ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದು ಫೆ.8 ಶನಿವಾರ ಮದ್ಯಾಹ್ನ 2:30 ರಿಂದ 5 ಗಂಟೆಯವರೆಗೆ ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಇಂಗ್ಲೀಷ್ ಮತ್ತು ವಿಜ್ಞಾನ ವಿಷಯಗಳ ಕುರಿತು ನೇರ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಈ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಇದ್ದರೆ ಹಾಗೂ ಪರೀಕ್ಷಾ ಭಯವನ್ನು ಹೋಗಲಾಡಿಸುವುದಕೋಸ್ಕರವಾಗಿ ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಈ ಕೆಳಗಿನ ಸಂಪನ್ಮೂಲ ವ್ಯಕ್ತಿಗಳಿಗೆ ಫೋನ್ ಕರೆ ಮಾಡಲು ತಿಳಿಸಿದೆ.
ಇಂಗ್ಲೀಷ ವಿಷಯಕ್ಕೆ ಸಂಬಂದಿಸಿದಂತೆ ಶ್ರೀಮತಿ ಎಂ.ಎಸ್. ಬಿರಾದಾರ್ 9900872799, ಪಿ. ಎಸ್. ಕುಂಬಾರ 9449009605, ಬಿ.ಬಿ.ಕುಲಕರ್ಣಿ, 9845919703, ವಿನಾಯಕ್ ಕಾಖಂಡಕಿ 9731091724, ಎಸ್. ಎಲ್. ಬಾಲಿ 9902569410, ಜೆ. ಬಿ.ಗಳವೆ 9741635473 ಅವರನ್ನು ಸಂಪರ್ಕಿಸಬೆಕು.
ವಿಜ್ಞಾನ ವಿಷಯಕ್ಕೆ ಸಂಬಂದಿಸಿದಂತೆ ಸಂದೀಪ್ ದೇಶಪಾಂಡೆ 998008879, ಗುರು ಹಿರೇಮಠ 9900488928, ಬಿ.ಎಸ್.ಹಿರೇಮಠ್ 9481706664, ಪ್ರಕಾಶ್ ಮಣ್ಣಿಕೇರಿ 9731091081, ಜಿ. ವಿ. ಕುಲಕರ್ಣಿ 9379573738, ಎಂ. ಜಿ. ಕುರಿ 9019046969 ಈ ಮೇಲಿನ ಸಂಖ್ಯೆಗಳಿಗೆ ಸಂಪರ್ಕಿಸಿ ವಿದ್ಯಾರ್ಥಿಗಳಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಬಿಇಓ ಶ್ರೀಮತಿ ಪ್ರಮೋದಿನಿ ಬಳವಲಮಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

