ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನ್ಯಾಷನಲ್ ಕೌನ್ಸಿಲ್ ಆಫ್ ಟೀಚರ್ ಸೈಂಟಿಸ್ಟ, ಇಂಡಿಯಾದ ಕರ್ನಾಟಕ ಸ್ಟೇಟ್ ಡೈರೆಕ್ಟರ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವಿಜಯಪುರದ ಖಜಾಂಚಿ, ಕಿಡ್ಸ್ ಜೋನ್ ಶಾಲೆಯ ಆಡಳಿತಾಧಿಕಾರಿ ಹಾಗೂ ಶಿಕ್ಷಕಿ ಶ್ರೀಮತಿ ಸುಮಾ ಚೌಧರಿ ಇವರ ಸಮಾಜಮುಖಿ ಕಾರ್ಯ, ಉತ್ತಮ ಬೋಧನೆ, ತರಬೇತಿ ನೀಡುವ ಕೌಶಲ್ಯ ಹಾಗೂ ಸ್ಲಮ್ ಮಕ್ಕಳಿಗಾಗಿ ಉಚಿತ ಕಲಿಕಾ ಕೇಂದ್ರ ಸ್ಥಾಪಿಸಿ ಪಾಠ ಬೋಧನೆ ಮಾಡುವಲ್ಲಿ ಯಶಸ್ವಿಯಾಗಿರುವ ಇವರ ಕಾರ್ಯ ಸಾಧನೆ ಕಂಡು ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್, ಇವರು ಮೈಸೂರಿನ ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ದಿನಾಂಕ ೨೮-೧೨-೨೦೨೪ರಂದು “ರಾಜ್ಯ ಮಟ್ಟದ ಚಿನ್ಮಯ ಜ್ಞಾನಿ ಶಿಕ್ಷಕ ಪ್ರಶಸ್ತಿ” ನೀಡಿ ಗೌರವಿಸುತ್ತಿದ್ದಾರೆ.
ಚಿನ್ಮಯ ಜ್ಞಾನಿ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಸುಮಾ ಚೌಧರಿ ಇವರಿಗೆ ನ್ಯಾಷನಲ್ ಕೌನ್ಸಿಲ್ ಆಫ್ ಟೀಚರ್ ಸೈಂಟಿಸ್ಟ, ಇಂಡಿಯಾದ ಸೌತ್ ಜೋನ್ ಡೈರೆಕ್ಟರ್, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವಿಜಯಪುರ ಜಿಲ್ಲಾ ಅಧ್ಯಕ್ಷರು, ರಾಜ್ಯ ಪ್ರಶಸ್ತಿ ಪುರಸ್ಕೃತರೂ ಆದ ಎಸ್. ವಿ. ಬುರ್ಲಿ, ಕ.ರಾ.ವೈ.ಸಂ.ಪ.ನ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಉಷಾದೇವಿ ಹಿರೇಮಠ, ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮಿಸಾಳೆ, ಉಪಾಧ್ಯಕ್ಷರಾದ ಬಿ.ಆಯ್.ಪರಂಡಿ, ಬಿ.ಎ.ಆಸಂಗಿ, ತಾಲ್ಲೂಕಾ ಅಧ್ಯಕ್ಷ ಬೀರಪ್ಪ ಖಂಡೆಕಾರ, ರಾಜಕುಮಾರ ಚವ್ಹಾಣ, ಸದಸ್ಯರಾದ ಶ್ರೀಮತಿ ಜಯಶ್ರೀ ಬುರ್ಲಿ, ಶ್ರೀಮತಿ ಜ್ಯೋತಿ ದೇಸಾಯಿ, ರಾಜಕುಮಾರ ಅರಗೆ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

