ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದಲ್ಲಿ ಸುಮಾರು ೪೦ ವರ್ಷದಿಂದ ಬ್ಯಾಂಕ ಸೇವೆಯನ್ನು ಗ್ರಾಹಕರ ಸಹಕಾರದಿಂದ ಉತ್ತಮ ವಹಿವಾಟಿನೊಂದಿಗೆ ನಡೆಸುತ್ತಾ ಬಂದಿದ್ದು, ಬಹುದಿನಗಳಿಂದ ಈ ಭಾಗದ ಬೇಡಿಕೆಯಂತೆ ಬ್ಯಾಂಕ್ ಆಫ್ ಬರೋಡಾದ ಕಲಕೇರಿ ಶಾಖೆಯ ನೂತನ ಸುಸಜ್ಜಿತ ಕಟ್ಟಡದಲ್ಲಿ ಉದ್ಘಾಟನೆಗೊಂಡಿದ್ದು, ಈ ಮೂಲಕ ಮತ್ತಷ್ಟು ಉತ್ತಮವಾದ ಸೇವೆಯನ್ನು ಗ್ರಾಹಕರಿಗೆ ಒದಗಿಸುತ್ತೇವೆ ಎಂದು ಕಲಬುರಗಿ ಪ್ರಾದೇಶಿಕ ವ್ಯವಸ್ಥಾಪಕರಾದ ವಿ.ರವೀಂದ್ರಬಾಬು ಅವರು ಹೇಳಿದರು.
ಕಲಕೇರಿಯ ಬ್ಯಾಂಕ್ ಆಫ್ ಬರೋಡಾ ಶಾಖೆಯು ವಿಜಯಪುರ ರಸ್ತೆಯ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್ ಹತ್ತಿರ ನೂತನ ಸುಸಜ್ಜಿನ ಕಟ್ಟಡಕ್ಕೆ ಸ್ಥಾಳಾಂತರಗೊಂಡ ಹಿನ್ನೆಲೆಯಲ್ಲಿ ಶಾಖೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇದೇ ವೇಳೆ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ನಾಯ್ಡು, ಸಹಾಯಕ ವ್ಯವಸ್ಥಾಪಕರಾದ ಚಂದ್ರಶೇಖರ ರಾಠೋಡ, ಶ್ಯಾಮಸುಂದರ, ವಿನೋದಕುಮಾರ, ಭವಾನಿ ಪ್ರಸಾದ, ಸಿಬ್ಬಂದಿಗಳಾದ ಅಂಭಾಜಿ ಪವಾರ, ಗೂಳಪ್ಪ ವಡ್ಡೋಡಗಿ, ಗುರುರಾಜ ಅಡಕಿ, ಸಾಯಿನಾಥ ನಾಯ್ಕ್, ಮಾಹಾಂತೇಶ ಮಾಗಣಗೇರಿ, ಪ್ರಜ್ವಲ್ ಅಡಕಿ, ರಾಜಶೇಖರ ಜಂಬಗಿ ಸೇರಿದಂತೆ ಕಲಕೇರಿ,ತಿಳಗೂಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗಣ್ಯರು ಮತ್ತು ಬ್ಯಾಂಕ್ ಗ್ರಾಹಕರು ಇದ್ದರು.

