ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಗದಗ ನಗರದ ಜಗದ್ಗುರು ತೊಂಟದಾರ್ಯ ಮಠದ ಸಭಾಮಂಟಪದಲ್ಲಿ ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘ ರಾಜ್ಯ ಘಟಕ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರಿಗೆ ಕೊಡಮಾಡುವ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ತಾಲೂಕಿನ ಕೂಡಗಿ ಕರ್ನಾಟಕ ಪಬ್ಲಿಕ್ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ, ಯುವ ಸಾಹಿತಿ, ಮಕ್ಕಳ ನೆಚ್ಚಿನ ಪ್ರಶಸ್ತಿ ಪುರಸ್ಕೃತ ಪ್ರತಿಭಾ ತೊರವಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಆಶ್ರಮದ ಜಯಂತಿ ಅಕ್ಕ, ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಲತಾ ಬಿರಾದಾರ, ಗದಗ ಪಿಎಸ್ಆಯ್ ಜಿ.ಟಿ. ಜಕ್ಕಲಿ, ಅರಣ್ಯಾಧಿಕಾರಿ ಸ್ನೇಹಾ, ಹಿರಿಯ ಸಾಹಿತಿ ಶಂಕರ ಬೈಚಬಾಳ, ಸಿದ್ದರಾಮ ಬಿರಾದಾರ, ಕಮಲಾ ಮುರಾಳ ಉಪಸ್ಥಿತರಿದ್ದರು.

