ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ವಲಯದ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ವೀರಭದ್ರಪ್ಪ, ಗೌರವಾಧ್ಯಕ್ಷರಾಗಿ ಎಸ್. ಎನ್. ಪಡಶೆಟ್ಟಿ ಉಪಾಧ್ಯಕ್ಷರಾಗಿ ಬಶೀರಅಹ್ಮದ ನದಾಫ, ಕೋಶಾಧ್ಯಕ್ಷರಾಗಿ ಬಸವರಾಜ ಗಿರಿನಿವಾಸ ಇವರನ್ನು ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಶಡಶ್ಯಾಳ ಖಜಾಂಚಿ ಜುಬೇರ ಕೆರೂರ ಇವರುಗಳ ಹಿರಿತನದಲ್ಲಿ ನಗರ ವಲಯದ ಶಿಕ್ಷಕರ ಸಂಘದ ಸಂಘಟನಾ ಹಿತದೃಷ್ಟಿಯಿಂದ ನಗರ ಘಟಕವನ್ನು ಎಲ್ಲ ಪದಾಧಿಕಾರಿಗಳು ಹಾಗೂ ಹಿರಿಯ ಶಿಕ್ಷಕರ ಸಮ್ಮುಖದಲ್ಲಿ ಪುನಾರಚನೆ ಮಾಡಲಾಯಿತು.
ನಿಕಟಪೂರ್ವ ಅಧ್ಯಕ್ಷ ಎಸ್. ಎನ್.ಪಡಶೆಟ್ಟಿ ಅವರು ಸಂಘದ ದಾಖಲೆಗಳನ್ನು ನೂತನ ಅಧ್ಯಕ್ಷ ವೀರಭದ್ರಪ್ಪ ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷಿಣಿ ಎಸ್. ಎಸ್. ಪಾಟೀಲ, ಎನ್. ಎನ್. ಗಳವೆ ಜ್ಯೋತಿ ಹಿಪ್ಪರಗಿ, ಜಾವಿದ ಗರಡಿಮನಿ, ಕಾರ್ಯದರ್ಶಿ ಅಜೀಜ ಅರಳಿಮಟ್ಟಿ, ಶಕುಂತಲಾ ಹಿರೇಮಠ, ಮಂಜುನಾಥ ಆರೇಶಂಕರ, ನಗರ ವಲಯದ ಹಿರಿಯ ಮುಖ್ಯಗುರುಗಳು ಹಾಗೂ ಶಿಕ್ಷಕರು ಹಾಜರಿದ್ದು ನೂತನ ಅಧ್ಯಕ್ಷರಿಗೆ ಮತ್ತು ನೂತನವಾಗಿ ಜಿ. ಓ. ಸಿ. ಸಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ಸಯ್ಯದ್ ಜುಬೇರ ಕೆರೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.