ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ರೂಪಾಯಿಗೆ ೮೦ ರೂಪಾಯಿ ನೀಡುವ ಕರಾರಿನ ಮೇರೆಗೆ ಅಂಕಿ ಸಂಖ್ಯೆಗಳ ಸಹಾಯದಿಂದ ಓಸಿ ಜೂಜಾಟವಾಡುತ್ತಿದ್ದ ಇಬ್ಬರ ಮೇಲೆ ಇಲ್ಲಿನ ಪಿಎಸ್‌ಐ ಸಂಜಯ ತಿಪರೆಡ್ಡಿ ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ಕೊಳೂರು ತಾಂಡಾದ ಮುತ್ತು ಚೌವ್ಹಾಣ ಮತ್ತು ಕೊಟ್ರೆಪ್ಪ ಚವ್ಹಾಣ ಮೇಲೆ ಪ್ರಕರಣ ದಾಖಲಾಗಿದ್ದು, ಪಟ್ಟಣದ ಬಸವೇಶ್ವರ ವೃತ್ತದ ಬಳಿ ಜೂಜಾಟವಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರಿಂದ ಕೆಲ ಹಣ, ಓಸಿ ಚೀಟಿ ಮತ್ತು ಬಾಲಪೆನ್ನು ವಶಕ್ಕೆ ಪಡೆಯಲಾಗಿದೆ.
