ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಷ್ಟ್ರೀಯ ಟಿ-10 ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಉತ್ತರ ಕರ್ನಾಟಕ ಹಾಗೂ ಕರ್ನಾಟಕ ರಾಜ್ಯದ ಮಹಿಳಾ ಹಾಗೂ ಪುರುಷ ತಂಡಗಳಿಗೆ ಬೀಳ್ಕೋಡುವ ಸಮಾರಂಭ ಜರುಗಿತು.
ಜನೇವರಿ 3 ರಿಂದ 7 ರವರೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜರುಗಲಿರುವ ರಾಷ್ಟ್ರೀಯ ಟಿ-10 ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಉತ್ತರ ಕರ್ನಾಟಕ ಹಾಗೂ ಕರ್ನಾಟಕ ರಾಜ್ಯದಲ್ಲಿ ಎರಡು ಮಹಿಳಾ ಹಾಗೂ ಎರಡು ಪುರುಷ ತಂಡಗಳು ಭಾಗವಹಿಸಲು ಹೊರಡುತ್ತಿದ್ದು ಈ ತಂಡಗಳಿಗೆ ಇಂದು ವಿಜಯಪುರ ನಗರದ ಡಾ. ಬಿ.ಆರ್. ಅಂಬೇಡ್ಕರ ಕ್ರೀಡಾಂಗಣದಲ್ಲಿ ಸಮವಸ್ತ್ರ ವಿತರಣೆ ಮಾಡಿ ಬೀಳ್ಕೊಡಲಾಯಿತು.
ಸಮಾರಂಭ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ. ಜಾವಿದ ಜಮಾದಾರವರು ಮಾತನಾಡುತ್ತಾ ನಮ್ಮ ವಿಜಯಪುರ ಜಿಲ್ಲೆಯಿಂದ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ನಲ್ಲಿ ಆಡುತ್ತಿರುವದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಶ್ರದ್ಧೆ, ನಿಷ್ಠೆ ಹಾಗೂ ಪರಿಶ್ರಮದಿಂದ ಪ್ರತಿನಿತ್ಯ ತರಬೇತಿ ಪಡೆದಿದೆಯಾದರೆ ಗೆಲವು ಖಚಿತ ನಾವು ಮಹಿಳಾ ಕ್ರಿಕೆಟ್ ಸಂಘಟನೆಯನ್ನು ಹುಟ್ಟು ಹಾಕಿ ಸತತ ಪ್ರಯತ್ನದ ಮೂಲಕ ಕ್ರಿಕೆಟ್ ಜೀವಂತವಾಗಿರಿಸಲು ಹಿರಿಯರು ಸೇರಿದಂತೆ ಎಲ್ಲ ವರ್ಗದ ಪ್ರಮುಖರು ಶ್ರಮಿಸುತ್ತಿದ್ದಾರೆ ಇದರ ಸದುಪಯೋಗವನ್ನು ವಾರಾಣಿಸಿಗೆ ಹೋಗುತ್ತಿರುವ ತಂಡಗಳು ಹಾಗೂ ಕ್ರೀಡಾಪಟುಗಳು ಪಡೆದುಕೊಳ್ಳಬೇಕೆಂದು ನುಡಿದರು.
ಈ ಸಂದರ್ಭದಲ್ಲಿ ಎನ್.ಎಂ.ಹೊಟಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಫಯಾಜ ಕಲಾದಗಿ, ಸಿ.ಎಸ್. ನಿಂಬಾಳ, ನಾಗರಾಜ ಲಂಬು, ಶ್ರೀಮತಿ ಶಶಿಕಲಾ ಇಜೇರಿ, ಶ್ರೀಮತಿ ಲಲಿತಾ ದೊಡಮನಿ, ಶ್ರೀಮತಿ ಪುಷ್ಪಾ ಮಹಾಂತಮಠ, ಶ್ರೀಮತಿ ವಿದ್ಯಾ ಕೊಟ್ಟೆಣ್ಣವರ, ಶ್ರೀಮತಿ ಇಂದುಮತಿ ಕನ್ನೂರ, ರಾಜೇಶ ತೊರವಿ, ರಾಜಶೇಖರ ಕುಚಬಾಳ, ಕುಮಾರಿ ಶಿಫಾ ಜಮಾದಾರ, ಸೋಮಶೇಖರ ರಾಠೋಡ, ಸಂಕೇತ ನಾಯಕ, ಶ್ರೀಕಾಂತ ಕಾಖಂಡಕಿ, ಪ್ರಕಾಶ ರಾಠೋಡ, ಚಾಂದವಸೀಮ ಮುಕಾದಮ, ಸಲೀಮ ಬೇಪಾರಿ, ಗಣೇಶ ಬೊಸ್ಲೆ, ರಾಬರ್ಟ್ ಹೊಸಳ್ಳಿ, ಜಗದೀಶ ದೊಡಮನಿ ಉಪಸ್ಥಿತರಿದ್ದರು.
ಡಾ.ಅಶೋಕಕುಮಾರ ಜಾಧವ ಕಾರ್ಯಕ್ರಮವನ್ನು ನಿರೂಪಿಸಿದರು. ಸುರೇಶ ಬಿಜಾಪುರ ವಂದಿಸಿದರು.

