ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಇಡೀ ಸಮಾಜವನ್ನು ಅಭಿವೃದ್ದಿ ಮಾಡುವುದೇ ಈ ಬ್ರೀಗೇಡನ ಆಶಯವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಬುಧವಾರ ಪಟ್ಟಣದಲ್ಲಿ ಕ್ರಾಂತಿವೀರ ಬ್ರಿಗೇಡ್ ಕರ್ನಾಟಕ ವತಿಯಿಂದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ನಡೆಯುವ ಬೃಹತ್ ಸಮಾವೇಶದ ಆಲಮೇಲ ತಾಲೂಕಾ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪನವರು ಆಕಳಲಿನ ಕೆಚ್ಚಲು ಕೊಯಿದ ಕೋಮುವಾದಿಗಳ ವಿರುದ್ದ ನಾವೇಲ್ಲರೂ ಹೋರಾಡಬೇಕಿದೆ. ನೀವೆಲ್ಲರೂ ಈ ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಹೇಳಿದರು
ನಂತರ ರಮೇಶ ಬಂಟನೂರ ಮಾತನಾಡಿ, ಈ ಒಂದು ಸಮಾವೇಶಕ್ಕೆ ನಾವು ಎಲ್ಲರೂ ನಮ್ಮ ಈಶ್ವರಪ್ಪನವರ ಕೈ ಬಲಪಡಿಸೋಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಾನಿದ್ಯವನ್ನು ಡಾ|| ಸಂದೀಪ ಪಾಟೀಲ, ಶ್ರೀಶೈಲಯ್ಯ ಅಳೋಳ್ಳಿಮಠ ಮುಖಂಡರಾದ ಸಿದ್ದು ಬುಳ್ಳಾ, ರವಿ ನಾಯ್ಕೋಡಿ, ಅಶೋಕ ವಡಿಯಾರ, ಭೀಮಣ್ಣ ಸೀತಿಮನಿ, ನಿಂಗರಾಜ ಬಂಟನೂರ, ಸಿಂದೂರ ಕಟ್ಟಿಮನಿ, ರಾಕೇಶ ಕಟ್ಟಿಮನಿ, ರವಿ ಚೌಡಿಹಾಳ ಮುಂತಾದವರು ಇದ್ದರು

