Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಸಮಾನತೆ ಸ್ಥಾಪನೆಗೆ ಪ್ರಜಾಪ್ರಭುತ್ವ ತತ್ವ ಸಹಕಾರಿ

ಅಕ್ರಮ ಪಡಿತರ ಸಾಗಾಟ: ಆಹಾರ ಇಲಾಖೆ ದಾಳಿ

ರಾಷ್ಟ್ರೀಯ ಲೋಕ ಅದಾಲತ್:೩೭೭೬ ಪ್ರಕರಣಗಳು ಇತ್ಯರ್ಥ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಆತ್ಮಗೌರವ ಉಳಿಸಿಕೊಳ್ಳಲು ಕಾಂಗ್ರೆಸ್ ಸೇರಿದೆ :ಶೆಟ್ಟರ
(ರಾಜ್ಯ ) ಜಿಲ್ಲೆ

ಆತ್ಮಗೌರವ ಉಳಿಸಿಕೊಳ್ಳಲು ಕಾಂಗ್ರೆಸ್ ಸೇರಿದೆ :ಶೆಟ್ಟರ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ತಾಳಿಕೋಟೆ: ಬಿಜೆಪಿಯಲ್ಲಿ ನಾನು ಲಿಂಗಾಯತರ ಹಿರಿಯ ನಾಯಕನಾಗಿದ್ದೆ. ಬಿಜೆಪಿ ಪಕ್ಷ ಗೆದ್ದರೆ ದೊಡ್ಡ ಪ್ರಮಾಣದ ಅಧಿಕಾರ ಕೊಡಬೇಕಾಗುತ್ತದೆ ಎಂದು ಕೆಲವರು ಬಿಜೆಪಿ ಪಕ್ಷವನ್ನು ಸ್ವಾಧೀನ ಪಡೆದುಕೊಳ್ಳಲು ನನಗೆ ಟಿಕೇಟ್ ತಪ್ಪಿಸಿದರು. ನನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರಿಂದ ಆತ್ಮ ಗೌರವ ಉಳಿಸಿಕೊಳ್ಳಲು ನಾನು ಕಾಂಗ್ರೇಸ್ ಪಕ್ಷವನ್ನು ಸೇರಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಅವರು ಸೋಮವಾರ ಪಟ್ಟಣದ ಸಂಗಮೇಶ್ವರ ಸಭಾ ಭವನದಲ್ಲಿ ಮುದ್ದೇಬಿಹಾಳ ಕಾಂಗ್ರೇಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರ ಪರವಾಗಿ ಮತ ಯಾಚಿಸಿ ಮಾತನಾಡಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ೩೦ ವರ್ಷಗಳಿಂದ ಪಕ್ಷವನ್ನು ಕಟ್ಟಿದೇನೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನನಗೆ ಲಿಂಗಾಯತ ಕೋಟಾದಲ್ಲಿ ಮುಖ್ಯಮಂತ್ರಿ ಆಗುವ ಅಂಜಿಕೆಯಿAದ ನನ್ನನ್ನು ಹೊರಹಾಕಿದರು. ನನಗೆ ಅಧಿಕಾರ ಬೇಡ ಕೇವಲ ಶಾಸಕನಾಗಿ ಇದ್ದರೆ ಸಾಕು ಎಂದರೂ ಸಹ ಟಿಕೇಟ್ ಇಲ್ಲಾ, ರಾಜಕೀಯದಿಂದ ನಿವೃತ್ತಿ ಆಗಿ ಎಂದು ಹೇಳಿದರು. ನಾನು ಯಾವ ತಪ್ಪಿಗೆ ನನಗೆ ಟಿಕೇಟ್ ಇಲ್ಲಾ ಅಂತಾ ಹೇಳಿದರೆ ಅವರ ಬಳಿ ಉತ್ತರ ಇಲ್ಲಾ, ಬಿಜೆಪಿಯಲ್ಲಿ ಯಾವುದೇ ಹಿರಿಯ ನಾಯಕರು ಉಳಿಯಬಾರದು ಎನ್ನುವದು ಕೆಲವರ ವ್ಯವಸ್ಥಿತ ತಂತ್ರವಾಗಿದೆ. ಕುಟುಂಬ ರಾಜಕಾರಣವನ್ನು ವಿರೋಧಿಸುವವನು ನಾನು. ನನ್ನ ಕುಟುಂಬಕ್ಕೆ ಟಿಕೇಟ್ ನೀಡುತ್ತೇವೆ ಎಂದರು. ಸ್ವಾಭಿಮಾನಕ್ಕೆ, ಆತ್ಮ ಗೌರವಕ್ಕೆ ದಕ್ಕೆ ಆಗಿದ್ದರಿಂದ ವಿರೋಧಿಸಿ ಬಿಜೆಪಿಯಿಂದ ಹೊರಬಂದೆ. ಗೌರವದಿಂದ ನಡೆಸಿಕೊಳ್ಳುವಂತೆ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದೇನೆ. ಇನ್ನು ಮುಂದೆ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲಿದ್ದೇನೆ ಎಂದರು.


ಇಡಿ ರಾಜ್ಯದಲ್ಲಿ ದೊಡ್ಡದಾದ ಬದಲಾವಣೆ ಆಗಿದೆ. ಹಲವು ನಾಯಕರು ಬಿಜೆಪಿಯನ್ನು ತೊರೆದಿದ್ದಾರೆ. ಸಿ.ಎಸ್.ನಾಡಗೌಡರು ಪ್ರಾಮಾಣಿಕವಾಗಿ ರಾಜಕಾರಣ ಮಾಡಿದ್ದಾರೆ. ಅಭಿವೃದ್ದಿ ಪರವಾಗಿ ಚಿಂತನೆ ಮಾಡುವ ನಾಡಗೌಡರನ್ನು ಗೆಲ್ಲಿಸಬೇಕು. ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದಾಗ ಹಲವು ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು. ಅವರೆಲ್ಲಾ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಪೂರಕವಾದ ಭರವಸೆಗಳನ್ನು ಕಾಂಗ್ರೇಸ್ ನೀಡಿದೆ. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ೧೪೦ ರಿಂದ ೧೫೦ ಸೀಟ್‌ಗಳನ್ನು ಪಡೆದು ಅಧಿಕಾರಕ್ಕೆ ಬರಲಿದೆ ಎಂದರು.
ಅಭ್ಯರ್ಥಿ ಸಿ.ಎಸ್.ನಾಡಗೌಡ (ಅಪ್ಪಾಜಿ) ಮಾತನಾಡಿ, ಎಲ್ಲಾ ನಾನೇ ಮಾಡಿದ್ದೇನೆ ಎನ್ನುವ ಅಂಹಕಾAರ ನಿಮ್ಮನ್ನೇ ತುಳಿಯಲಿದೆ. ನಿಮ್ಮ ದುಡ್ಡಿನ ಆಟ ನಡೆಯುವದಿಲ್ಲ. ಪೊಲೀಸ್ ಠಾಣೆ ರಾಜಕಾರಣ, ಜನರಿಗೆ ಬೆದರಿಕೆ ಹಾಕುವುದು ನಿಲ್ಲಿಸಬೇಕು. ನಮ್ಮ ಜನಾಂಗದಲ್ಲಿ ಒಡಕಿಲ್ಲ. ಜಾತಿಯ ಸಾಮರಸ್ಯವಿದೆ. ಮತ ಬೇಧವಿಲ್ಲ. ಅಂತಸ್ಥಿನ ಬೇದವಿಲ್ಲ. ಯುವಕರು ಹಿರಿಯರು ಕಿರಿಯರು ಎನ್ನುವ ಬೇಧವಿಲ್ಲ. ಸಿದ್ದಾಂತದ ಆಧಾರದ ಮೇಲೆ, ಎಲ್ಲರು ಒಗ್ಗಟ್ಟಾಗಿ ನೈತಿಕ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ. ವಿರೋಧಿಗಳು ಕೊಟ್ಟ ಸೀರೆ ಮೂಲೆಗೆ ಎಸೆಯಿರಿ. ದುಡ್ಡು ಕೊಟ್ಟರು ತೆಗೆದುಕೊಳ್ಳಿ, ಆದರೆ ಮತವನ್ನು ಮಾತ್ರ ಕಾಂಗ್ರೇಸ್ ಪಕ್ಷಕ್ಕೆ ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಮುಕಂಡರುಗಳಾದ ಎಮ್.ಬಿ.ನಾವಾದಗಿ, ಮದನಸಾ ನೀರಲಗಿ, ಬಾಲಾಜಿ ಶುಗರ್ಸ್ ಎಂಡಿ ವೆಂಕಟೇಶ ಪಾಟೀಲ, ಅರವಿಂದ ಕೊಪ್ಪ, ಎಮ್.ಎಮ್.ಪಾಟೀಲ, ಹಾಸ್ಯ ನಟ ರಾಜು ತಾಳಿಕೋಟಿ, ರಾಜು ಕಲಬುರ್ಗಿ, ಸಿ.ಬಿ.ಅಸ್ಕಿ, ಪರಶುರಾಮ ತಂಗಡಗಿ, ನಿವೃತ್ತ ಎಸ್.ಪಿ ಎಸ್.ಬಿ.ಕಟ್ಟಿಮನಿ, ಬಸನಗೌಡ ವಂದಲಿ, ವಿಜಯಸಿಂಗ ಹಜೇರಿ, ಕೆ.ಎಚ್.ಪಾಟೀಲ, ಪ್ರಭುಗೌಡ ಪಾಟೀಲ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಎಮ್.ಎಚ್.ಹಾಲಣ್ಣನವರ, ಸಿದ್ದಣ್ಣ ಮೇಟಿ, ರಾಜು ರಾಯಗೊಂಡ, ಸಿದ್ದನಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.

BIJAPUR NEWS congress udaya rashmi
Share. Facebook Twitter Pinterest Email Telegram WhatsApp
  • Website

Related Posts

ಸಮಾನತೆ ಸ್ಥಾಪನೆಗೆ ಪ್ರಜಾಪ್ರಭುತ್ವ ತತ್ವ ಸಹಕಾರಿ

ಅಕ್ರಮ ಪಡಿತರ ಸಾಗಾಟ: ಆಹಾರ ಇಲಾಖೆ ದಾಳಿ

ರಾಷ್ಟ್ರೀಯ ಲೋಕ ಅದಾಲತ್:೩೭೭೬ ಪ್ರಕರಣಗಳು ಇತ್ಯರ್ಥ

ಪೊಲೀಸ್ ವೈಫಲ್ಯ ಖಂಡಿಸಿ ಸೆ.೧೯ಕ್ಕೆ ಕಾಲ್ನಡಿಗೆ ಜಾಥಾ :ಕೂಚಬಾಳ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಸಮಾನತೆ ಸ್ಥಾಪನೆಗೆ ಪ್ರಜಾಪ್ರಭುತ್ವ ತತ್ವ ಸಹಕಾರಿ
    In (ರಾಜ್ಯ ) ಜಿಲ್ಲೆ
  • ಅಕ್ರಮ ಪಡಿತರ ಸಾಗಾಟ: ಆಹಾರ ಇಲಾಖೆ ದಾಳಿ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರೀಯ ಲೋಕ ಅದಾಲತ್:೩೭೭೬ ಪ್ರಕರಣಗಳು ಇತ್ಯರ್ಥ
    In (ರಾಜ್ಯ ) ಜಿಲ್ಲೆ
  • ಪೊಲೀಸ್ ವೈಫಲ್ಯ ಖಂಡಿಸಿ ಸೆ.೧೯ಕ್ಕೆ ಕಾಲ್ನಡಿಗೆ ಜಾಥಾ :ಕೂಚಬಾಳ
    In (ರಾಜ್ಯ ) ಜಿಲ್ಲೆ
  • ಇಂದು ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನೆ
    In (ರಾಜ್ಯ ) ಜಿಲ್ಲೆ
  • ಮಳೆಯಿಂದ ಮನೆಯೊಳಗೆ ನೀರು ನುಗ್ಗಿ ವಸ್ತುಗಳ ಹಾನಿ!
    In (ರಾಜ್ಯ ) ಜಿಲ್ಲೆ
  • ಸಂಗೀತ ಲೋಕದ ಮೇರು ಶಿಖರ ಪಂ.ಪುಟ್ಟರಾಜ ಗವಾಯಿಗಳು
    In (ರಾಜ್ಯ ) ಜಿಲ್ಲೆ
  • ಭೀಮಾ ನದಿಗೆ ಮತ್ತೆ ಅಪಾರ ಪ್ರಮಾಣದ ನೀರು!
    In (ರಾಜ್ಯ ) ಜಿಲ್ಲೆ
  • ಸಿದ್ದಸಿರಿ ಸೌಹಾರ್ದ ಸಹಕಾರಿಯಿಂದ ರೂ.25 ಲಕ್ಷ ದೇಣಿಗೆ
    In (ರಾಜ್ಯ ) ಜಿಲ್ಲೆ
  • ಮುಂಗಾರು ಬೆಳೆಹಾನಿಪುನಃ ಪರಿಶೀಲಿಸಿದ ಎಸಿ ವಸ್ತ್ರದ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.