ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ನಾಗೋಡ ಕ್ರಾಸ್ ಸಮೀಪ ಅಪರಿಚಿತ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿ ಹೊರಟಿದ್ದ ಇಬ್ಬರಲ್ಲಿ ಒರ್ವ ಸ್ಥಳದಲ್ಲಿಯೇ ಮೃತಪಟ್ಟರೆ, ಇನ್ನೊರ್ವ ಆಸ್ಪತ್ರೆಯಲ್ಲಿ ಮೃತ ಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಇರ್ವರೂ ಬಸವನಬಾಗೇವಾಡಿ ಪಟ್ಟಣದ ನಿವಾಸಿಗಳು. ಸ್ಥಳದಲ್ಲಿ ಸಂತೋಷ ಹಿಂಗೋಲಿ(೩೬) ಮೃತ ಪಟ್ಟ ದುರ್ದೈವಿ. ಆಸ್ಪತ್ರೆಯಲ್ಲಿ ಅಮೂಲ(ತುಷಾರ) ಜಾಧವ(೩೪) ಮೃತ ಪಟ್ಟ ದುರ್ದೈವಿ. ಬಸವನಬಾಗೇವಾಡಿಗೆ ಬೈಕ್ ಮೇಲೆ ಬರುವ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಹೋದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪಿಐ ಗುರುಶಾಂತ ದಾಶ್ಯಾಳ ತಿಳಿಸಿದ್ದಾರೆ. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಪಟ್ಟ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

