ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜ.೦೩ ಶುಕ್ರವಾರದಂದು ಸಾಯಂಕಾಲ ೫ಗಂಟೆಗೆ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹೆಚ್.ಟಿ.ಕುಲಕರ್ಣಿ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ವಿಜಯಪುರ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಬಿಇಒ ಸದಸ್ಯ ಮಂಜುನಾಥ ಎಂ.ಜುನಗೊಂಡ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ, ಅಥರ್ಗಾ ಜ್ಞಾನ ಭಾರತಿ ಶಾಲೆಯ ಆಡಳಿತಾಧಿಕಾರಿ ಆರ್.ಬಿ.ಪುರೋಹಿತ, ನಾಗರಹಳ್ಳಿ ಬಸವ ಸಮಿತಿ ಅಧ್ಯಕ್ಷ ಎನ್.ಎಸ್.ಪಾಟೀಲ ಇರಲಿದ್ದಾರೆ. ಪಾಲಕ ಪ್ರತಿನಿಧಿಯಾಗಿ ಪತ್ರಕರ್ತ ಉಪನ್ಯಾಸಕ ಮಹಾಂತೇಶ ನೂಲಾನವರ ವಹಿಸಿಕೊಳ್ಳುವರು ಎಂದು ಸಂಸ್ಥೆಯ ಆಡಳಿತಾಧಿಕಾರಿ ಹೆಚ್.ಜಿ. ಪೋತದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
