ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಅಲ್ಪಸಂಖ್ಯಾತರ ಕಾಲೊನಿಗಳ ರಸ್ತೆ ಹಾಗೂ ಒಳಚರಂಡಿ ಅಭಿವೃದ್ಧಿಗಾಗಿ 2024-25ನೇ ಸಾಲಿನ ಅಲ್ಪಸಂಖ್ಯಾತರ ಕಾಲೊನಿಗಳ ಅಭಿವೃದ್ಧಿ ಯೋಜನೆ ಮತ್ತು ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ರೂ.5 ಕೋಟಿ ಅನುದಾನ ಮಂಜೂರಾಗಿದ್ದು, ಈ ಪೈಕಿ ಮೊದಲ ಕಂತು ರೂ.1.5 ಕೋಟಿ ಅನುದಾನ ಬಿಡುಗಡೆಗೊಂಡಿದೆ ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಾ.ನಂ.29ರ ಸುಹಾಗ ಕಾಲೊನಿಯ ಆಂತರಿಕ ರಸ್ತೆಗಳ ಅಭಿವೃದ್ಧಿ, ವಾ.ನಂ.21ರ ತ್ರೀಮೂರ್ತಿ ನಗರದ ಆಂತರಿಕ ರಸ್ತೆಗಳ ಅಭಿವೃದ್ಧಿ, ವಾ.ನಂ.21ರ ಗಣೇಶ ನಗರ ಮುಖ್ಯ ರಸ್ತೆಯ ವಿ.ಆರ್.ಎಲ್ ಆಪೀಸ್ ದಿಂದ ರಿಂಗ್ ರಸ್ತೆವರೆಗಿನ ರಸ್ತೆ ಅಭಿವೃದ್ಧಿ, ವಾ.ನಂ.29 ಹಾಗೂ 34 ರ ಕನ್ನನ ನಗರ ಹತ್ತಿರದ ಪೂರ್ವಭಾಗ ಹಾಗೂ ಪಶ್ಚಿಮ ಭಾಗದ ಜಯಲಕ್ಷ್ಮೀ ನಗರದ ಆಂತರಿಕ ರಸ್ತೆಗಳ ಅಭಿವೃದ್ಧಿ, ವಾ.ನಂ.13ರ ಬಾರಾಕಮಾನ್ ಹಿಂದಿನ ಭಾಗದ ರಸ್ತೆ ಅಭಿವೃದ್ಧಿ, ವಾ.ನಂ.13ರ ಕಲಾಲ ಗಲ್ಲಿಯ ಆಂತರಿಕ ರಸ್ತೆಗಳು ಹಾಗೂ ವಾ.ನಂ.11ರ ಕುಲ್ಲೋಳ್ಳಿ ಪೆಟ್ರೋಲ್ ಪಂಪದಿಂದ ಖಮರುದ್ದಿನ್ನ ಮಸೀದಿ ಮೂಲಕ ವಾಜಪೇಯಿ ರಸ್ತೆ ವರೆಗಿನ ರಸ್ತೆ ಅಭಿವೃದ್ಧಿ, ವಾ.ನಂ.33ರ ಅತಾಲಟ್ಟಿ ಮುಖ್ಯ ರಸ್ತೆಯಿಂದ ಮದೀನಾ ನಗರದವರೆಗೆ ರಸ್ತೆ ಅಭಿವೃದ್ಧಿ, ವಾ.ನಂ.33ರ ಮದೀನಾ ನಗರದಿಂದ ಸಾಯಿ ನಗರದವರೆಗೆ ಹಾಗೂ ಆಂತರಿಕ ರಸ್ತೆಗಳ ಅಭಿವೃದ್ಧಿ, ವಾ.ನಂ.33ರ ಅತಾಲಟ್ಟಿ ಮುಖ್ಯ ರಸ್ತೆಯಿಂದ ಮದೀನಾ ನಗರ ಮೂಲಕ ಸಾಯಿ ನಗರದ ಆಂತರಿಕ ರಸ್ತೆಗಳು, ಒಳಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.

