Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕೈಯಲ್ಲಿ ಕುಣಿವ ಆ ಹೊನ್ನ ಬಳೆಯ ಘಲ್ ಘಲ್ ತಾಳಕೆ

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೀರಿನ ಬಾಟಲ್ ವಿತರಣೆ

ಜು.೧೪ ರಂದು ನೈಕಾನ್ ಮಿರರ್‌ಲೆಸ್ ತಂತ್ರಜ್ಞಾನ ಕಾರ್ಯಾಗಾರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ನಾವೆಲ್ಲ ಗ್ರಾಮ ಸಂಸ್ಕೃತಿ, ಕೃಷಿ ಸಂಸ್ಕೃತಿ ಪಾಲಿಸಬೇಕು :ಬಿದರಿ
(ರಾಜ್ಯ ) ಜಿಲ್ಲೆ

ನಾವೆಲ್ಲ ಗ್ರಾಮ ಸಂಸ್ಕೃತಿ, ಕೃಷಿ ಸಂಸ್ಕೃತಿ ಪಾಲಿಸಬೇಕು :ಬಿದರಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮ | ಮೂರನೇ ಗೋಷ್ಠಿ `ಗ್ರಾಮ ಸಂಸ್ಕೃತಿ’ ಉದ್ಘಾಟನೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಎಲ್ಲರೂ ಜಂಗಮರಾಗಲು ಸಾಧ್ಯವಿಲ್ಲ, ಜಂಗಮರು ತಲೆ ಮೇಲೆ ಜಗತ್ತಿನ ಭಾರ ಹೊತ್ತುಕೊಂಡಿದ್ದಾರೆ ಅವರಲ್ಲಿ ನಮ್ಮನ್ನು ಭಾಗಿಸಿ ಸನ್ಮಾರ್ಗದಲ್ಲಿ ನಡೆಸುವ ಶಕ್ತಿ ಇದೆ ಅದನ್ನೇ ಶ್ರೀ ಸಿದ್ಧೇಶ್ವರ ಅಪ್ಪಾವರು ಮಾಡಿ ಹೋಗಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಿದ್ಧಪ್ಪ ಬಿದರಿ ಹೇಳಿದರು.
ನಗರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮದ ಮೂರನೇ ಗೋಷ್ಠಿ `ಗ್ರಾಮ ಸಂಸ್ಕೃತಿ’ ಉದ್ಘಾಟಿಸಿ ಮಾತನಾಡಿದ ಅವರು, ನಾವು ಗ್ರಾಮೀಣ ಸಂಸ್ಕೃತಿಯನ್ನು ಮರೆತಿದ್ದೇವೆ. ಹಿರಿಯರ ಮಾತಿಗೆ ಇಂದು ಬೆಲೆ ಇಲ್ಲದಂತಾಗಿದೆ ಇದು ಎಲ್ಲ ಸರಿಯಾಗಬೇಕಾದರೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ತಿಳಿಸಿರುವ ಗ್ರಾಮ ಸಂಸ್ಕೃತಿ, ಕೃಷಿ ಸಂಸ್ಕೃತಿಯನ್ನು ಪಾಲಿಸಬೇಕು ಎಂದರು.
ಅಮೇರಿಕಾದಿಂದ ಆಗಮಿಸಿದ್ದ ಶಿಲ್ಪಾ ಹಾದಿಮನಿ ಅವರು ಮಾತನಾಡಿ, ಅಪ್ಪಾವರ ದೇಹ ತ್ಯಾಗವಾಗಿ ೨ ವರ್ಷಗಳು ಕಳೆದಿವೆ. ಆದರೆ ಅವರು ನೀಡಿರುವ ಸತ್ಯ, ಪ್ರೇಮ, ಪ್ರವಚನಗಳು ನಮ್ಮೊಂದಿಗೆ ಸದಾ ಇವೆ. ಮಾನವೀಯ ಮೌಲ್ಯಗಳನ್ನು ನಮಗೆ ನೀಡಿ ಆದರ್ಶ ಬದುಕು ಸಾಗಿಸಿದ್ದಾರೆ. ಸಕಲರಿಗೂ ಲೇಸನ್ನೇ ಬಯಸಿ ಜಗತ್ತಿಗೆ ಜ್ಞಾನ ದಾಸೋಹವನ್ನು ಹಂಚಿ ಹೋಗಿದ್ದಾರೆ. ಅಮೇರಿಕಾದಲ್ಲಿ ನಾನು ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದೇನೆ. ಅದು ನನ್ನ ಬದುಕಿನ ಸಾರ್ಥಕ ಕ್ಷಣಗಳು ಎಂದು ಭಾವುಕರಾದರು.
ಬಾಗಲಕೋಟ ಭೊವಿ ಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಮಾತನಾಡಿ, ಜಗತ್ತಿನ ಮೊದಲ ಸಂಸ್ಕೃತಿ ಗ್ರಾಮೀಣ ಸಂಸ್ಕೃತಿ, ಕೃಷಿ ಸಂಸ್ಕೃತಿ. ನಾವು ಮೂರು ಸಂಸ್ಕೃತಿಗಳನ್ನು ನೋಡುತ್ತೇವೆ. ಗ್ರಾಮೀಣ ಜನರು ನಾವು ಇಂದು ಗ್ರಾಮಗಳಿಂದ ವಲಸೆ ಬಂದು ನಗರಗಳನ್ನು ಸೇರುತ್ತಿದ್ದೇವೆ. ಇದರಿಂದ ನಮ್ಮಲ್ಲಿನ ಸಂಬಂಧಗಳ ಮೌಲ್ಯಗಳು ಕಡಿಮೆಯಾಗುತ್ತಿವೆ. ಕಾರಣ ನಾವು ನಮ್ಮ ಮೂಲ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಕುಂಬಾರನ ಅಣತೆ, ನೇಕಾರನ ಬತ್ತಿ, ಗಾಣಿಗನ ಎಣ್ಣೆಯಂತೆ ನಾವೆಲ್ಲ ಒಂದಾಗಿ ಬದುಕಬೇಕಾಗಿದೆ. ಆಗ ಬದುಕು ಸುಂದರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜ್ಞಾನ ಯೋಗಾಶ್ರಮದ ಭಕ್ತರು, ನಾಡಿನ ಸಾಹಿತಿಗಳು, ಸ್ವಾಮೀಜಿಗಳು ಉಪಸ್ಥಿತರಿದ್ದರು.

“ಶ್ರೀ ಸಿದ್ಧೇಶ್ವರ ಅಪ್ಪಗಳೇ ಈ ಗ್ರಾಮ ಸಂಸ್ಕೃತಿ ಆಯೋಜನೆಗೆ ಕಾರಣಿಕರ್ತರು. ಭಾರತೀಯರು ಜ್ಞಾನದ ಬೆಳಕಿನಲ್ಲಿ ಬದುಕುವವರು. ತಂದೆ-ತಾಯಿಗಳನ್ನು ಪ್ರೀತಿಸು, ಗುರ-ಹಿರಿಯರನ್ನು ಗೌರವಿಸು, ಹಸಿದವರಿಗೆ ಅನ್ನ ಹಾಕು ಇದು ಸಿದ್ದೇಶ್ವರ ಅಪ್ಪನವರು ತಿಳಿಸಿಕೊಟ್ಟಿರುವ ಸಂಸ್ಕೃತಿ. ಅದನ್ನು ನಾವು ಪಾಲಿಸಿದರೆ ಶ್ರೀಗಳ ಆಶೀರ್ವಾದಕ್ಕೆ ಪಾತ್ರರಾಗುತ್ತೇವೆ.”

– ಬಸವಲಿಂಗ ಸ್ವಾಮೀಜಿ
ಜ್ಞಾನಯೋಗಾಶ್ರಮದ ಅಧ್ಯಕ್ಷರು

“ಗ್ರಾಮ ಪಂಚಾಯತ್ ಚುನಾವಣೆಗಳು ಬಂದಾಗಿನಿಂದ ಗ್ರಾಮೀಣ ಜನರ ಮನಸ್ಸನ್ನು ಕದಡುವ ಕೆಲಸ ಮಾಡಿವೆ. ಈ ಚುನಾವಣೆಗಳಿಂದ ಗ್ರಾಮಗಳು ಕೆಟ್ಟು ಹೋಗಿವೆ. ಗ್ರಾಮಗಳಲ್ಲಿ ಸೌಲಭ್ಯಗಳ ತೊಂದರೆ ಇರಬಹುದು ಆದರೆ ನೆಮ್ಮದಿ ಇದೆ. ನಗರಗಳಲ್ಲಿ ಸೌಲಭ್ಯಗಳಿವೆ ಆದರೆ ನೆಮ್ಮದಿ ಇಲ್ಲ. ಮೊದಲು ಗ್ರಾಮಗಳಲ್ಲಿ ಒಂದೇ ಗ್ರಾಮದೇವತೆ ಜಾತ್ರೆ ಇರುತ್ತಿತ್ತು. ಆದರೆ ಈಗ ಹಾಗಿಲ್ಲ, ಜಾತಿಗೊಂದು ಜಾತ್ರೆಗಳಾಗಿ ಜನರ ಹೃದಯಗಳು ಒಡೆದು ಹೋಗಿವೆ. ನಮ್ಮ ಭಾವಗಳು ಶುದ್ಧವಾಗದ ಹೊರತು ಬದುಕು ಸುಂದರವಾಗುವುದಿಲ್ಲ.”

– ಪ್ರಭುಸಾರಂಗ ಶಿವಾಚಾರ್ಯ ಸ್ವಾಮೀಜಿ
ಸಿಂದಗಿ ಸಾರಂಗಮಠ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕೈಯಲ್ಲಿ ಕುಣಿವ ಆ ಹೊನ್ನ ಬಳೆಯ ಘಲ್ ಘಲ್ ತಾಳಕೆ

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೀರಿನ ಬಾಟಲ್ ವಿತರಣೆ

ಜು.೧೪ ರಂದು ನೈಕಾನ್ ಮಿರರ್‌ಲೆಸ್ ತಂತ್ರಜ್ಞಾನ ಕಾರ್ಯಾಗಾರ

ಕಾರ್ಯಕರ್ತರು ಸಕ್ರೀಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕೈಯಲ್ಲಿ ಕುಣಿವ ಆ ಹೊನ್ನ ಬಳೆಯ ಘಲ್ ಘಲ್ ತಾಳಕೆ
    In ವಿಶೇಷ ಲೇಖನ
  • ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೀರಿನ ಬಾಟಲ್ ವಿತರಣೆ
    In (ರಾಜ್ಯ ) ಜಿಲ್ಲೆ
  • ಜು.೧೪ ರಂದು ನೈಕಾನ್ ಮಿರರ್‌ಲೆಸ್ ತಂತ್ರಜ್ಞಾನ ಕಾರ್ಯಾಗಾರ
    In (ರಾಜ್ಯ ) ಜಿಲ್ಲೆ
  • ಕಾರ್ಯಕರ್ತರು ಸಕ್ರೀಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು
    In (ರಾಜ್ಯ ) ಜಿಲ್ಲೆ
  • ಘಟನೆ ಮತ್ತು ಪ್ರತಿಕ್ರಿಯೆಯ ನಡುವಿನ ಆ ಕ್ಷಣ..
    In ವಿಶೇಷ ಲೇಖನ
  • ಡಿವೈಡರ್‌ಗೆ ಕಾರು ಡಿಕ್ಕಿ; ತಾಯಿ-ಇಬ್ಬರು ಪುತ್ರರ ದುರ್ಮರಣ!
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ನಿಂದ ಎಸ್‌ಐಆರ್ ಪ್ರಕ್ರಿಯೆ ನಿಷ್ಕ್ರೀಯಗೊಳಿಸುವ ಷಡ್ಯಂತ್ರ
    In (ರಾಜ್ಯ ) ಜಿಲ್ಲೆ
  • ಸಮ್ಮೇಳನಾಧ್ಯಕ್ಷಕರಾಗಿ ಹ.ಮಾ.ಪೂಜಾರ ಆಯ್ಕೆಗೆ ಮೌಲಾಲಿ ಹರ್ಷ
    In (ರಾಜ್ಯ ) ಜಿಲ್ಲೆ
  • ಮುದ್ದೇಬಿಹಾಳದ ವಿದ್ಯಾಸ್ಪೂರ್ತಿ ಶಾಲೆಯ ಅನುಮತಿ ರದ್ದು!
    In (ರಾಜ್ಯ ) ಜಿಲ್ಲೆ
  • ಚಡಚಣದಲ್ಲಿ ತಾಪಂ ಸ್ವೀಪ್ ಸಮಿತಿಯಿಂದ ಎಸ್ಐಆರ್ ಜಾಗೃತಿ ಜಾಥಾ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.