ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ಯ ಇಲಾಖೆ ಜಿಲ್ಲಾ ಪಂಚಾಯತಿ ವಿಜಯಪುರ 2024-25 ನೇ ಸಾಲಿನ ಕರ ವಸೂಲಾತಿ ಆಂದೋಲನದಲ್ಲಿ ತಾಲ್ಲೂಕಿನ ತೊರವಿ ಗ್ರಾಮ ಪಂಚಾಯತಿ ಜಿಲ್ಲೆಯಲ್ಲೆ ಅತಿ ಹೆಚ್ಚು ಕರ ವಸೂಲಾತಿ ಮಾಡಿ ಪ್ರಥಮ ಸ್ಥಾನ ಪಡೆದಿರುತ್ತದೆ.
ಆರ್.ಡಿ.ಪಿ.ಆರ್ ಇಲಾಖೆಯ ಎಲ್ಲ ವೃಂದ ಸಂಘಗಳ ಹಾಗೂ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಇತ್ತಿಚೆಗೆ ನಡೆದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾಂಭದಲ್ಲಿ ಈ ಪ್ರಶಸ್ತಿ ಪತ್ರವನ್ನು ಪಿಡಿಓ ರಾಜಶ್ರೀ ತುಂಗಳ, ಕರ ವಸೂಲಿಕಾರ ಸಚಿನ ಕಾಂಬಳೆ, ಕಾರ್ಯದರ್ಶಿ ನಿಂಗಮ್ಮ ಕಾಖಂಡಕಿ ಅವರಿಗೆ ಹಿರಿಯ ಅಧಿಕಾರಿಗಳಿಂದ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಮಾದರಿ ಗ್ರಾಮ ಪಂಚಾಯತಿಯಾಗಿ ಅಭಿವೃದ್ಧಿ ಹೊಂದಿದ ಈ ಗ್ರಾಮದಲ್ಲಿ ಕರ ವಸೂಲಾತಿಯಿಂದ ಮಾದರಿ ಗ್ರಂಥಾಲಯ, ಗ್ರಾಮ ಸ್ವಚ್ಚತೆ, ಕಂಪೌಂಡ ಗೋಡೆ, ಪೈಪಲೈನ್ ಬೀದಿ ದೀಪ, ಸಿಬ್ಬಂದಿಗಳ ವೇತನ ಎಲ್ಲವೂ ನಿರ್ವಹಣೆ ಮಾಡುತ್ತಾ ಅತ್ಯುತ್ತಮ ಗ್ರಾಮ ಪಂಚಾಯತಿಯಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ಅಭಿವೃದ್ಧಿಗೆ ಶ್ರಮಿಸಿದ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಗ್ರಾಮಸ್ಥರು ಹಾಗೂ ಎಲ್ಲ ಸಿಬ್ಬಂದಿಗಳಿಗೆ ಅಭಿನಂದನೆಗಳು ಎಂದು ಪಿಡಿಓ ರಾಜಶ್ರೀ ತುಂಗಳ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಸೈನಿಕ ಶಾಲೆಯ ಪ್ರಿನ್ಸಿಪಾಲ್ ಶ್ರೀಮತಿ ಜಿ.ಪಿ ಕ್ಯಾಪ್ಟನ್ ಪ್ರತಿಭಾ ಬಿಸ್ಟ್, ಅಪರ ಜಿಲ್ಲಾಧಿಕಾರಿಗ ಸೋಮನಿಂಗ ಗೆಣ್ಣೂರ, ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಯೋಜನಾ ನಿರ್ದೇಶಕ ಬಿ.ಎಸ್.ರಾಠೋಡ, ತಿಕೋಟಾ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ, ನಬಿಲಾಲ, ಅನಸೂಯಾ ಚಲವಾದಿ ಇದ್ದರು.

