ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಮೀಪದ ನಿವರಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಿರಗಣ್ಣ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ರವಿ ಚಿದಾನಂದ ಕಾರಾಜನಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ನಡೆಯಿತು. ನಿವರಗಿ ಮತ್ತು ಸಂಖ ಗ್ರಾಮಸ್ಥರು ನೂತನ ಅಧ್ಯಕ್ಷ , ಉಪಾಧ್ಯಕ್ಷ ಹಾಗೂ ನಿರ್ದೇಶಕ ಮಂಡಳಿಯನ್ನು ಸತ್ಕರಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ದುಂಡಪ್ಪ ಪೋಲಾದಿ, ಚಂದ್ರಕಾಂತ ಡೊಳ್ಳಿ, ಉಮೇಶ ಹುನ್ನೂರ, ರಮೇಶ ಉಮರಾಣಿ, ರಮೇಶ ಮಲಾಬಾದಿ, ಬಸವರಾಜ ಕೋಳಿ,ಶ್ರವಣಕುಮಾರ ಕಾಂಬಳೆ, ಪ್ರಕಾಶ ಹಳದಕ್ಕಿ, ರತ್ನಾಬಾಯಿ ಶೇಜಾಳೆ, ಮಮತಾಜ ಮುಲ್ಲಾ ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ಮತ್ತು ನಿವರಗಿ ಮತ್ತು ಸಂಖ ಉರಿನ ಗ್ರಾಮಸ್ಥರು ಇದ್ದರು.

