ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿ ಸಮೀಪದ ಬೇನಾಳ ಆರ್ ಎಸ್ ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆಯ ನಿಮಿತ್ಯ , ವಿವಿಧ ನಾನಾ ಕಾರ್ಯಕ್ರಮಗಳು ಜರುಗಲಿವೆ .
ರವಿವಾರ ಮುಂ 8 ಘಂ ಶ್ರೀ ಭೀರಲಿಂಗೇಶ್ವರ ಮೂರ್ತಿಗೆ ಅಭಿಷೇಕ” ಜರಗುವುದು.
ಅದೇ ದಿನ ಸಾಯಂಕಾಲ 5ಕ್ಕೆ ಬುದ್ದಿ, ವಂದಾಲ, ಅರಷಣಗಿ, ಬೇನಾಳ ಶ್ರೀ ಗದ್ದೆಮ್ಮದೇವಿ ಹಾಗೂ ಶ್ರೀ ಭೀರಲಿಂಗೇಶ್ವರ ಪಂಚಗ್ರಾಮ ಪಲ್ಲಕ್ಕಿಗಳ ಸ್ವಾಗತ ಮಾಡಿಕೊಳ್ಳಲಾಗುವುದು.
ಅಂದೇ ರಾತ್ರಿ 10-00ಕ್ಕೆ ಅದ್ವಿಕಾ ಮೆಲೋಡಿಸ್, ಮುದ್ದೇಬಿಹಾಳ ಇವರಿಂದ ನೃತ್ಯ ಹಾಗೂ ರಸಮಂಜರಿ ಕಾರ್ಯಕ್ರಮ ಜರುಗುವುದು.
ಡ್ಯಾನ್ಸರ್: ವಿಷ್ಣು ಸಾರಥ್ಯದಲ್ಲಿ ಬೆಂಕಿ ಲತಾ. ಗಾಯಕರು: ಮ್ಯೂಜಿಕ್ ಮೈಲಾರಿ, ರಾಕ್ ಸ್ಟಾರ್ ಜ್ಯೋತಿ, ಬೀರು ಜಮಖಂಡಿ, ಲಕ್ಷ್ಮೀ ಬಿಜಾಪುರ, ವಿಷ್ಣು ಲಮಾಣಿ ಉಪಸ್ಥಿತರಿರುವರು.
ಸ್ವಾನದ ಓಟದ ಸ್ಪರ್ಧೆ
ಪ್ರಥಮ ಬಹುಮಾನ, ಎಚ್ ಎಫ್, ಬೈಕ್, ದ್ವೀತಿಯ ಬಹುಮಾನ ,21,000, ತೃತೀಯ ಬಹುಮಾನ , 11,101, ಚತುರ್ಥ ಬಹುಮಾನ , 5001, ಪಂಚಮಿ ಬಹುಮಾನ, 3001, ಆರನೇ ಬಹುಮಾನ,2001, ಏಳನೇ ಬಹುಮಾನ,1501, ಎಂಟನೇ ಬಹುಮಾನ 1001, ಬಹುಮಾನಗಳನ್ನು ನೀಡಲಾಗಿದೆ. (ಪ್ರವೇಶ ದರ 601) .
ಈ ಕಾರ್ಯಕ್ರಮವನ್ನು ಹಣಮಂತ ನಾಯಕ್ (ಬಬ್ಲಗೌಡ) ಕೊಡೆಕಲ್ , ಉದ್ಘಾಟನೆ ಮಾಡಲಿದ್ದಾರೆ. ಹಣಮಂತಗೌಡ ಬಾಲನಗೌಡ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಲೊಡೊ ಕಿಂಗ್ ಸ್ಪರ್ದೆ.
ಪ್ರಥಮ ಬಹುಮಾನ, ರೇಂಜರ್ ಸೈಕಲ್, ದ್ವಿತೀಯ ಬಹುಮಾನ,ಏರಕೂಲರ್, ಕೃತಿಯ ಬಹುಮಾನ ,ಫ್ಯಾನ್ , ಚತುರ್ಥ ಬಹುಮಾನ, ಇಸ್ತ್ರಿ. ಬಹುಮಾನಗಳು ನೀಡಲಾಗಿದೆ.(ಪ್ರವೇಶ ದರ 499) .
ಪೆ 9 ರಂದು ಬೇನಾಳ ಎನ್.ಎಚ್. ಗ್ರಾಮದ ಸಕಲ ಸದ್ಭಕ್ತರಿಂದ ಕಂಬಳಿ, ಜಾಡಿ, ಶಲ್ಲೆ, ಬಂಡಾರವನ್ನು ಭವ್ಯ ಡೊಳ್ಳಿನ ಮೆರವಣಿಗೆ ಮೂಲಕ ಬುದ್ದಿ, ವಂದಾಲ, ಅರಷಣಗಿ, ಬೇನಾಳ ಶ್ರೀ ಗದ್ದೆಮ್ಮದೇವಿ ಹಾಗೂ ಶ್ರೀ ಭೀರಲಿಂಗೇಶ್ವರ ಪಂಚಗ್ರಾಮ ಪಲ್ಲಕ್ಕಿಗಳ ಗ್ರಾಮಕ್ಕೆ ಸ್ವಾಗತಿಸುವದು, ಮುಂಜಾನೆ 10-00ಘಂಟೆಗೆ ಡೊಳ್ಳುವಾದ್ಯದೊಂದಿಗೆ ಗಂಗಾಸ್ಥಳದಿಂದ ಗ್ರಾಮದ ದೇವಾನು-ದೇವತೆಗಳ ದರ್ಶನದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಂಚಗ್ರಾಮ ಪಲ್ಲಕ್ಕಿ ಮೆರವಣಿಗೆ ಉತ್ಸವ ನಂತರ ಮದ್ಯಾನ ಅನ್ನ ಪ್ರಸಾದ” ಜರಗುವುದು ಎಂದು ಜಾತ್ರಾ ಕಮೀಟಿ ಅಧ್ಯಕ್ಷ ರಮೇಶ್ ವಂದಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

