ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆ: ಒಬ್ಬ ಸರ್ಕಾರಿ ನೌಕರನ ಯಶಸ್ಸು ಆತನ ನಗುವಿನಲ್ಲಿದೆ. ನೌಕರ ನಗುತ್ತಾ ನಗುತ್ತಾ ಕಚೇರಿ ಕಾರ್ಯವನ್ನು ಪ್ರಾರಂಭಿಸಿದರೆ ಇಡೀ ದಿನದ ಕಾರ್ಯ ಸಂತಸದಿಂದ ಮುಗಿಯುತ್ತದೆ ಎಂದು ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿಯ ಮುಖ್ಯಸ್ಥ ಎನ್. ಎಂ. ಬಿರಾದಾರ ಹೇಳಿದರು.
ಬಾಗಲಕೋಟೆಯಲ್ಲಿ, ಖಜಾನೆ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಗಾರ ಹಾಗೂ ವಿವಿಧ ಸಿಬ್ಬಂದಿಗಳ ಸತ್ಕಾರ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಾಗಾರವನ್ನು ಪ್ರಾರಂಭಿಸಿದ ಖ್ಯಾತ ಉಪನ್ಯಾಸಕ ಎಸ್. ಎಚ್. ಸಾಗರವರು, ಒತ್ತಡದ ಬದುಕಿನಲ್ಲಿ ಕಾರ್ಯ ನಿರ್ವಹಣೆ ಮಾಡುವದು ಹೇಗೆ? ಎಂಬುದರ ಬಗ್ಗೆ ಸವಿಸ್ತಾರವಾಗಿ ಮಾತನಾಡುತ್ತಾ ಅನೇಕ ಉದಾಹರಣೆಗಳನ್ನು ನೀಡಿ ಕಾರ್ಯಾಗಾರದಲ್ಲಿ ಭಾಗಿಯಾದವರಿಗೆ ಮನವರಿಕೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಎಸ್. ಬಿ. ಕುಂಬಾರ, ಮುಖ್ಯ ಅತಿಥಿಗಳಾಗಿ ಸಿದ್ದರಾಮೇಶ್ವರ ಉಕ್ಕಲಿ, ಎಸ್. ವಾಯ್. ಚಿಕ್ಕನಗೌಡರ, ಉಪಸ್ಥಿತಿಯಲ್ಲಿ ಶಿವನಗೌಡ ಎಸ್ ಬಿರಾದಾರ ಮತ್ತು ಜಿಲ್ಲೆಯ ಸಮಸ್ತ ಖಜಾನೆ ಇಲಾಖೆಯ ಅಧಿಕಾರಿ ಸಿಬ್ಬಂಧಿಗಳು, ಸಂಘದ ಪಧಾಧಿಕಾರಿಗಳು, ಅನ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶ್ರೀಶೈಲ ಕುಳ್ಳಲ್ಲಿ, ವಾಸುದೇವ ಹೂವನ್ನವರ ಕಾರ್ಯಕ್ರಮವನ್ನು ನಿರೂಪಿಸಿದರು.