ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ವಿದ್ಯಾಚೇತನ ಪ್ರಕಾಶನದಿಂದ ಪ್ರತಿವರ್ಷ ಕೊಡ ಮಾಡುವ ಬಾಲ ಸಾಹಿತ್ಯ ಪುರಸ್ಕಾರಕ್ಕಾಗಿ ೨೦೨೪ರಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಮಕ್ಕಳ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ.
ಈ ಪುರಸ್ಕಾರಕ್ಕಾಗಿ ಆಸಕ್ತ ಲೇಖಕರು ಮಕ್ಕಳ ಸಾಹಿತ್ಯದ ಕಥೆ, ಕವನ, ಕಾದಂಬರಿ ಮೂರು ಪ್ರಕಾರದ ಕೃತಿಗಳನ್ನು ಕಳುಹಿಸಬಹುದು. ಒಮ್ಮೆ ಒಂದು ಪ್ರಕಾರದಲ್ಲಿ ಪ್ರಶಸ್ತಿ ಪಡೆದವರು ಮುಂದೆ ಅದೇ ಪ್ರಕಾರದ ಪ್ರಶಸ್ತಿಗಾಗಿ ಕಳುಹಿಸುವಂತಿಲ್ಲ. ಒಮ್ಮೆ ಪ್ರಶಸ್ತಿ ಪಡೆದವರು ಪ್ರಶಸ್ತಿ ಪಡೆದ ಮೂರು ವರುಷಗಳ ನಂತರ ಮತ್ತೊಂದು ಪ್ರಕಾರದ ಕೃತಿಗಳನ್ನು ಪ್ರಶಸ್ತಿಗಾಗಿ ಕಳುಹಿಸಬಹುದು.
ಕೃತಿಯ ನಾಲ್ಕು ಪ್ರತಿಗಳನ್ನು ರಿಜಿಸ್ಟರ್ಡ್ ಅಂಚೆ ಮೂಲಕ ಅಥವಾ ಕೋರಿಯರ್ ಮುಖಾಂತರ ಜ.೨೫ ರೊಳಗಾಗಿ ಹ.ಮ.ಪೂಜಾರ ನಿವೃತ್ತ ಶಿಕ್ಷಕರು, ಶ್ರೀಸಂಗಮೇಶ್ವರ ಕಾಲೋನಿ ಸಿಂದಗಿ-೫೮೬೧೨೮ ಜಿಲ್ಲಾ ವಿಜಯಪುರ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು. ಕಥೆ, ಕವನ, ಕಾದಂಬರಿ ಮೂರು ಪ್ರಕಾರದ ಮಕ್ಕಳ ಸಾಹಿತ್ಯಕ್ಕೆ ಪ್ರಶಸ್ತಿ ಪ್ರತ್ಯೇಕವಾಗಿ ತಲಾ ೫ ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ೯೪೪೮೯೮೬೨೨೨ ಈ ನಂಬರಿಗೆ ಸಂಪರ್ಕಿಸಬೇಕು ಎಂದು ಲೇಖಕ, ಪ್ರಕಾಶಕ ಹ.ಮ. ಪೂಜಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

