ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಚಿಕ್ಕರೂಗಿ ಗ್ರಾಮದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆಯಲ್ಲಿ ಸಮಾನ ಮನಸ್ಕರ ಪೆನಲ್‌ನ ಎಲ್ಲ ೧೨ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ತಾಲ್ಲೂಕಿನ ಚಿಕ್ಕರೂಗಿ ಗ್ರಾಮದ ವಿ.ಪ್ರಾ.ಗ್ರಾ.ಕೃ.ಸ. ಸಂಘಕ್ಕೆ ಶನಿವಾರದಂದು ಜರುಗಿದ ಚುನಾವಣೆಯಲ್ಲಿ ಸಮಾನ ಮನಸ್ಕರ ಪೆನಲ್‌ನ ನಾಗಣ್ಣ ಮುಳಜಿ, ಸೋಮನಗೌಡ ಪಾಟೀಲ(ಕಡ್ಲೇವಾಡ), ಜಟ್ಟೇಪ್ಪ ಚಂಡಕಿ, ಪೂನ್ನಪ್ಪ ಖೈರಾವಿಕರ, ಹಣಮಂತ್ರಾಯ ಬಿರಾದಾರ, ಗುರಣ್ಣ ಅಂಜುಟಗಿ, ಚಂದ್ರಕಾಂತ ಬಿರಾದಾರ, ಸುಜಾತಾ ಬಾಗಲಕೋಟ, ಇಂದ್ರಾಬಾಯಿ ನಾಟೀಕಾರ, ರಾಜಬಕ್ಸರ ಚಾಂದಕವಠೆ, ಲಕ್ಷ್ಮಣ ತಳಕೇರಿ, ಪಿಡ್ಡಪ್ಪ ಗಣಜಲಿ ಜಯಗಳಿಸಿದರು. ನಂತರ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಭೀಮರಾಯಗೌಡ ಬಿರಾದಾರ ಮಾತನಾಡಿ, ನಮ್ಮ ಸಂಘವು ಸುಮಾರು ೨೦ ಕೋಟಿ. ರೂಗಳಷ್ಟು ವ್ಯವಹಾರ ನಡೆಸಿ ರೈತರಿಗೆ ಸಹಕಾರಿಯಾಗಿದೆ. ನಾವು ಸಂಘದ ಬೆಳವಣಿಗೆಗೆ ನಮ್ಮ ಪೆನಲ್‌ನಿಂದ ಎಲ್ಲರೂ ಶ್ರಮವಹಿಸಿದ್ದು, ಮುಂದೆ ಕೂಡಾ ಸಂಘದ ಬೆಳವಣಿಗೆ ನಮ್ಮೇಲ್ಲರ ಸಹಕಾರವಿದೆ. ಮುಂದೆಯೂ ಕೂಡಾ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ. ಆಗ ಸಂಘದ ಬೆಳವಣಿಗೆ ಹೆಚ್ಚಾಗಲೂ ಸಾಧ್ಯ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಗೊಂಡಪ್ಪಗೌಡ ಪಾಟೀಲ, ಜವಾಹರ್ ದೇಶಪಾಂಡೆ, ಗುಂಡಪ್ಪಗೌಡ ಪಾಟೀಲ, ರಾಜೇಂದ್ರಕುಮಾರ ಚಂಡಕಿ, ಎ.ಬಿ.ಕೊಂಡಗೊಳಿ, ವಕೀಲ ಶ್ರೀಶೈಲ ಮುಳಜಿ, ತಾ.ಪಂ ಮಾಜಿಸದಸ್ಯ ವಿಠ್ಠಲ ದೆಗಿನಾಳ, ಸಾಯಿಕುಮಾರ ಬಿಸನಾಳ, ಚಂದ್ರಶೇಖರ ಗಣಜಲಿ, ಶಶಿಕಾಂತ ಚಂಡಕಿ, ಈರಣ್ಣಶಾಸ್ರೀ ಬಿರಾದಾರ, ಗೊಲ್ಲಾಳ ಬಾಗಲಕೋಟ, ಶ್ರೀಮಂತ ಬಾಗಲಕೋಟ, ಕುಮಾರ್‌ಗೌಡ ಬಿರಾದಾರ, ಬಸವರಾಜ ಇಮ್ಮಣ, ಜಾವೀದ್ ಕೊಲ್ಹಾರ, ನಸ್ರೂದ್ದಿನ್ ಚಾಂದಕವಠೆ, ಬಾಬು ಖೊಜಗೀರ ಇದ್ದರು.

