠ, ಬೆಳಗಾವಿ ಜಿಲ್ಲಾ ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ, ಲಕ್ಷಣ ಚ. ಯಮಕನಮರಡಿ ಹಾಗೂ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕಿನ ಛಾಯಾಗ್ರಾಹಕರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರಾದ ಜಂಗಲಿಬಾಷಾ ಮುಜಾವರ, ಸಂಗಯ್ಯಾ ಮಠಪತಿ, ಪಿಂಟು ರಜಪೂತ, ಪರಶುರಾಮ ಗೂಳ್ಳುರ, ಸಿದ್ದು ಕುದರೆ, ಸಂಜಯ ರೇವೆ, ಖಾಜು, ರವಿ ಕುಂಟೋಜಿ, ಮಹೇಶ ಮಾಟೀಲ, ಮುರಾರಿ ಕರ್ವಾ, ಉಮೇಶ ಹಿರೆದೇಸಾಯಿ, ಮಹೇಶ ಕುಂಬಾರ, ಚಂದ್ರಶೇಖರ್ ವಡ್ಡರ, ಸಿದ್ದು ಹೊದ್ಲೂರ್, ಕ್ಷೇತ್ರ ಸಮನ್ವಯಾಧಿಕಾರಿ ಸುರೇಶ, ಮೋಹನಸಿಂಗ್ ಉಪಾಧ್ಯೆ, ಕಲಾವಿದರಾದ ಪಿ.ಎಸ್.ಕಡೇಮನಿ, ವಿದ್ಯಾಧರ ಸಾಲಿ ಎಂ.ಕೆ. ಪತ್ತಾರ, ಲಿಂಗರಾಜ ಕಾಚಾಪುರ, ಬಿ.ಎಸ್. ಪಾಟೀಲ, ಛಾಯಾಗ್ರಾಹಕರಾದ ಮಹಾಂತೇಶ ದಿಂಡವಾರ, ಶಶಿ ಕುಂಭಾರ, ಕಿಶೋರ ಖಂಡಾಗಳೆ, ಗೌಡಪ್ಪ ಬಿರಾದಾರ, ವಿಠ್ಠಲ್ ಗುಜ್ಜರ, ಉಮೇಶ ಶಾಖಾಪುರ, ಗಣೇಶ ಶಿಂದೆ ಜಿಲ್ಲೆಯ ಎಲ್ಲ ತಾಲೂಕಿನ ಪದಾಧಿಕಾರಿಗಳು, ಜಮಂಖಂಡಿ ತಾಲೂಕಿನ ಪದಾಧಿಕಾರಿಗಳು ಹಾಗೂ ಜಿಲ್ಲಾ ಸಂಘದ ಉಪಾಧ್ಯಕ್ಷ ಪ್ರಶಾಂತ ಪಟ್ಟಣಶೆಟ್ಟಿ, ಕಾರ್ಯದರ್ಶಿ ಸತೀಶಕುಮಾರ ಕಲಾಲ, ಖಜಾಂಚಿ ಸುರೇಶ ರಾಠೋಡ, ನಿರ್ದೇಶಕರಾದ ರಾಜುಸಿಂಗ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ ಪಾರ್ವತಿ, ಪವನಕುಮಾರ ಅಂಗಡಿ, ಸಂಜು ಕುಂಬಾರ ಸೇರಿದಂತೆ ಹಲವರಿದ್ದರು.
ಮಹೇಶ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.

“ವಿಜಯಪುರದಲ್ಲಿ ಛಾಯಾಗ್ರಾಹಕರು ಇಂದು ಅತ್ಯಂತ ಯಶಸ್ವಿಯಾಗಿ ಸ್ವಾವಲಂಬಿಯಾಗಿ ವೃತ್ತಿಪರ ಕೆಲಸ ಮಾಡುತಿದ್ದಾರೆ. ಅದರ ಜೊತೆಯಲ್ಲಿ ಕಲಾತ್ಮಕ ಛಾಯಾಗ್ರಾಹಕರಾಗಿ ಹಲವಾರು ಪ್ರಶಸ್ತಿ ಪುರಸ್ಕೃತ ರಾಷ್ಟ್ರೀಯ, ಅಂತರರಾಷ್ಟ್ರೀಯ ಛಾಯಾಗ್ರಾಹಕರು ನಮ್ಮಲಿದ್ದಾರೆ. ಛಾಯಾಗ್ರಾಹಕ ವೃತ್ತಿಯಲ್ಲಿರುವ ಮಹಿಳಾ ಸಾಧಕಿಯರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿ, ಪುರಸ್ಕರಿಸುವ ಕಾರ್ಯವು ಎಲ್ಲ ಜಿಲ್ಲೆಗಳಲ್ಲಿಯೂ ನಡೆಯಬೇಕು.”

– ರಮೇಶ ಚವ್ಹಾಣ
ಅಧ್ಯಕ್ಷರು
ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ, ವಿಜಯಪುರ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 25, 2026

ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯಿಂದ ಭಯ ನಿವಾರಣೆ

ನೂತನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ಮಾ.26ಕ್ಕೆ ರಾಜ್ಯ ಬಜೆಟ್ ಅಧಿವೇಶನ ಮುಕ್ತಾಯ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 25, 2026
    In ದಿನಪತ್ರಿಕೆ
  • ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯಿಂದ ಭಯ ನಿವಾರಣೆ
    In (ರಾಜ್ಯ ) ಜಿಲ್ಲೆ
  • ನೂತನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಮಾ.26ಕ್ಕೆ ರಾಜ್ಯ ಬಜೆಟ್ ಅಧಿವೇಶನ ಮುಕ್ತಾಯ!
    In (ರಾಜ್ಯ ) ಜಿಲ್ಲೆ
  • ಸ್ಮಶಾನ ಭೂಮಿಗೆ ಅಧಿಕಾರಿಗಳು ಪರಿಹಾರ ಕಂಡುಕೊಳ್ಳಿ :ಡಿಸಿ ಡಾ.ಆನಂದ ಕೆ.
    In (ರಾಜ್ಯ ) ಜಿಲ್ಲೆ
  • ಅಲೆಮಾರಿ ಜನಾಂಗದವರ ಕಾಲೊನಿಗಳಿಗೆ ಮೂಲಸೌಲಭ್ಯ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಸಂಪೂರ್ಣ ಒಳಮೀಸಲಾತಿ ಜಾರಿಗೆ ರಕ್ತ ಕರಪತ್ರ ಚಳುವಳಿ!
    In (ರಾಜ್ಯ ) ಜಿಲ್ಲೆ
  • ಮಹಿಳೆ ಅಬಲೆಯಲ್ಲ ಸಬಲೆ :ಪ್ರತಿಮಾ ಪಾಟೀಲ
    In (ರಾಜ್ಯ ) ಜಿಲ್ಲೆ
  • ರೈತರ ಹೊಲದಲ್ಲಿ ಅನಾಹುತಕ್ಕೆ ಕಾದಿರುವ ವಾಲಿದ ವಿದ್ಯುತ್ ಕಂಬ
    In (ರಾಜ್ಯ ) ಜಿಲ್ಲೆ
  • ಕುಡಿವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ :ಎಸಿ ಗುರುಸ್ವಾಮಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.