ವಿಜಯಪುರದಲ್ಲಿ ಓಂ ಶ್ರೀ ಸಾಯಿರಾಮ ಸೇವಾ ಸಮೀತಿಯಿಂದ ವಿವಿಧ ದಾರ್ಮಿಕ ಕಾರ್ಯಕ್ರಮಗಳು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಅಥಣಿ ರಸ್ತೆಯ ಮಹಾತ್ಮಾ ಗಾಂಧಿ ಕಾಲೋನಿಯಲ್ಲಿ ಓಂ ಶ್ರೀ ಸಾಯಿರಾಮ ಸೇವಾ ಸಮೀತಿ ವತಿಯಿಂದ ಜ.೧ ಮತ್ತು ೨ ರಂದು ಶ್ರೀ ಸಾಯಿಬಾಬಾ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜ.೧ ಬುಧವಾರ ಬೆಳಗ್ಗೆ ೯ ಗಂಟೆಗೆ ಕುಂಭ ಕಳಸ, ಪಂಡರಾಪೂರ ಶ್ರೀ ವಿಠ್ಠಲ ವಾರ್ಕಾರಿಗಳಿಂದ ಭಜನೆ ಹಾಗೂ ಸಕಲ ವಾದ್ಯಮೇಳದೊಂದಿಗೆ ಶ್ರೀ ಸಾಯಿಬಾಬಾ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ. ಕಾಳಿದಾಸ ಶಾಲೆಯಿಂದ ಹೊರಡುವ ಮೆರವಣಿಗೆಗೆ ರಾಮನಗೌಡ ಬ.ಪಾಟೀಲ (ಯತ್ನಾಳ) ಚಾಲನೆ ನೀಡಲಿದ್ದಾರೆ.
ಮದ್ಯಾಹ್ನ ೧ ಗಂಟೆಗೆ ಅಂಬಾದಾಸ ಜೋಶಿ ಹಾಗೂ ಸಂಗಡಿಗರಿಂದ ಪ್ರಾರ್ಥನೆ ಮತ್ತು ನಗರದ ಕೈವಲ್ಯಕುಟೀರದ ಪ್ರಕಾಶ ಮಹಾರಾಜರು ಹಾಗೂ ಹೊನವಾಡದ ಬಾಬುರಾವ ಮಹಾರಾಜರಿಂದ ಆಧ್ಯಾತ್ಮಿಕ ಪ್ರವಚನ ಜರುಗಲಿದೆ.
ಮಧ್ಯಾಹ್ನ ೨ ಗಂಟೆಗೆ ಮಹಾಪ್ರಸಾದ, ಸಂಜೆ ೬ ಗಂಟೆಗೆ ರಕ್ಷಾ ಸುದರ್ಶನ ಹೋಮ, ಪ್ರಾಸಾದ ವಾಸ್ತು (ದೇವಾಲಯದ ವಾಸ್ತು ಹೋಮ) ಕ್ಷೇತ್ರಪಾಲ ಬಲಿ ಮೂರ್ತಿ ಅಧಿವಾಸ ಬಳಿಕ ರಾತ್ರಿ ೮.೩೦ ಕ್ಕೆ ಮಹಾಪ್ರಸಾದ ನಡೆಯಲಿದೆ.
ಜ.೨ರಂದು ಗುರುವಾರ ಬೆಳಗ್ಗೆ ೭ ಗಂಟೆಗೆ ಮಹಾಸಂಕಲ್ಪ ಮಹಾಗಮಪತಿ ಹೋಮ, ನವಗ್ರಹ ಹೋಮ, ಮಹಾಮೃತ್ಯುಂಜಯ ಹೋಮ, ಪ್ರತಿಷ್ಟ ಹೋಮ, ಹಾಗೂ ಸಾಯಿಬಾಬಾ ನಾಮಹೋಮ ನಡೆಯಲಿದೆ.
ಬೆಳಗ್ಗೆ ೯.೫೫ ಗಂಟೆಗೆ ಮನಗೂಳಿ ಹಿರೇಮಠದ ಶ್ರೀ ಅಭಿನವ ಸಂಗನಬಸವ ಮಹಾ ಸ್ವಾಮಿಗಳಿಂದ ಸಾಯಿಬಾಬಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜರುಗಲಿದೆ. ಬಳಿಕ ೧೧ ಗಂಟೆಗೆ ಚಳಕಾಪೂರ ಶ್ರೀ ಸಿದ್ಧಾರೂಡ ಮಠದ ಶ್ರೀ ಶಂಕರಾನಂದ ಮಹಾ ಸ್ವಾಮಿಗಳಿಂದ ಸಾಯಿಬಾಬಾ ಮಂದಿರದ ಕಳಸಾರೋಹಣ ನಡೆಯಲಿದೆ.
ಮಧ್ಯಾಹ್ನ ೧೨.೩೦ ಗಂಟೆಗೆ ಶ್ರೀಶೈಲ ಬೀಳೂರ ತಂಡದವರಿಂದ ಸಂಗೀತ ಸೇವೆ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಬಳಿಕ ೨.೩೦ ಗಂಟೆಗೆ ಮಹಾ ಪ್ರಸಾದ ಇರುತ್ತದೆ.
ಸಂಜೆ ೬ ಗಂಟೆಗೆ ಶ್ರೀ ಸಾಯಿಬಾಬಾ ಸೇವಾ ಸಮಿತಿ ವತಿಯಿಂದ ೨೦೦೦ ಜನ ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಲ್ಲಿದ್ದು ಬಳಿಕ ಮಹಾ ಪ್ರಸಾದ ಸೇವೆ ಇರುತ್ತದೆ.
ಕಾರಣ ವಿಜಯಪುರ ನಗರ ಹಾಗೂ ಜಿಲ್ಲೆಯ ಸದ್ಭಕ್ತರು ಈ ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಸಾಯಿಬಾಬಾ ಅವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಸಾಯಿರಾಮ ಸೇವಾ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.

