ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಎಪಿಎಂಸಿ ಯಾರ್ಡನಲ್ಲಿರುವ ಶ್ರೀಧರ್ಮಶಾಸ್ತಾ ಸನ್ನಿದಾನಂ ಹಾಗೂ ಸೇವಾ ಸಮಿತಿ ವತಿಯಿಂದ ೫ನೆಯ ವರ್ಷದ ಅನ್ನ ಸಂತರ್ಪಣೆ ಹಾಗೂ ನೂತನ ಪುರಸಭೆ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಮತ್ತು ನಾಮ-ನಿರ್ದೇಶಿತ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಡಿ.೨೯ ಭಾನುವಾರದಂದು ಹಮ್ಮಿಕೊಳ್ಳಲಾಗಿದೆ.
ಕಾರಣ ಸಧ್ಭಕ್ತರೆಲ್ಲರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಜೊತೆಗೆ ಪ್ರಸಾದವನ್ನು ಸ್ವೀಕರಿಸಬೇಕು ಎಂದು ಶ್ರೀಧರ್ಮಶಾಸ್ತಾ ಸನ್ನಿದಾನಂ ಹಾಗೂ ಸೇವಾ ಸಮಿತಿಯ ಅಧ್ಯಕ್ಷ ರಾಜಶೇಖರ ಉಪ್ಪಿನ ವಿನಂತಿಸಿದ್ದಾರೆ.
