ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಆಲಮಟ್ಟಿ-ಯಾದಗಿರಿ ರೈಲು ಹೋರಾಟವನ್ನು ತೀರ್ವವಾಗಿಸಲು ೪ ದಿನಗಳ ಕಾಲ ಜನಜಾಗೃತಿ ಯಾತ್ರೆಯನ್ನು ಹಮ್ಮಿಕೊಳ್ಳಲು ಡಿ.೨೮ ರಂದು ಬೆಳಿಗ್ಗೆ ೧೦:೩೦ ಕ್ಕೆ ಪಟ್ಟಣದ ಮುಖ್ಯ ಬಜಾರನಲ್ಲಿರುವ ಜನರಲ್ ಲೈಬ್ರರಿಯಲ್ಲಿ ಪೂರ್ವಭಾವಿ ಸಭೆ ಕರೆದಿದ್ದು ಎಲ್ಲಾ ಸಂಘಸAಸ್ಥೆಗಳ ಪದಾಧಿಕಾರಿಗಳು, ವರ್ತಕರು, ಉದ್ದಿಮೆದಾರರು ಹಾಗೂ ರೈಲು ಮಾರ್ಗ ಅಗಲೇಬೇಕೆಂಬ ಆಸಕ್ತ ಮಿತ್ರರು ಭಾಗಿಯಾಗಿ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಹೋರಾಟದ ಪ್ರಮುಖರಾದ ಬಸವರಾಜ ನಂದಿಕೇಶ್ವರಮಠ ವಿನಂತಿಸಿದ್ದಾರೆ.
