ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಈ ಭಾಗದಲ್ಲಿ ರೈತರು ತೊಗರಿ ಮಾತ್ರ ಬೆಳೆಯುತ್ತಾರೆ. ಅದನ್ನು ಬಿಟ್ಟು ಬೇರೆ ಬೆಳೆಯನ್ನೂ ಬೆಳೆಯಬೇಕು. ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಬೆಳೆ ಕೈಹಿಡಿಯುವದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ನಾಲತವಾಡ ರಸ್ತೆಯಲ್ಲಿ ನೂತನವಾಗಿ ಪ್ರಾರಂಭಿಸಲಾದ ಖಾಸಗಿ ದಾಲ್‌ಮಿಲ್ ಉದ್ಘಾಟನೆಯಲ್ಲಿ ಭಾಗಿಯಾಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರೈತರು ಪ್ರತೀ ಸಾರಿ ಕೇಳಿದಷ್ಟು ತೊಗರಿಗೆ ಬೆಂಬಲ ಬೆಲೆ ಕೊಡಲು ಹೇಗೆ ಸಾಧ್ಯ? ಈಗಾಗಲೇ ತೊಗರಿಗೆ ರೂ.೭೬೦೦ ಬೆಂಬಲ ಬೆಲೆ ಘೋಷಿಸಿದ್ದೇವೆ. ಬರುವ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಬಹುದು. ಪ್ರತಿಯೊಂದಕ್ಕೂ ಹೆಚ್ಚಳ ಇದ್ದೇ ಇರುತ್ತೆ. ರೈತರು ಆತಂಕಕ್ಕೊಳಗಾಗಿ ಎಂದಿಗೂ ಮಾರಬಾರದು. ತಿಂಗಳ ಹಿಂದೆ ೯-೧೦ಸಾವಿರದವರೆಗೆ ಇತ್ತು. ಈಗ ನಾವು ಬೆಂಬಲ ಘೋಷಿಸಿದ ಮೇಲೆ ಮತ್ತೆ ಹೆಚ್ಚಳವಾಗಬಹುದು. ರೈತರು ಒಂದೇ ಬೆಳೆಯ ಮೇಲೆ ಅವಲಂಬನೆಯಾಗಬಾರದು. ಬೇರೆಯವರನ್ನು ನೋಡಿ ಬಿತ್ತನೆ ಮಾಡಬಾರದು ಎಂದರು.
ಈ ವೇಳೆ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರಣ್ಣ ತಾರನಾಳ ಸೇರಿದಂತೆ ಮತ್ತೀತರರು ಇದ್ದರು.

