ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಜನರಲ್ಲಿ ಸಂಸ್ಕಾರ ಮರೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಇಂದಿನ ಯುವಕರಲ್ಲಿ ಧರ್ಮ, ಸಂಸ್ಕಾರ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸಲು ಅತ್ಯವಶ್ಯಕವಾಗಿವೆ ಎಂದು ಯಂಕಂಚಿ ಕುಂಟೋಜಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಸಿಂದಗಿ ತಾಲೂಕಿನ ಚಟ್ಟರಕಿ ಗ್ರಾಮದಲ್ಲಿ ಜಗದ್ಗುರು ರೇಣುಕಾಚಾರ್ಯ ಮಠದಲ್ಲಿ ರೇಣುಕಾಚಾರ್ಯರ ಜಯಂತುತ್ಸವ ನಿಮಿತ್ಯವಾಗಿ ಹಮ್ಮಿಕೊಂಡ ಗೋಲಗೇರಿ ಗೊಲ್ಲಾಳೇಶ್ವರ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಈ ಸಮಾಜದಲ್ಲಿ ಪ್ರತಿಯೊಬ್ಬರು ಒತ್ತಡದ ಮಧ್ಯದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಮನಸ್ಸಿಗೆ ನೆಮ್ಮದಿ ದೊರೆಯಬೇಕಾದರೆ ಪುರಾಣ ಪ್ರವಚನದಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಶರಣರ ಜೀವನ ಚರಿತ್ರೆಗಳನ್ನು ಕೇಳುವುದರಿಂದ ಮಾನಸಿಕ ನೆಮ್ಮದಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಜನರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಈ ವೇಳೆ ಯರಡೋಣಿಯ ಅಮರೇಶ್ವರ ಶಾಸ್ತ್ರೀಗಳು ಗೋಲಗೇರಿ ಗೊಲ್ಲಾಳೇಶ್ವರರ ಪುರಾಣ ಆರಂಭಿಸಿದರು. ಗವಾಯಿಗಳಾಗಿ ಸಿದ್ರಾಮ ಸೋಲಾಪುರ ತಬಲಾ ವಾದಕರಾಗಿ ಮಹಾಂತೇಶ ಟಾಕಳಿ ಇದ್ದರು.
ಪುರಾಣ ಕಾರ್ಯಕ್ರಮ ಚಂದ್ರಶೇಖರ ಹರನಾಳ, ಶಿವಾನಂದ ನಾಟೀಕಾರ, ಹಣಮಂತ ಮಸರಕಲ್, ಶಿವಲಿಂಗಯ್ಯ ಹಿರೇಮಠ, ಅರ್ಜುನ ಮಾಲಗಾರ, ಶಿವಶಂಕರ ಯಳಸಂಗಿ, ದಯಾನಂದ ಹಿರೇಮಠ, ಮಹಾಂತೇಶ ಮಣೂರ, ಚಿದಾನಂದ ಬಿರಾದಾರ, ಪ್ರಕಾಶ ಬಡಿಗೇರ, ಗುರುಶಾಂತ ಹಿರೇಮಠ ಸೇರಿದಂತೆ ಚಟ್ಟರಕಿ, ಹಚ್ಯಾಳ ಸೇರಿದಂತೆ ವಿವಿಧ ಗ್ರಾಮದ ಶ್ರೀಮಠದ ಭಕ್ತರು ಇದ್ದರು.

