ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣ ವಲಯ ವಿಜಯಪುರ ಹಾಗೂ ಶ್ರೀ ಶಾಂತವೀರ ಪ್ರೌಢ ಶಾಲೆ ಬಬಲೇಶ್ವರ ಇವರ ಸಹ ಯೋಗದಲ್ಲಿ ಟಾರ್ಗೆಟ್ 625 ವಿನೂತನ ಕಾರ್ಯಕ್ರಮದಲ್ಲಿ ಇಡಿ ರಾಜ್ಯದಲ್ಲಿಯೇ ಅತೀ ಹೆಚ್ಚು ಮಕ್ಕಳು 625 ಕ್ಕೆ 625 ಅಂಕಗಳನ್ನು ಪಡೆಯುವವರ ಸಂಖ್ಯೆ ನಮ್ಮ ವಿಜಯಪುರ ಗ್ರಾಮೀಣ ವಲಯದಿಂದ ಪಡೆಯುವಂತಾಗಲು ಈ ಕಾರ್ಯಾಗಾರ ಬಹಳಷ್ಟು ಸಹಕಾರಿಯಾಗಿದೆ, ತಾಲೂಕಿನ ಎಲ್ಲ 21 ಪರೀಕ್ಷೆ ಕೇಂದ್ರದದಲ್ಲಿ ಆಯಾ ಪ್ರೌಢ ಶಾಲೆಯ ಆಯ್ದ ಮಕ್ಕಳನ್ನು ಕರೆಸಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಸರಳ ವಿಧಾನದ ಮೂಲಕ 625 ಕ್ಕೆ 625 ಅಂಕ ಪಡೆಯುವಂತೆ ಉಪಯುಕ್ತವಾಗಿದೆ, ಈ ತಿಂಗಳ ಕೊನೆಗೆ ನುರಿತ ಸಂಪಂನ್ಮೂಲ ವ್ಯಕ್ತಿಗಳಿಂದ ಪ್ರಶ್ನೆ ಪತ್ರಿಕೆ ತಯಾರಿಸಿ ಈ ಮಕ್ಕಳಿಗೆ ಒಂದು ಪರೀಕ್ಷೆ ನಡೆಸಿ ಇದರಲ್ಲಿ ಅತೀ ಹೆಚ್ಚು ಅಂಕ ಪಡೆಯುವ ಮಕ್ಕಳಿಗೆ ಮುಂದಿನ ಪೆಬ್ರುವರಿ ತಿಂಗಳಿಂದ ರಾಜ್ಯ ಸಂಪಂನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಿ ಜಿಲ್ಲೆಯಲ್ಲಿಯೇ625 ಕ್ಕೆ 625 ಅಂಕ ಪಡೆಯುವವರ ಸಂಖ್ಯೆ ಹೆಚ್ಚಿಸುವಂತೆ ವಿಶಿಷ್ಟ ಕಾರ್ಯಕ್ರಮವನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಪ್ರಮೋದಿನಿ ಎಸ್ ಬಳೋಲಮಟ್ಟಿ ಹಮ್ಮಿಕೊಂಡಿದ್ದಾರೆ ಎಂದು ಶಿಕ್ಷಣ ಸಂಯೋಜಕರಾದ ಪ್ರಭು ಬಿರಾದಾರ ಪ್ರಾಸ್ತವಿಕವಾಗಿ ಮಾತನಾಡಿದರು.
ಈ ವಿನೂತನ ಟಾರ್ಗೆಟ್ -625 ಕಾರ್ಯಕ್ರಮ ಅಧ್ಭುತವಾಗಿದೆ ಹಾಗೂ ಯಶಸ್ವೀ ಆಗಲಿ ಎಂದು ಎಸ್. ಪಿ. ಬಿರಾದಾರ ಮುಖ್ಯೋಪಾಧ್ಯಾಯರು ಶಾಂತವೀರ ಪ್ರೌಢ ಶಾಲೆ ಬಬಲೇಶ್ವರ ಇವರು ಶುಭ ಹಾರೈಸಿದರು.
ಕಾವೇರಿ ಅಮರಪ್ಪಗೋಳ, ಹಾಗೂ ಸಾನಿಯಾ ಬಬಲೇಶ್ವರ ಅನುದಾನಿತ ಶಾಂತವೀರ ಪ್ರೌಢ ಶಾಲೆ ಬಬಲೇಶ್ವರ ಮಾತನಾಡಿ, SSLC ವಿದ್ಯಾರ್ಥಿಯು ಟಾರ್ಗೆಟ್ -625 ಕಾರ್ಯಕ್ರಮದಿಂದ ನಾನು ಈ ವರ್ಷ 625 ಕ್ಕೆ 625 ಅಂಕ ಪಡೆದುಕೊಂಡೆ ತಿರುತ್ತೇನೆ, ನನ್ನೆಲ್ಲ ಸಮಸ್ಯೆಗಳಿಗೆ ಈ ಕಾರ್ಯಾಗಾರ ಪರಿಹಾರ ನೀಡಿದೆ, ನಾನು ನನ್ನ ಶಾಲೆಯಲ್ಲಿ SSLC RANK ಬೋರ್ಡ್ ದಲ್ಲಿ ಕೂಡಿಸುತ್ತೇವೆ. ನುರಿತ ಸಂಪನ್ಮೂಲ ಶಿಕ್ಷಕರು ಎಲ್ಲ ಸಮಸ್ಯೆಗಳನ್ನು ಹಾಗೂ 625ಕ್ಕೆ 625 ಪಡೆಯುವ ಹಲವಾರು ಸರಳ ವಿಧಾನಗಳನ್ನು ಹೇಳಿಕೊಟ್ಟರು ಎಂದು ಅನಿಸಿಕೆ ಹಂಚಿಕೊಂಡಳು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಪಾಂಡುರಡ್ಡಿ ಯರಗಟ್ಟಿ , ವಿವಿಧ ಶಾಲೆಯ 5 ವಿದ್ಯಾರ್ಥಿಗಳು ಹಾಜರಿದ್ದರು, ನಿರೂಪಣೆಯನ್ನು ಎಸ್. ಪಿ. ಚವಾಣ್, ಸ್ವಾಗತವನ್ನು ಬಡಿಗೇರ, ವಂದನಾರ್ಪಣೆಯನ್ನು ನಾಯಕೋಡಿ ನೆರವೇರಿಸಿದರು.