ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನ ಈ ದೇಶಕ್ಕೆ ದೊಡ್ಡ ನೋವು ತಂದಿದೆ ಎಂದು ಶಾಸಕ ಅಶೋಕ ಮನಗೂಳಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಶೈಕ್ಷಣಿಕ ತಜ್ಞನಾಗಿ, ಅರ್ಥಶಾಸ್ತ್ರಜ್ಞನಾಗಿ ಅವರ ಅಧಿಕಾರ ಅವಧಿಯಲ್ಲಿ ಮಾಡಿದ ಕಾರ್ಯಗಳನ್ನು ನಿಜಕ್ಕೂ ಈ ದೇಶ ಎಂದು ಮರೆಯೋದಕ್ಕೆ ಸಾಧ್ಯವಿಲ್ಲ. ಅವರ ಭಾರತಕ್ಕೆ ನೀಡಿದ ಸೇವೆ ಒಂದು ಇತಿಹಾಸವಾಗಿದೆ. ೧೯೯೧ರಲ್ಲಿ ಭಾರತ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾಗ, ಡಾ. ಮನಮೋಹನ್ ಸಿಂಗ್ ಅವರು ಮಂಡಿಸಿದ್ದ ಬಜೆಟ್ ದೇಶದ ಆರ್ಥಿಕತೆಗೆ ಹೊಸ ತಿರುವು ನೀಡಿತು. ಉದಾರೀಕರಣ, ಖಾಸಗೀಕರಣ ಮತ್ತು ವಿದೇಶಿ ಬಂಡವಾಳ ಹೂಡಿಕೆಗೆ ಒತ್ತು ನೀಡಿದ್ದರಿಂದಾಗಿ ಉದ್ಯಮಗಳಿಗೆ ಸ್ವಾತಂತ್ರ‍್ಯ ಹೆಚ್ಚಿತು ಮತ್ತು ಭಾರತ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯಿತು. ಇಂಥ ಮಹಾನ್ ನಾಯಕನ ಜೀವನ ಮತ್ತು ಅವರ ಬದುಕು ನಮಗೆಲ್ಲ ಆದರ್ಶವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಶಾಸಕ ಅಶೋಕ ಮನಗೂಳಿ ನುಡಿನಮನ ಸಲ್ಲಿಸಿದ್ದಾರೆ.

