ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ರೈತ ಬಾಂಧವರಿಗೆ ಎರೆಹುಳು ಗೊಬ್ಬರ ತಯಾರಿಸುವ ಮಾಹಿತಿ ಕುರಿತು ಪಟ್ಟಣದ ಸ್ಟೇಷನ್ ರಸ್ತೆಯಲ್ಲಿರುವ ಕೃಷಿ ಉಪ ನಿರ್ದೇಶಕರ ಕಚೇರಿಯ ಸಬಾಭವನದಲ್ಲಿ ಬೆಳಗ್ಗೆ ೧೧ ಗಂಟೆಗೆ ಫೆ ೪ ರಂದು ತರಬೇತಿ ನೀಡಲಾಗುವದು ಎಂದು ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ತಿಳಿಸಿದ್ದಾರೆ.
ಎರೆಹುಳು ಬೆಳೆಯುವ ವಿಧಾನ, ಅದಕ್ಕೆ ಬೇಕಾಗುವ ಜಾಗದ ವಿಸ್ತೀರ್ಣದ ಮಾಹಿತಿ, ಮತ್ತು ಎರೆಹುಳು ಸಿಗುವ ಮಾಹಿತಿ ಮತ್ತು ಬೇಕಾಗುವ ಪದಾರ್ಥಗಳ ಜೊತೆಗೆ ಸರಕಾರದಿಂದ ಸವಲತ್ತುಗಳ ಕುರಿತು ಮಾಹಿತಿ ನೀಡಲಾಗುವದು ಎಂದು ಪವಾರ ತಿಳಿಸಿದ್ದಾರೆ.
ಕೇವಲ ಮೂವತ್ತು ಜನ ರೈತರಿಗೆ ಮಾತ್ರ ಪ್ರವೇಶವಿದೆ. ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ೦೮೩೫೯ ೨೨೫೦೮೦ ಸಂಪರ್ಕಿಸಲು ಕೋರಿದ್ದಾರೆ.

