Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಆಲಮಟ್ಟಿಯಿಂದ ಯಾದಗಿರಿವರೆಗೂ ಜನಜಾಗೃತಿ ಯಾತ್ರೆಗೆ ನಿರ್ಧಾರ
(ರಾಜ್ಯ ) ಜಿಲ್ಲೆ

ಆಲಮಟ್ಟಿಯಿಂದ ಯಾದಗಿರಿವರೆಗೂ ಜನಜಾಗೃತಿ ಯಾತ್ರೆಗೆ ನಿರ್ಧಾರ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಆಲಮಟ್ಟಿ-ಯಾದಗಿರಿ ರೈಲು ಹೋರಾಟದ ಕುರಿತು ನಡೆದ ಪೂರ್ವಭಾವಿ ಸಭೆ

ಉದಯರಶ್ಮಿ ದಿನಪತ್ರಿಕೆ

ಮುದ್ದೇಬಿಹಾಳ: ಆಲಮಟ್ಟಿ-ಯಾದಗಿರಿ ರೈಲು ಹೋರಾಟ ನಡೆದು ಸಾಕಷ್ಟು ದಿನಗಳು ಕಳೆದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಹೋರಾಟ ಹೋರಾಟವಾಗಿಯೇ ಉಳಿದಿದೆ. ಹಾಗಾಗಿ ಈ ಹೋರಾಟದ ಮತ್ತೊಂದು ಭಾಗವಾಗಿ ಬರುವ ದಿನಗಳಲ್ಲಿ ಆಲಮಟ್ಟಿಯಿಂದ ಯಾದಗಿರಿಯ ವರೆಗೂ ಜನಜಾಗೃತಿ ಯಾತ್ರೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಹೋರಾಟದ ಪ್ರಮುಖರಾದ ಬಸಯ್ಯ ನಂದಿಕೇಶ್ವರಮಠ ತಿಳಿಸಿದರು.
ಪಟ್ಟಣದ ಹಳೆಯ ನ್ಯಾಯಾಲಯದ ಬಳಿ ಇರುವ ಸಾರ್ವಜನಿಕ ವಾಚನಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಆಲಮಟ್ಟಿ-ಯಾದಗಿರಿ ರೈಲು ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ರೈಲನ್ನೇ ಹೋಲುವ ವಾಹನವನ್ನು ತಯಾರಿಸಿ ಮೂರರಿಂದ ನಾಲ್ಕು ದಿನಗಳ ಕಾಲ ಜನಜಾಗೃತಿ ಯಾತ್ರೆಯ ಮೂಲಕ ರೈಲು ಮಾರ್ಗದ ಪ್ರತೀ ಹಳ್ಳಿಗಳಿಗೆ ಸಂಚರಿಸಿ ಜನತೆಯ ಸಹಿ ಸಂಗ್ರಹಿಸುವದು. ಬಳಿಕ ಪ್ರಮುಖರು ದೆಹಲಿಗೆ ತೆರಳಿ ಜಂತರ್ ಮಂತರ್ ನಲ್ಲಿ ಸಾಂಕೇತಿಕ ಧರಣಿ ನಡೆಸಿ, ರೈಲಿನಿಂದ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗಾಗುವ ಲಾಭಗಳ ಬಗ್ಗೆ ಮನವಿ ಸಲ್ಲಿಸಿದಲ್ಲಿ ಈ ಬಾರಿ ಕೇಂದ್ರದ ಬಜೆಟ್ ನಲ್ಲಿ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರುವ ಆತ್ಮ ವಿಶ್ವಾಸವನ್ನು ಹೊಂದಿದ್ದೇವೆ. ಹೋರಾಟಕ್ಕೆ ಹಿಂದೆ ನಿರಂತರ ಹೋರಾಟದಲ್ಲಿ ಭಾಗಿಯಾದ ಎಲ್ಲ ಮಹನೀಯರು ಸಾಥ್ ನೀಡುತ್ತಿದ್ದು, ರೈಲು ಮಾರ್ಗದ ಪ್ರತೀ ಹಳ್ಳಿಗಳ ಮತ್ತು ಪಟ್ಟಣಗಳ ಜನತೆ, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ವ್ಯಾಪಾರಸ್ಥರ ಬೆಂಬಲ ಅತ್ಯಂತ ಅವಶ್ಯವಾಗಿದೆ. ಹೋರಾಟದ ಕುರಿತು ಹಮ್ಮಿಕೊಳ್ಳುವ ಸಭೆಗಳಲ್ಲಿ ಭಾಗಿಯಾಗುವ ಮೂಲಕ ಸಲಹೆ ಸೂಚನೆಗಳನ್ನು ನೀಡುವಂತೆ ತಿಳಿಸಿದರು.
ಪಟ್ಟಣದಲ್ಲಿ ಮೊದಲು ಪ್ರಾರಂಭವಾದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮುಖಂಡರಾದ ಬಾಬು ಬಿರಾದಾರ ಮಾತನಾಡಿ, ಈ ಹೋರಾಟಕ್ಕೆ ಎಲ್ಲರೂ ಪಕ್ಷಾತೀತವಾಗಿ ಬೆಂಬಲಿಸಬೇಕು. ಜನಪ್ರತಿನಿಧಿಗಳ ಭಾಗವಹಿಸುವಿಕೆ ಅತ್ಯಂತ ಮಹತ್ವದ್ದು. ಜನಜಾಗೃತಿಗೆ ನಮ್ಮ ಬೆಂಬಲ ಇದೆ. ತನು, ಮನ, ಧನದಿಂದ ನಾನು ಭಾಗಿಯಾಗುವೆ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಎಸ್.ಎಸ್.ಮಾಲಗತ್ತಿಯವರು ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದ ಈ ಹೋರಾಟ ಪ್ರಾರಂಭವಾದರೂ ರೈಲು ಬರದಿರುವುದು ಜನಪ್ರನಿಧಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಈ ಭಾಗಕ್ಕೆ ರೈಲು ಮಾರ್ಗ ಪ್ರಾರಂಭವಾಗುವದರಿಂದ ಈ ಭಾಗದ ಮೂರ‍್ನಾಲ್ಕು ಜಿಲ್ಲೆಯ ಭತ್ತ, ತೊಗರಿ ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಜನಜಾಗೃತಿ ಯಾತ್ರೆಯಲ್ಲಿ ಎಲ್ಲರೂ ಭಾಗಿಯಾಗಿದಲ್ಲಿ ಈ ಬಾರಿಯ ಬಜೆಟ್ ನಲ್ಲಿ ಖಂಡಿತ ರೈಲಿಗೆ ಹಸಿರು ನಿಶಾನೆ ದೊರೆಯಲಿದೆ ಎಂದರು.
ತಾಳಿಕೋಟೆ ಭಾಗದಲ್ಲಿ ಹೋರಾಟದ ಪ್ರಮುಖರಾದ ನಿವೃತ್ತ ಪ್ರಾಂಶುಪಾಲರಾದ ರೇವಣಸಿದ್ದಪ್ಪ ಜಾಲವಾದಿ, ಪಟ್ಟಣದ ಪ್ರಮುಖರಾದ ಅಶೋಕ ರೇವಡಿ, ಬಿ.ಎಸ್.ಮೇಟಿ, ಉದಯ ರಾಯಚೂರ, ಕಾಶಿಬಾಯಿ ರಾಂಪೂರ ಮತ್ತೀತರರು ಈ ಭಾಗದಲ್ಲಿ ರೈಲು ಬಂದಲ್ಲಿ ಆಗುವ ಪ್ರಯೋಜನಗಳು, ಹೋರಾಟಕ್ಕೆ, ಜನಜಾಗೃತಿಗೆ ಬೇಕಾಗುವ ಸಿದ್ಧತೆಗಳ ಬಗ್ಗೆ ಮಾತನಾಡಿದರು.
ಅರವಿಂದ ಲದ್ದೀಮಠ, ಬುಡ್ಡಾ ನಾಯ್ಕೋಡಿ, ಮಹೇಶ ಕಲ್ಯಾಣಮಠ, ಶಿವರಾಜ ರಾಠೋಡ, ಪರಶುರಾಮ ನಾಲವಾಡ, ರವಿಚಂದ್ರ ನಾಲತವಾಡ, ಕಿರಣ ಪಾಟೀಲ ಸೇರಿದಂತೆ ಮತ್ತೀತರರು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026
    In ದಿನಪತ್ರಿಕೆ
  • ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ
    In (ರಾಜ್ಯ ) ಜಿಲ್ಲೆ
  • ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಕಲಾಶ್ರೀ ಚವ್ಹಾಣ ಗೆ ಅಭಿನಂದಿಸಿದ ಡಾ.ಸುರೇಖಾ
    In (ರಾಜ್ಯ ) ಜಿಲ್ಲೆ
  • ಸಚಿವ ಎಂ. ಬಿ. ಪಾಟೀಲ ಅವರ ಪ್ರವಾಸ ವಿವರ
    In (ರಾಜ್ಯ ) ಜಿಲ್ಲೆ
  • ನ್ಯಾಯ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿಖರ ತನಿಖೆ & ದೃಢ ಸಾಕ್ಷಿ
    In (ರಾಜ್ಯ ) ಜಿಲ್ಲೆ
  • ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದಪೊಲೀಸ್ ಅಧಿಕಾರಿಗಳು
    In (ರಾಜ್ಯ ) ಜಿಲ್ಲೆ
  • ಯಡ್ರಾಮಿ ಬಸವೇಶ್ವರ ಜಾತ್ರೆಯ ಅದ್ದೂರಿ ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾ ಪ್ರಕ್ರಿಯೆಯ ಪ್ರತಿ ಹಂತ ವೀಕ್ಷಿಸಿದ ಜಿ.ಪಂ. ಸಿಇಒ ರಿಷಿ ಆನಂದ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.