ಉದಯರಶ್ಮಿ ದಿನಪತ್ರಿಕೆ
ಬಬಲೇಶ್ವರ: ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸರಕಾರದ ಯೋಜನೆಗಳನ್ನು ಮುಟ್ಟಿಸಲು ಆಧಾರ್ ತಿದ್ದುಪಡಿ ಹಾಗೂ ಬ್ಯಾಂಕಿಗೆ ಆಧಾರ್ ಸೀಡಿಂಗ್ ಮಾಡಿಸುವದು ಕಡ್ಡಾಯವಾಗಿದೆ ಎಂದು ವಿಜಯಪುರ ಗ್ರಾಮೀಣವಲಯದ ಬಿಇಓ ಪ್ರಮೋದಿನಿ ಬಳೋಲಮಟ್ಟಿ ಹೇಳಿದರು.
ಬಬಲೇಶ್ವರ ತಾಲ್ಲೂಕಿನ ಅರ್ಜುನಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಧಾರ ಸಂಬಂದಿಸಿದಂತೆ ಪಾಲಕರಲ್ಲಿ ಜಾಗೃತಿ ಮೂಡಿಸಲು ಪ್ರಭಾತ ಪೇರಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ವಿಜಯಪುರ ಗ್ರಾಮೀಣ ತಾಲ್ಲೂಕಿನಲ್ಲಿ 28 ಸಾವಿರ ಮಕ್ಕಳ ಆಧಾರ್ ತಿದ್ದುಪಡಿ ಇರುವದರಿಂದ ಸರಕಾರದ ಯೋಜನೆಗಳನ್ನು ಮಕ್ಕಳಿಗೆ ತಲುಪಿಸುವದು ತೊಂದರೆಯಾಗಿರುವದರಿಂದ ತಾಲೂಕಿನ ಎಲ್ಲ ಶಾಲೆಗಳಲ್ಲಿ ತುರ್ತಾಗಿ ಮುಖ್ಯಗುರುಗಳು, ಸಹಶಿಕ್ಷಕರು ಪಾಲಕರ ಸಹಕಾರದಿಂದ ಮಕ್ಕಳ ಆಧಾರ ಕಾರ್ಡ ಮಾಡಿಸುವದು. ಮಕ್ಕಳು ಹೆಸರು ತಪ್ಪಾದ ಆಧಾರ ಕಾರ್ಡ ತಿದ್ದುಪಡಿ ಮಾಡಿಸುವದು. ಎಸ್ಎಟಿಎಸ್ ದಲ್ಲಿ ಅಪಡೇಟ್ ಮಾಡಿ ಅಫಾರ ಐಡಿ ಮಾಡಬೇಕು. ಎಲ್ಲ ಶಾಲೆಗಳಲ್ಲಿ ಈ ಕಾರ್ಯ ಶೇ.100 ರಷ್ಟು ಕಡ್ಡಾಯವಾಗಿ ಬೇಗನೆ ಮಾಡಬೇಕು ಎಂದು ಹೇಳಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ರಫೀಕ್ ಸೋನಾರ್,
ರಮೇಶ ತಂಬಾಕೆ, ಎ. ಎಸ್.ಬಿರಾದಾರ, ಪ್ರಭು ಬಿರಾದಾರ, ರಮೇಶ ತಂಬಾಕೆ, ಸುನೀಲ್ ಸಾರವಾಡ, ಎಸ್. ಎಂ. ಅನಂತಪುರ, ಸಿದರಾಯ ಅಥಣಿ ಹಾಜರಿದ್ದರು.

