ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ೧೬ರ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಇಲ್ಲಿನ ಪಿಎಸ್‌ಐ ಸಂಜಯ ತಿಪರೆಡ್ಡಿ ಫೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ಕೊಳೂರ ಗ್ರಾಮದ ಸಧ್ಯ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ವರಗೋಡದಿನ್ನಿ ಗ್ರಾಮದಲ್ಲಿ ವಾಸವಿರುವ ಬಾಲಕಿಗೆ ವರಗೋಡದಿನ್ನಿ ಗ್ರಾಮದ ಆರೋಪಿ ಸ್ಥಾನದಲ್ಲಿರುವ ರೇವಣಸಿದ್ದಪ್ಪ ಮಾದರ ಈತ ಪ್ರೀತಿಸುತ್ತೇನೆ ಅಂತಾ ವರಗೋಡದಿನ್ನಿ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸರಕಾರಿ ಶಾಲೆಯೊಂದರಲ್ಲಿ ನಾಲ್ಕೈದು ಬಾರಿ ಸಂಭೊಗ ಮಾಡಿದ್ದು ಅಲ್ಲದೇ ಮುದ್ದೇಬಿಹಾಳದ ತನ್ನ ಚಿಕ್ಕಮ್ಮಳ ಮನೆಯಲ್ಲಿರುವ ಬಾಲಕಿಯನ್ನು ಮದುವೆ ಮಾಡಿಕೊಳ್ಳುವದಾಗಿ ಫುಸಲಾಯಿಸಿ ಕರೆದೊಯ್ದು ತಮ್ಮ ಮನೆಯಲ್ಲಿ ಇಟ್ಟುಕೊಂಡಿರುವದಾಗಿ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
