Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಹೊಯ್ಸಳ, ಕೆಳದಿ ಚೆನ್ನಮ್ಮ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ

ಉತ್ತಮ ಸೇವೆಗೆ ಸಿದ್ರಾಮ ಇಟ್ಟಿಗೆ ಐಪಿಪಿಬಿ ಪ್ರಶಸ್ತಿ

ನಿಲ್ಲಿಸಿದ್ದ ಟಿಪ್ಪರ್‌ಗೆ ಬೈಕ್ ಡಿಕ್ಕಿ! ಸವಾರ ಸ್ಥಳದಲ್ಲೇ ಸಾವು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಭೂತಾಯಿಗೆ ಚರಗ ಚೆಲ್ಲಿ ಸಂಭ್ರಮಿಸಿದ ರೈತರು
(ರಾಜ್ಯ ) ಜಿಲ್ಲೆ

ಭೂತಾಯಿಗೆ ಚರಗ ಚೆಲ್ಲಿ ಸಂಭ್ರಮಿಸಿದ ರೈತರು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಸಿಂದಗಿ: ಹಿಂದೆಲ್ಲಾ ಈ ಚರಗ ಹಬ್ಬದ ಸಂಭ್ರಮ ಸವಿಯಲು ರೈತರು ನಸುಕಿನಲ್ಲಿಯೇ ಎದ್ದು ಎತ್ತಿನಗಾಡಿಗೆ ಬಣ್ಣ ಬಳಿದು ಎತ್ತುಗಳ ಮೈತೊಳೆದು, ಗಾಡಿಯ ಗಾಲಿಯ ಕೀಲುಗಳಿಗೆ ಎಣ್ಣೆ ಬತ್ತಿ ಹಾಕಿ, ಗಾಡಿಗೆ ಕಮಾನು ಕಟ್ಟಿ ಹೂಗಳಿಂದ ಅಲಂಕಾರ ಮಾಡಿ ಬಣ್ಣ ಹಚ್ಚಿ, ಕೊಡುಗಳಿಗೆ ಹಣಸು ಹಾಕಿ ಜೂಲು, ಗೊಂಡೆ, ಬಣ್ಣದ ಗಾಜಿನ ತುಕ್ಕಡಿಗಳಿಂದ ಜೊಡಿಸಿದ ಬಾಸಿಂಗ್(ಹಣೆಪಟ್ಟಿ) ಕಟ್ಟುತ್ತಿದ್ದರು. ಎತ್ತುಗಳ ಕೊರಳಿಗೆ ಗಂಟೆಗಳ ಸರ ಕಟ್ಟಿ, ಬೆನ್ನ ಮೇಲೆ ಹಲವು ಬಣ್ಣ ಬಣ್ಣದ ಗಜ್ಜರಾ ಹೊದಿಸುತ್ತಿದ್ದರು.
ತಾಲೂಕಿನಲ್ಲಿ ರೈತರು ಪ್ರತಿವರ್ಷ ಎಳ್ಳು ಅಮವಾಸ್ಯೆ ದಿನದಂದು ತಮ್ಮ ತಮ್ಮ ಹೊಲಗಳಿಗೆ ತೆರಳಿ ಚರಗ ಚೆಲ್ಲುವ ಮೂಲಕ ಭೂ ತಾಯಿಗೆ ನೈವೇದ್ಯ ಅರ್ಪಿಸುವ ಸಂಪ್ರದಾಯಕ್ಕೆ ಈ ಬಾರಿ ಹೇಳಿಕೊಳ್ಳುವಷ್ಟು ಸಂಭ್ರಮ ಇರಲಿಲ್ಲ.
ಹೊಸ ಹೊಸ ಬಟ್ಟೆಗಳನ್ನು ತೊಟ್ಟ ಮಕ್ಕಳು, ಇಲಕಲ್ ಸೀರೆಗಳನ್ನು ಉಟ್ಟ ಹೆಣ್ಣು ಮಕ್ಕಳು, ಗಾಡಿಯಲ್ಲಿ ಬಗೆ ಬಗೆಯ ಅಡುಗೆ ಪದಾರ್ಥಗಳ ಬುಟ್ಟಿ, ಗಂಟುಗಳೊಂದಿಗೆ ಕುಳಿತು ಪ್ರತಿ ರೈತ ಕುಟುಂಬಕ್ಕೊಂದರಂತೆ ಬಂಡಿಗಳು ಸಾಲಾಗಿ ಹೊಲಗಳತ್ತ ಹೊರಟರೆ ಅದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿ ಗೋಚರಿಸುತ್ತಿತ್ತು. ಆದರೆ ಇಂದು ಜನಪದ ಸೊಗಡನ್ನು ವಿಜೃಂಬಿಸುವ ಎಳ್ಳು ಅಮವಾಸ್ಯೆಯ ಈ ಸಂಭ್ರಮವು ಕೇವಲ ನೆನಪುಗಳಾಗಿ ಉಳಿದುಕೊಂಡಿವೆ.
ಇಂದು ಎತ್ತಿನ ಗಾಡಿಯ ಬದಲಾಗಿ ಟ್ರ್ಯಾಕ್ಟರ್, ಟಂಟಂ ಆವರಿಸಿಕೊಂಡಿವೆ ಧನ-ಕರುಗಳಿಗೆ ಮೇವನ್ನು ಪೂರೈಸಲು ರೈತ ಅಸಾಯಕರಾಗಿದ್ದರಿಂದ ಬಹುತೇಕ ದನ-ಕರುಗಳು ಕಟುಕರ ಪಾಲಾಗಿ ಕಸಾಯಿಖಾನೆ ಸೇರಿ ಎಷ್ಟೋ ದಿನಗಳಾಗಿವೆ. ಹೀಗಾಗಿ ಎಳ್ಳು ಅಮವಾಸ್ಯೆ ಹಬ್ಬ ತನ್ನ ಹಿಂದಿನ ಗತ್ತನ್ನು ಕಳೆದುಕೊಂಡಿದ್ದರೂ ಆಚರಣೆಯ ವಿಷಯದಲ್ಲಿ ರೈತರ ಶ್ರದ್ಧಾ-ಭಕ್ತಿಗೆ ಕಿಂಚಿತ್ತೂ ಕುಂದು ಬಂದಿಲ್ಲ. ಹಬ್ಬದ ಅಡುಗೆಯ ವೈವಿಧ್ಯತೆಯಲ್ಲಿ ಸ್ವಲ್ಪವು ವ್ಯತ್ಯಾಸ ಕಂಡಿಲ್ಲ. ನಗರ ಹಾಗೂ ಗ್ರಾಮೀಣ ಜನತೆ ತಮ್ಮ ಕುಟುಂಬ ಸಮ್ಮೇತ ದ್ವಿಚಕ್ರ, ತ್ರಿಚಕ್ರ ವಾಹನ ಸೇರಿದಂತೆ ವಿವಿಧ ವಾಹನಗಳಲ್ಲಿ ತಮ್ಮ ಬಂಧು ಮಿತ್ರರ ಹೊಲಗಳಿಗೆ ತೆರಳುವ ದೃಶ್ಯ ಎಲ್ಲೆಡೆ ಕಂಡುಬಂದಿತು.
ಆಯಾ ಹೊಲದಲ್ಲಿ ಭೂಮಿಗೆ ಪೂಜೆ ಸಲ್ಲಿಸಿ ಮನೆಯಿಂದ ತಂದ ಸಜ್ಜೆ ಕಡಬು, ಸಜ್ಜೆಯ ರೊಟ್ಟಿ, ಹೂರಣ ಹೋಳಿಗೆ, ಬದನೆಕಾಯಿ, ಕುಂಬಳಕಾಯಿ ಬರ್ಥ, ಶೆಂಗಾ ಚಟ್ನಿ, ಬಗೆ ಬಗೆಯ ಕಾಳಿನ ಪಲ್ಯೆ ಸೇರಿದಂತೆ ಎಲ್ಲ ಅಡುಗೆಯ ಪದಾರ್ಥಗಳನ್ನು ಒಂದೇ ತಟ್ಟೆಯಲ್ಲಿ ಮಿಶ್ರಣ ಮಾಡಿ ಚೌಂಗಿ ಬಲೌವೋ ಚಿಕ್ಕಡಿ ಕಲವೋ ಎಂದು ಹೆಂಗಳಿಯರು ಹೇಳುತ್ತ ಭೂ ತಾಯಿಗೆ ಚರಗ ಚಲ್ಲಿದರು. ನಂತರ ಎಲ್ಲರೂ ಸಾಮೂಹಿಕವಾಗಿ ಭಾರಿ ಭೋಜನದ ಸವಿ ಉಂಡು ಬಳಿಕ ಹೆಣ್ಣು ಮಕ್ಕಳು ಹರಟೆಯಲ್ಲಿ ಮಗ್ನರಾದರೆ, ಮಕ್ಕಳು ನಗೆ ಚಟಾಕೆಯಲ್ಲಿ ತೆಲಾಡಿದರು. ಹಿರಿಯರು ವಿಶ್ರಾಂತಿಗೆ ಜಾರಿದರೆ, ಯುವಕರು ಬೇರೆ ಬೇರೆ ಆಟಗಳಲ್ಲಿ ತೊಡಗಿ ಸಂಜೆಯಾಗುತ್ತಿದ್ದಂತೆ ಇಡೀ ದಿನದ ಸಂಭ್ರಮವನ್ನು ಮೇಲಕು ಹಾಕುತ್ತಾ ಎಲ್ಲ ರೈತ ಕುಟುಂಬಗಳು ಮನೆಯ ದಾರಿ ಹಿಡಿಯುತ್ತಿದ್ದುದು ಸಾಮಾನ್ಯವಾಗಿತ್ತು.
ಈ ಸಂದರ್ಭದಲ್ಲಿ ಎಂ.ಎಂ.ಹಂಗರಗಿ, ವಿ.ಬಿ.ಕುರುಡೆ, ಬಿಇಓ ಮಹಾಂತೇಶ ಯಡ್ರಾಮಿ, ಪತ್ರಕರ್ತರ ಸಂಘದ ಅಧ್ಯಕ್ಷ ಪಂಡಿತ ಯಂಪೂರೆ, ಸಂಗನಗೌಡ ಪಾಟೀಲ ಅಗಸಬಾಳ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಚಂದ್ರಶೇಖರ ನಾಗರಬೆಟ್ಟ, ಕಸಾಪ ಅಧ್ಯಕ್ಷ ಶಿವಾನಂದ ಬಡಾನೂರ, ಮಹಾಂತೇಶ ನೂಲಾನವರ, ಶಾಂತಗೌಡ ಪಾಟೀಲ, ಚನ್ನಪ್ಪಗೌಡ ಪಾಟೀಲ ಡಾ.ರಾಹುಲ ಯಂಪೂರೆ, ಪರಮಾನಂದ ಪಟ್ಟಣಶೆಟ್ಟಿ, ರೂಪಾ ಪಟ್ಟಣಶೆಟ್ಟಿ, ಲಕ್ಷ್ಮಿ ಯಂಪೂರೆ, ರಶ್ಮೀ ನೂಲಾನವರ, ಶ್ರೀಲಿಲಾ ಯಂಪೂರೆ, ಮಂಜುಳಾ ಹತ್ತಳ್ಳಿ, ರೇಣುಕಾ ಭೀ.ಯಂಪೂರೆ, ನವೀನ ಶೆಳ್ಳಗಿ, ರಾಕೇಶ ಯಂಪೂರೆ, ಹೇಮಾ ಚಾಕರೆ, ರಂಜಿತ ಯಂಪೂರೆ ಸೇರಿದಂತೆ ಅನೇಕರು ಸಂಭ್ರಮದಲ್ಲಿ ತೊಡಗಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಹೊಯ್ಸಳ, ಕೆಳದಿ ಚೆನ್ನಮ್ಮ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ

ಉತ್ತಮ ಸೇವೆಗೆ ಸಿದ್ರಾಮ ಇಟ್ಟಿಗೆ ಐಪಿಪಿಬಿ ಪ್ರಶಸ್ತಿ

ನಿಲ್ಲಿಸಿದ್ದ ಟಿಪ್ಪರ್‌ಗೆ ಬೈಕ್ ಡಿಕ್ಕಿ! ಸವಾರ ಸ್ಥಳದಲ್ಲೇ ಸಾವು

ಪಿಎಸ್‌ಐ ತಿಪರೆಡ್ಡಿ ಗೆ ಚಕ್ರವರ್ತಿ ನ್ಯೂಸ್ ತಂಡದಿಂದ ಸನ್ಮಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಹೊಯ್ಸಳ, ಕೆಳದಿ ಚೆನ್ನಮ್ಮ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಉತ್ತಮ ಸೇವೆಗೆ ಸಿದ್ರಾಮ ಇಟ್ಟಿಗೆ ಐಪಿಪಿಬಿ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ನಿಲ್ಲಿಸಿದ್ದ ಟಿಪ್ಪರ್‌ಗೆ ಬೈಕ್ ಡಿಕ್ಕಿ! ಸವಾರ ಸ್ಥಳದಲ್ಲೇ ಸಾವು
    In (ರಾಜ್ಯ ) ಜಿಲ್ಲೆ
  • ಪಿಎಸ್‌ಐ ತಿಪರೆಡ್ಡಿ ಗೆ ಚಕ್ರವರ್ತಿ ನ್ಯೂಸ್ ತಂಡದಿಂದ ಸನ್ಮಾನ
    In (ರಾಜ್ಯ ) ಜಿಲ್ಲೆ
  • ಹೊಸ ಪಠ್ಯಕ್ರಮ: ಶಿಕ್ಷಕರಲ್ಲಿ ಬದಲಾವಣೆ ಮನೋಭಾವ ಬೆಳೆಸಬೇಕು
    In (ರಾಜ್ಯ ) ಜಿಲ್ಲೆ
  • ಕ್ರೀಡಾಕೂಟ: ಗೆಲುವು–ಸೋಲಿಗಿಂತ ಕ್ರೀಡಾಸ್ಫೂರ್ತಿಗೆ ಆದ್ಯತೆ
    In (ರಾಜ್ಯ ) ಜಿಲ್ಲೆ
  • ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕ್ರೀಡೆಗಳು ಪೂರಕ
    In (ರಾಜ್ಯ ) ಜಿಲ್ಲೆ
  • ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಪ್ರಭಾಿಯಾಗಿ ನಂದಗಾಂವಿ
    In (ರಾಜ್ಯ ) ಜಿಲ್ಲೆ
  • ನಿಮ್ಮೂರಲ್ಲೇ ಉದ್ಯೋಗ, ಗುಳೆ ಹೋಗುವ ಅಗತ್ಯವಿಲ್ಲ
    In (ರಾಜ್ಯ ) ಜಿಲ್ಲೆ
  • ‘ಪ್ರೊ. ಎಚ್.ಟಿ. ಪೋತೆ ಹಸ್ತಪ್ರತಿ’ ಹಾಗೂ ‘ಬೆರಗು’ ಪುಸ್ತಕ ಪ್ರಶಸ್ತಿಗೆ ಕೃತಿಗಳ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.