ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಹಕಾರಿ ಬ್ಯಾಂಕಿನ ಅಭಿವೃದ್ಧಿಗೆ ಎಲ್ಲ ಸದಸ್ಯರ ಹಾಗೂ ಊರಿನ ಹಿರಿಯರ ಸಹಕಾರದೊಂದಿಗೆ ಬ್ಯಾಂಕಿನ್ ಬೆಳವಣಿಗೆಗೆ ನಾವೆಲ್ಲರೂ ಪ್ರಾಮಾಣಿಕವಾಗಿ ದುಡಿಯುತ್ತೇವೆ ಎಂದು ನೂತನ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.
ಆಯ್ಕೆಯಾದ ಬಳಿಕ ಸಿಂದಗಿ ನಗರದ ವಿವಿಧೋದ್ದೇಶ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾಲ್ಕನೆಯ ಬಾರಿಗೆ ಅಧ್ಯಕ್ಷನಾಗಿ ಆಯ್ಕೆ ಮಾಡದ ಎಲ್ಲ ಸದಸ್ಯರಿಗೆ ನಾನು ಚಿರಋಣಿಯಾಗಿದ್ದೇನೆ. ಅವರ ಭರವಸೆಯಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ. ಬ್ಯಾಂಕಿನ ಸೌಲಭ್ಯ ಹಾಗೂ ರೈತರಿಗೆ ಸಾಲದ ಸೌಲಭ್ಯವನ್ನು ಒದಗಿಸುತ್ತೇನೆ ಎಂದರು.
ಈ ವೇಳೆ ಬ್ಯಾಂಕನ್ ಅಧಿಕಾರಿಗಳಿಗೆ, ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಇಂಡಿ ಎಆರ್‌ಸಿಎಸ್ ಸಹಾಯಕ ನಿಬಂಧಕ ಕನಕರಾಜ ವಡ್ಡರ, ಸುರೇಶ ಮಲಗೊಂಡ, ಶಶಿಕಾಂತ ಕುಂಬಾರ, ರಾಹುಲ ನಾಗಾವಿ, ಮನೋಜ ಬಿರಾದಾರ, ವಿಶ್ವರಾಧ್ಯ ಬಿರಾದಾರ, ಮಂಜುನಾಥ ಚವ್ಹಾಣ, ಹೇಮಾ ನಾವಿ, ಮಾಳು ಪೂಜಾರಿ, ಈರಗಂಟೆಪ್ಪ ಪೂಜಾರಿ, ಸಾವಿತ್ರಿ ವಿಭೂತಿಹಳ್ಳಿ, ನೂತನ ಸದಸ್ಯರಾದ ಬಂದೇನವಾಜ ಪೀರಣಗೋಳ, ಮಡೇಪ್ಪ ವಾಲೀಕಾರ, ಮಹಾಂತೇಶ ಅಲ್ಲಾಪೂರ, ರಮೇಶ ಪತ್ತಾರ, ರವಿಕುಮಾರ ರೆಬಿನಾಳ, ಅಶ್ವೀನಿ ಹೂಗಾರ, ಸಿದ್ದಮ್ಮ ಬಿರಾದಾರ, ಶಂಕರಗೌಡ ಪಾಟೀಲ, ರವಿ ಲಮಾಣಿ, ಭೀಮಾಶಂಕರ ಗೂಡ್ಲಮನಿ ಸೇರಿದಂತೆ ಅನೇಕರು ಇದ್ದರು.

