ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕೇಂದ್ರ ಸರ್ಕಾರ ಮಂಡಿಸಿದ ಈ ಬಾರಿಯ ಬಜೆಟ್ ಕೇವಲ ಉದ್ಯಮದಾರರಿಗೆ ಸೀಮಿತವಾದಂತಿದೆ ಎಂದು ಶಾಸಕ ಅಶೋಕ ಮನಗೂಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕೆಗೆ ತಿಳಿಸಿದ ಅವರು, ರಾಜ್ಯದ ಜನ ನಿರೀಕ್ಷೆಗೆ ತಕ್ಕಂತೆ ಯಾವ ಬಹುದೊಡ್ಡ ಯೋಜನೆಗಳು ಈ ಬಾರಿಯ ಬಜೆಟ್ ನಲ್ಲಿ ಕಂಡಿಲ್ಲ ಹೀಗಾಗಿ ರಾಜ್ಯದ ನಿರೀಕ್ಷೆಗೆ ಈ ಬಜೆಟ್ ಶೂನ್ಯವಾಗಿದೆ. ಮಧ್ಯಮ ವರ್ಗದ ಜನತೆಗೆ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಯಾವುದೇ ರೀತಿಯ ಅನುಕೂಲವಾಗುವಂತ ಯೋಜನೆಗಳು ಇಲ್ಲ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವಂತ ಯೋಜನೆ, ರೈತರನ್ನ ಅಭಿವೃದ್ಧಿಪಡಿಸುವ ಯೋಜನೆಗಳು ಈ ಬಾರಿಯ ಬಜೆಟ್ ನಲ್ಲಿ ಇರದೇ ಇರುವುದರಿಂದ ಇದು ಒಂದು ರೀತಿಯ ರೈತ ವಿರೋಧಿ ಬಜೆಟ್ ಆಗಿದೆ. ರಾಜ್ಯದ ಅಭಿವೃದ್ಧಿಗೆ ಸಿಗಬೇಕಾಗಿರುವ ಅನುದಾನ ಯೋಗ್ಯವಾಗಿ ಸಿಗದೇ ಇರುವುದು ಅಸಮಾಧಾನವಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಬೇಸರ ವ್ಯಕ್ತಪಡಿಸಿದರು.

