ಬೀದರ ಮಾದರಿಯಲ್ಲಿ ಸೊಸೈಟಿ ರಚನೆಗೆ ಜಿಲ್ಲಾಧಿಕಾರಿಗಳ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕ್ರೈಸ್ ವಸತಿ ನಿಲಯಗಳಲ್ಲಿ ಹಾಸ್ಟೇಲ್ & ವಸತಿ ಶಾಲಾ ಹೊರಗುತ್ತಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಅಹೋರಾತ್ರಿ ಧರಣಿಯನ್ನು ಕರ್ನಾಟಕ ರಾಜ್ಯ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಸುಮಾರು ೧೭ ದಿನಗಳ ಕಾಲ ಅಹೋರಾತ್ರಿ ಹೋರಾಟ ಕೈಗೊಂಡ ನಂತರ ಮಾನ್ಯ ಜಿಲ್ಲಾಧಿಕಾರಿಗಳು ವಿಜಯಪುರ ಇವರಿಂದ ಸಭೆ ಕರೆಯಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಜಿಲ್ಲಾಧಿಕಾರಿಗಳು ಮಾತನಾಡುತ್ತ, ಬೀದರ ಮಾದರಿಯಲ್ಲಿ ಸೊಸೈಟಿ ರಚನೆ ಮಾಡಲು ಅಧಿಕಾರಿಗಳಿಗೆ ಸೂಚನೆ ಮಾಡಿದರು ಹಾಗೂ ಬೀದರ ಮಾದರಿಯನ್ನು ಎಪ್ರಿಲ್ ೦೧ ರಂದು ಜಾರಿಗೊಳಿಸಲಾಗುವದು ಎಂದು ಭರವಸೆ ನೀಡಿದ ಅವರು ಎಲ್ಲ ಹಾಸ್ಟೇಲ್ ಹೊರ ಗುತ್ತಿಗೆ ನೌಕರರಿಗೆ ವಾರದ ರಜೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ ಜಿಲ್ಲಾಡಳಿತ ಹಂತದಲ್ಲಿ ಬರುವ ಭರವಸೆಗಳನ್ನು ಈಡೇರಿಸಲಾಗುವದು ಹಾಗೂ ಸರಕಾರ ಮಟ್ಟದಲ್ಲಿ ಬರುವ ಭರವಸೆಗಳ ಕುರಿತು ಪ್ರಸ್ತಾವನೆ ಸಲ್ಲಿಸಲಾಗುವದು ಎಂದು ತಿಳಿಸಿದ ನಂತರ ೧೭ ದಿನಗಳ ಕಾಲ ಕೈಗೊಂಡ ಹಾಸ್ಟೇಲ್ ಹೊರಗುತ್ತಿಗೆ ನೌಕರರ ಅಹೋರಾತ್ರಿಯನ್ನು ಅಂತ್ಯಗೊಳಿಸಲಾಯಿತು.
ಸಂಘದ ರಾಜ್ಯಾಧ್ಯಕ್ಷರಾದ ಭೀಮಶೆಟ್ಟಿ ಯಂಪಳ್ಳಿ ಅವರು ಮಾತನಾಡಿ, ಈ ನಮ್ಮ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಹಾಗೂ ನಮ್ಮೆಲ್ಲ ಬೇಡಿಕೆಗಳು ಆದಷ್ಟು ಬೇಗ ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮತ್ತು ಜಿಲ್ಲಾಧಿಕಾರಿಗಳ ಆಶ್ವಾಸನೆಗೆ ಹಾಗೂ ಸ್ಪಂದನೆ ಮಾಡಿದ ಇವರಿಗೆ ಕೃತಜ್ಷತೆಯನ್ನು ಸಲ್ಲಿಸಿದರು.
ಈ ಸಭೆಯಲ್ಲಿ ಮೂರು ಇಲಾಖೆಯ ಕಾರ್ಮಿಕ ಅಧಿಕಾರಿಗಳು, ಜಿಲ್ಲಾಧ್ಯಕ್ಷರಾದ ಹುಲಗಪ್ಪ ಚಲವಾದಿ, ಸಂಘದ ಲಕ್ಷ್ಮಣ ಮಸಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಯಮನಪ್ಪ ಬಜಂತ್ರಿ ಜಿಲ್ಲಾ ಸಹ ಕಾರ್ಯದರ್ಶಿ, ರಾಮಚಂದ್ರ ಕೋಳಿ, ಗೋಪಾಲ ಅವದಿ, ಮೀನಾಕ್ಷಿ ತಳವಾರ, ಶಾಂತಾ ಕ್ವಾಟಿ ನೂರಜಾನ ಯಲಗಾರ, ಮಲ್ಲಿಕಾರ್ಜುನ ಚಲವಾದಿ, ಗೌರಕ್ಕ ಬೀಳೂರ, ವೈಶಾಲಿ ಸಮಗೊಂಡ, ಅರವಿಂದ ಲಮಾಣಿ, ಮರೆಪ್ಪ ಚಲವಾದಿ, ಕಮಲಾಕ್ಷಿ ದೊಡಮನಿ, ಶೈಲಾ ಉಣ್ಣಿಬಾಯಿ, ರಾಧಾಬಾಯಿ ಬಜಂತ್ರಿ, ಶಿವಯೋಗೆಪ್ಪ ದೊಡಮನಿ, ಲಕ್ಷ್ಮಿಪುತ್ರ ಕುರಮಲ್, ಸುಖನ್ಯಾ ಚವ್ಹಾಣ, ಲಕ್ಷಿö್ಮ ಸೂರ್ಯವಂಶಿ, ಸಂಜುಕುಮಾರ ನವಬಾಗ, ಲಕ್ಷö್ಮಣ ಅಲ್ಲಾಮೀನ, ಬಾಬು ಸಾಯಿಪಾರ್ಕ, ಜಯಭೀಮ ಭೂತನಾಳ, ರಾಜು ಬನಸೋಡೆ, ಮಲ್ಲು ತಾಂಬೆ, ಶರಣು ಯಡಳ್ಳಿ, ನಿಂಗಪ್ಪ ವಾಲಿಕಾರ, ಸಂಗಮ್ಮ ಹಂಜಗಿ, ಶೋಭಾ ಹಿಪ್ಪರಗಿ, ಗೀತಾ ಬಸರಿಕಟ್ಟಿ, ಮೀನಾಕ್ಷಿ ಚಲವಾದಿ, ಕಾವೇರಿ ದೊಡಮನಿ, ಲತಾ ಚಲವಾದಿ, ಶ್ರೀದೇವಿ ಶಿವಶರಣ, ಕವಿತಾ ರಾಠೋಡ, ಕುಸುಮಾ ಇನ್ನಿತರು.

