ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಯಿಗೆ ಸರಿಸುಮನಾದವರು ಈ ಜಗತ್ತಿನಲ್ಲಿ ಬೇರೆ ಯಾರು ಇಲ್ಲ, ಅವ್ವ ಎಂಬ ಪದದಲ್ಲಿ ಪ್ರೀತಿಯ ರಸವೆ ತುಂಬಿರುತ್ತದೆ. ಅವ್ವ ಜಗತ್ತಿನ ಶ್ರೇಷ್ಠ ದೇವತೆ ಎಂದು ಬುರುಣಾಪುರ ಆರೂಢ ಆಶ್ರಮದ ಯೋಗೇಶ್ವರಿ ಮಾತಾಜಿ ಅಭಿಪ್ರಾಯ ಪಟ್ಟರು
ಅವರು ಗುರುವಾರ ನಡೆದ ನಗರದ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪಬ್ಲಿಕ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ “ಮಾತೃ ಸಂಗಮ” ‘ಮಾತೃದೇವೋಭವ ‘ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು
ಸಾಹಿತಿ, ಪ್ರೊ.ಅಡವಿಸ್ವಾಮಿ ಕೊಳಮಲಿ ಮಾತನಾಡಿ, ಹೆತ್ತು ಹೊತ್ತು ತುತ್ತು ಮಾಡಿ ತಿನಿಸಿದ ತಾಯಿಯ ಋಣವನ್ನು ಯಾವ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ತಂದೆ ತಾಯಿಯನ್ನು ಪೂಜಿಸುವ, ಸೇವೆ ಮಾಡುವ ಸೌಭಾಗ್ಯ ಪುಣ್ಯವಂತರಿಗೆ ಮಾತ್ರ ದೊರೆಯುತ್ತದೆ ನಮ್ಮ ಕಣ್ಣ ಮುಂದೆ ಕಾಣುವ ಜೀವಂತ ದೇವತೆ, ತಾಯಿ ಪ್ರತಿನಿತ್ಯ ಪ್ರತಿಕ್ಷಣವೂ ತಾಯಿಯನ್ನು ಗೌರವಿಸಬೇಕೆಂದು ಹೇಳಿದರು
ತಾಯಿಯ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದ, ಸಾಹಿತಿ, ಪ್ರೊ ಯು ಎನ್ ಕುಂಟೋಜಿ ಮಾತನಾಡಿ, ಮಕ್ಕಳ ಪಾಲನೆ ಪೋಷಣೆ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಬಹಳ ಮುಖ್ಯವಾಗಿದೆ. ಒಬ್ಬ ವಿದ್ಯಾವಂತ ಪ್ರಜೆಯನ್ನು ಈ ಸಮಾಜಕ್ಕೆ ನೀಡುವಲ್ಲಿ ತಾಯಿಯ ಕಾರ್ಯ ಬಹು ಮುಖ್ಯ, ಮಗುವನ್ನ ಒಬ್ಬ ಉತ್ತಮ ಜ್ಞಾನಿ, ಒಳ್ಳೆಯ ಸಾಧಕ, ಸಂತ, ದೊಡ್ಡ ಅಧಿಕಾರಿಯನ್ನ ಮಾಡುವ ಮಹತ್ತರವಾದ ಜವಾಬ್ದಾರಿ ತಾಯಿ ಮೇಲಿದೆ ಎಂದು ಹೇಳಿದರು
ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಭು ಕೊಳಮಲಿ ಮಾತನಾಡಿ, ಭಾರತ ದೇಶ ಸಂಸ್ಕಾರ ಸಂಸ್ಕೃತಿಯ ತವರು ಗುಣಮಟ್ಟದ ಶಿಕ್ಷಣದ ಜೊತೆಗೆ ಒಳ್ಳೆಯ ಮಾನವೀಯ ಮೌಲ್ಯವನ್ನು ತುಂಬುವ ಕೆಲಸವನ್ನು ನಮ್ಮ ಶಿಕ್ಷಣ ಸಂಸ್ಥೆ ನಿರಂತರವಾಗಿ ಮಾಡುತ್ತದೆ ಎಂದು ಹೇಳಿದರು
ಭಾರತ ಯುವ ವೇದಿಕೆಯ ಅಧ್ಯಕ್ಷ ಸುನಿಲ್ ಜೈನಾಪುರ ಮಾತನಾಡಿದರು
ಕಾರ್ಯಕ್ರಮದಲ್ಲಿ ಮಕ್ಕಳಿಂದ ತಾಯಂದಿರ ಪಾದಪೂಜೆ ಮಾಡಲಾಯಿತು ನಂತರ ತಾಯಂದಿರು ತಮ್ಮ ಮಕ್ಕಳಿಗೆ ಸಿಹಿ ತುತ್ತು ತಿನಿಸಿದರು
ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಸರಸ್ವತಿ ಕೊಳಮಲಿ ರಾಜಶ್ರೀ ಕೊಳಮಲಿ, ಶಿಕ್ಷಣ ಸಂಯೋಜಕ ಎ ಕೆ ದಳವಾಯಿ, ಸಿ ಆರ್ ಸಿ ಯವರಾದ ಶ್ರೀಮತಿ ಸವಿತಾ ಬಿ ಎನ್, ಗಣಪತಿ ಒಡೆಯರ, ಸಿದ್ದು ಪೂಜರಿ, ಮೀರಾಸಾಬ ಉಪಸ್ಥಿತರಿದ್ದರು
ವಿದ್ಯಾರ್ಥಿನಿಯರಾದ ಲಕ್ಷ್ಮಿ ಚೌದರಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಶಿಕ್ಷಕಿ ಸುಧಾರಾಣಿ ನಿರೂಪಿಸಿ ಸ್ವಾಗತಿಸಿದರು.
ಶಾಲಾ ಸಿಬ್ಬಂದಿ ವರ್ಗ,ವಿದ್ಯಾರ್ಥಿ ಸಮೂಹ ,ಪಾಲಕ ಪೋಷಕ ಬಂಧುಗಳು ಉಪಸ್ಥಿತರಿದ್ದರು.

