Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬೆಟ್ಟಿಂಗ್ ದಂಧೆಯ ಭಸ್ಮಾಸುರರಿಗೆ ಬಿಸಿ ಮುಟ್ಟಿಸಿ!

ಎ.೨ ರಂದು ಹಳ್ಳಿ ಮೋಟಾರ್ಸ್ ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಮುಕ್ಕೋಟಿ ದೇವರ ಸಮಾಗಮ ಹೊಂದಿದ ಶ್ರೀ ಬಲಭೀಮ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಾವಯವ ಕೃಷಿ ಬಗ್ಗೆ ರೈತರಿಗೆ ಅರಿವು ಮೂಡಿಸಿದ ಸಿದ್ದೇಶ್ವರ ಶ್ರೀಗಳು
(ರಾಜ್ಯ ) ಜಿಲ್ಲೆ

ಸಾವಯವ ಕೃಷಿ ಬಗ್ಗೆ ರೈತರಿಗೆ ಅರಿವು ಮೂಡಿಸಿದ ಸಿದ್ದೇಶ್ವರ ಶ್ರೀಗಳು

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಶ್ರೀ ಸಿದ್ದೇಶ್ವರ ಅಪ್ಪಾಜಿಯವರ ೨ನೇ ವರ್ಷದ ಗುರು ನಮನ | “ಸುಧಾರಿತ ಕೃಷಿ ಪದ್ಧತಿ” ಗೋಷ್ಠಿ | ಸಾವಯವ ಕೃಷಿ ನಿಯೋಗದ ಅಧ್ಯಕ್ಷ ಎ.ಎಸ್.ಆನಂದ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಮರೆಯಲಾಗದ ಮಾಣಿಕ್ಯ. ಅವರು ಪ್ರತಿ ಕ್ಷಣವೂ ನಮ್ಮ ನೆನೆಪಿನಲ್ಲಿಯೇ ಇರುತ್ತಾರೆ ಅವರು ತೋರಿಸಿದ ದಾರಿಯಲ್ಲಿ ನಾವೆಲ್ಲರೂ ಸಾಗುವ ಮೂಲಕ ಸಾರ್ಥಕದ ಜೀವನ ನಡೆಸಬೇಕು ಎಂದು ಸಾವಯವ ಕೃಷಿ ನಿಯೋಗದ ಅಧ್ಯಕ್ಷ ಎ.ಎಸ್.ಆನಂದ ಹೇಳಿದರು.
ನಗರದ ಶ್ರೀ ಜ್ಞಾನಯೋಗಾಶ್ರಮದಲ್ಲಿ ಶ್ರೀ ಸಿದ್ದೇಶ್ವರ ಅಪ್ಪಾಜಿಯವರ ೨ನೇ ವರ್ಷದ ಗುರು ನಮನ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ “ಸುಧಾರಿತ ಕೃಷಿ ಪದ್ಧತಿ” ಎಂಬ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶ್ರೀ ಸಿದ್ದೇಶ್ವರ ಅಪ್ಪಾಜಿಯವರು ಇದ್ದಾಗ ಅವರನ್ನು ಭೇಟಿ ಮಾಡಲು ಅವರ ಮಾತುಗಳನ್ನು ಕೇಳಲು ಮನಸ್ಸು ಮೌನವಾಗುತ್ತಿತ್ತು. ಆದರೆ ಇಂದು ಅವರು ಇಲ್ಲದಾಗ ಅದೇ ಮೌನವನ್ನು ಮುರೆದು ಅವರ ಬಗ್ಗೆಯೇ ಮಾತನಾಡಬೇಕಾದ ಅನಿವಾರ್ಯತೆ ಬಂದಿದೆ. ಅವರು ಇಲ್ಲ ಎಂಬ ಮಾತು ನಂಬಲಸಾಧ್ಯ ಅವರು ನಮ್ಮ ಸುತ್ತು-ಮುತ್ತಲಯಲ್ಲಿಯೇ ಇದ್ದಾರೆ ನಮ್ಮ ಮಾತುಗಳನ್ನು ಕೇಲಿಸಿಕೊಳ್ಳುತ್ತಿದ್ದಾರೆ ಎಂಬ ಭಾವನೆ ಮೂಡುತ್ತದೆ ಎಂದರು.
ಇನ್ನು ಕೃಷಿಯ ಬಗ್ಗೆ ಅಪಾರ ಕಾಳಜಿ ಹೊಂದಿದಂತವರು ಅಪ್ಪಾಜೀಯವರು. ಸಾವಯವ ಕೃಷಿಯ ಬಗ್ಗೆ ಸಾಕಷ್ಟು ಅರಿವನ್ನು ರೈತರಿಗೆ ಮೂಡಿಸಿದಂತವರು. ಅವರ ಮಾತಿನಂತೆ ನಾವೆಲ್ಲರೂ ಸಾವಯವ ಕೃಷಿಯ ಮಹತ್ವದ ಬಗ್ಗೆ ಅರಿಯಬೇಕಾಗಿದೆ. ರೈತರು ರಾಸಾಯನಿಕ ಗೊಬ್ಬರವನ್ನು ನಮ್ಮ ಭೂಮಿಗೆ ಹಾಕುವುದರಿಂದ ಅದರಿಂದ ಆಗುವ ನಷ್ಟದ ಬಗ್ಗೆ ಅರಿಯಬೇಕಾಗಿದೆ. ಕೃಷಿ ಬರೀ ಲಾಭದಾಯಕ ಉದ್ಯೋಗವಾದ ಪರಿಣಾಮ ಇಂದಿನ ದಿನ ನಮಗೆ ಅನ್ನ ನೀಡುವ ಭೂಮಿಗೆ, ಹಾಲು ಕೊಡುವ ಗೋವಿಗೆ, ನಮ್ಮ ಮಕ್ಕಳಿಗೂ, ನಮ್ಮ ಕುಟುಂಬಗಳಿಗೂ ವಿಷಪೂರಿತ ಆಹಾರವನ್ನು ನೀಡುತ್ತಿರುವುದು ದುರಂತದ ವಿಷಯ ಎಂದರು.
ಪತ್ರಿಕೆಗಳಲ್ಲಿ ಯಾರದ್ದೋ ಕೊಲೆ ವಿಷಯವನ್ನು ಓದಿ ಮರುಗುವ ನಾವು ಪ್ರತಿದಿನ ವಿಷಪೂರಿತ ಗೊಬ್ಬರ ಬಳಸಿ ಇಷ್ಟೊಂದು ಜೀವಿಗಳ ಜೀವನವನ್ನು ನಾವು ನಾಶ ಮಾಡುತ್ತಿದ್ದೇವೆ ಅದರ ಬಗ್ಗೆ ಏಕೆ ನಮಗೆ ಅರಿವಾಗುತ್ತಿಲ್ಲ.
ಬಯಲಲ್ಲಿ ಬಯಲಾಗಿ ಹೋಗುವುದೇ ಜೀವನ ಎಂದು ಹೇಳಿದ ಸಿದ್ದೇಶ್ವರ ಸ್ವಾಮೀಜಿಯವರ ಮಾತುಗಳು ನಮ್ಮ ಜೀವನಕ್ಕೆ ಪ್ರೇರಣೆಯಾಗಬೇಕು. ನಾವು ಎಷ್ಟೇ ಗಳಿಸಿದರು, ಕೋಟಿ, ಕೋಟಿ ಕೂಡಿಟ್ಟರು ಎಲ್ಲವನ್ನು ಇಲ್ಲೆ ಬಿಟ್ಟು ಅಪ್ಪಾಜಿಯವರ ಮಾತಿನಂತೆ ಬಯಲಲ್ಲಿ ಬಯಲಾಗಿಯೇ ಹೋಗುವುದು ಶತಸಿದ್ಧ ಹೀಗಿರುವಾಗ ಕೃಷಿಯಲ್ಲಿ ಲಾಭದಾಯಕದ ಆಸೆಗಾಗಿ ಎಲ್ಲ ಬೆಳೆಗಳಿಗು ವಿಷ ಸಿಂಪಡಿಸಿ ಎಲ್ಲರ ಜೀವಕ್ಕೂ ಕುತ್ತು ತರುವ ಪದ್ಧತಿ ನಿಲ್ಲಬೇಕು. ನಮ್ಮ ಸ್ವಾರ್ಥಕ್ಕಾಗಿ ಭೂಮಿಗೆ ವಿಷ ಉಣಿಸುತ್ತಿದ್ದೇವೆ. ನಿಸರ್ಗ ಜೀವಿಗಳಿಗೆ ವಿಷ ಹಾಕಿ ಪಾಪಿಗಳಾಗುತ್ತಿದ್ದೇವೆ. ಕೃಷಿ ಸಾತ್ವಿಕವಾಗಬೇಕು ಅಂದಾಗ ಮಾತ್ರ ಈ ಭೂಮಿ ಮೇಲೆ ಒಳ್ಳೆಯದಾಗಲೂ ಸಾಧ್ಯ. ನಾವೆಲ್ಲರೂ ಯಾವ ರೈತ ತನ್ನ ಬೆಳೆಗಳಿಗೆ ವಿಷ ಸಿಂಪಡಿಸದೆ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಾನೊ ಅಂತಹವನನ್ನು ಕೈ ಮುಗಿದು ಗೌರವಿಸೋಣ. ಅಂತಹ ರೈತರನ್ನ ನೋಡಿ ಹೆಮ್ಮೆ ಪಡುವ ಮೂಲಕ ಅವರನ್ನು ಪ್ರೋತ್ಸಾಹಿಸೋಣ ಸಾವಯವ ಕೃಷಿ ಪದ್ಧತಿಗೆ ಬೆಂಬಲ ಸೂಚಿಸೋಣ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಬೀಜ ಮತ್ತು ಸಾವಯವ ಪ್ರಮಾಣ ನಿಗಮದ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿ, ನಮ್ಮ ಇಡೀ ಮನೆತನವೇ ಆಶ್ರಮದ ಭಕ್ತರು. ನನ್ನ ಅಜ್ಜಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಗುರುಗಳಾದ ಮಲ್ಲಿಕಾರ್ಜುನ ಸ್ವಾಮೀಜಿಯವರ ಪರಮ ಭಕ್ತರಾಗಿದ್ದರು ಆ ಕಾಲದಿಂದಲೂ ಆಶ್ರಮದ ಜೊತೆ ನಮ್ಮ ಒಡನಾಟ ಮರೆಯಲಾಗದು. ಒಬ್ಬ ಗುರುವಾಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಆಶೀರ್ವಾದ ನಮ್ಮ ಮನೆಯ ಮೇಲೆ ಸದಾ ಇದೆ ಅವರ ಆಶೀರ್ವಾದದ ಕಾರಣವೇ ಇಂದು ನಾವು ಇಷ್ಟರ ಮಟ್ಟಿಗೆ ಬೆಳೆಯಲು ಸಾಧ್ಯ ಎಂದರು. ಶ್ರೀ ಸಿದ್ದೇಶ್ವರ ಅಪ್ಪಾಜಿಯವರಿಗೆ ಲಕ್ಷಾಂತರು ಭಕ್ತರು ಜತತ್ತಿನಾದ್ಯಂತ ಅವರನ್ನು ಪೂಜಿಸುತ್ತಾರೆ. ಅವರು ನಡೆದಾಡಿದ ಭೂಮಿಯಲ್ಲಿ ನಾವೆಲ್ಲರೂ ಜನಿಸಿದ್ದೇ ನಮ್ಮ ಪುಣ್ಯ. ಅವರ ಹಾಕಿ ಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಕೃಷಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅಪ್ಪಾಜಿಯವರು ಯಾರಾದರೂ ರೈತರು ತಮ್ಮ ತೋಟಕ್ಕೆ ಕರೆದರೆ ಅತ್ಯಂತ ಖುಷಿಯಿಂದ ಹೋಗಿ ಅವರ ಬೆಳೆ ಪದ್ಧತಿಗೆಳಿಗೆ ಹಲವಾರು ಸಲಹೆ ಸೂಚನೆಗಳನ್ನು ನೀಡುತ್ತಿದ್ದರು, ಸಾವಯವ ಕೃಷಿಗೆ ಒತ್ತು ಕೊಡುವಂತೆ ಪ್ರೇರೇಪಿಸುತ್ತಿದ್ದರು ಅವರ ಸಲಹೆಯಂತೆ ನಾವೆಲ್ಲರೂ ಸಾವಯವ ಕೃಷಿ ಪದ್ಧತಿಗೆ ಬೆಂಬಲ ಸೂಚಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಬಬಲೇಶ್ವರದ ಪಂಚಮಸಾಲಿ ಪೀಠದ ಜಗದ್ಗುರು ಪೂಜ್ಯ ಶ್ರೀ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಶ್ರೀ ಮಲ್ಲಿಕಾರ್ಜುನ ಅಪ್ಪಾಜೀಯವರು ವೇದಾಂತ ಕೇಸರಿ ಎಂಬ ಬಿರುದನ್ನು ಸುಮ್ಮನೆ ಪಡೆದಿಲ್ಲ. ಪ್ರತಿ ದಿನವೂ ಸತತ ಮೂರು ಹೊತ್ತುಗಳ ಕಾಲ ಇಡೀ ಭಕ್ತಕುಲಕ್ಕೆ ಪ್ರವಚನ ನೀಡಿದಂತವರು ಸ್ವಾಮೀಜಿಯವರು. ಅವರ ಶಿಷ್ಯರಾಗಿ ಇಡೀ ಪ್ರಪಂಚದಾದ್ಯಂತ ಇಂಗ್ಲೀಷ್ ಸೇರಿದಂತೆ ಹಲವಾರು ಭಾಷೆಗಳಲ್ಲಿ ಜ್ಞಾನದಾಸೋಹ ಮಾಡಿದಂತವರು ಶ್ರೀ ಸಿದ್ದೇಶ್ವರ ಅಪ್ಪಾಜಿಯವರು. ಪ್ರತಿ ಹಳ್ಳಿ-ಹಳ್ಳಿಗೂ, ದೇಶ-ವಿದೇಶಕ್ಕೂ ತಮ್ಮ ಜ್ಞಾನ ಭಂಡಾರವನ್ನು ಹಂಚಿದಂತವರು. ಬದುಕು ಹೇಗಿರಬೇಕು, ಜೀವನ ಎಂದರೆ ಏನು, ಎಷ್ಟು ಸರಳವಾಗಿ ನಾವು ಬದುಕಬೇಕು, ಇದರ ಜೊತೆಗೆ ರೈತರ ಜವಾಬ್ದಾರಿ ಮತ್ತು ಕೃಷಿಯ ಮಹತ್ವದ ಬಗ್ಗೆ ನಡೆದಾಡಿಕೊಂಡೆ ಇಡೀ ಮನುಕೂಲಕ್ಕೆ ತಿಳಿಸಿದ ಮಹಾತ್ಮ ಶ್ರೀ ಸಿದ್ದೇಶ್ವರ ಅಪ್ಪಾಜಿಯವರು. ಅವರ ಬಗ್ಗೆ ಮಾತನಾಡುವುದೇ ನಮ್ಮ ಪುಣ್ಯ ನಮ್ಮ ಜೀವನ ಪಾವಣವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರು ಶ್ರೀ ಬಸವಲಿಂಗ ಸ್ವಾಮೀಜಿಯವರು ಆಶೀರ್ವಚನ ನೀಡಿ, ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನಮ್ಮ ಜೀವನಕ್ಕೆ ದಾರಿದೀಪ. ಜಗತ್ತಿಗೆ ನಿರಂತರ ಅನ್ನ ಕೊಡುವವನು ರೈತ ನಮ್ಮ ಜೀವನಕ್ಕೆ ರೈತರ ಕೊಡುಗೆ ಅಪಾರ. ಅಂತಹ ರೈತರ ಪ್ರಾಮುಖ್ಯತೆ ಬಗ್ಗೆ ಪೂಜ್ಯ ಶ್ರೀ ಸಿದ್ದೇಶ್ವರ ಅಪ್ಪಾಜಿಯವರು ನಮಗೆ ಸದಾಕಾಲ ತಿಳಿಸಿಕೊಟ್ಟಿದ್ದಾರೆ. ರೈತರೆಂದರೆ ಅವರಿಗೆ ಅಪಾರ ಪ್ರೀತಿ, ಗೌರವ ಎಲ್ಲಿಯಾದರೂ ಹೋಗುವಾಗ ಹೊಲದಲ್ಲಿ ರೈತರು ಕಂಡರೆ ಅಲ್ಲಿ ನಿಂತು ಅವರನ್ನು ಮಾತನಾಡಿಸಿ ಅವರೊಂದಿಗೆ ಕೆಲ ಕಾಲ ಚರ್ಚಿಸಿ ನಂತರ ಮತ್ತೆ ವಾಪಾಸಾಗುತ್ತಿದ್ದರು ಅಷ್ಟು ಪ್ರೀತಿಯನ್ನು ರೈತರಿಗೆ ಅಪ್ಪಾಜಿಯವರು ತೋರಿಸುತ್ತಿದ್ದರು ಎಂದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ಸಾವಯವ ಕೃಷಿಕರ ಧರೆಪ್ಪ ಕಿತ್ತೂರ ಮಾತನಾಡಿ, ನಮ್ಮ ಜೀವನದಲ್ಲಿ ಕೃಷಿ, ಪರಿಸರ, ಆರೊಗ್ಯದ ಬಗ್ಗೆ ಅರಿವನ್ನು ಮೂಡಿಸಿದವರು ಶ್ರೀ ಸಿದ್ದೇಶ್ವರ ಅಪ್ಪಾಜಿಯವರು. ನಾನು ರೈತನಾಗಿ ಇಷ್ಟು ಸಾಧನೆ ಮಾಡಬೇಕೆಂದರೆ ಅವರೆ ಕಾರಣ. ಸಾವಯವ ಕೃಷಿಯ ಮಹತ್ವದ ಬಗ್ಗೆ ತಿಳಿಸಿ ಅದನ್ನು ನನ್ನ ತೋಟದಲ್ಲಿ ಪ್ರಯೋಗಿಸಲು ಕಾರಣ ಅಪ್ಪಾಜಿಯವರು. ನನ್ನ ಕೃಷಿ ತೋಟಕ್ಕೆ ಭೇಟಿ ನೀಡಿ ನನಗೆ ಸಾಕಷ್ಟು ಸಲಹೆ ನೀಡಿ ನನಗೆ ಆಶೀರ್ವಾದ ಮಾಡಿದ್ದರು ಅವರು ನಮ್ಮ ಮನದಲ್ಲಿ ಎಂದೆಂದಿಗೂ ಅಮರರು ಎಂದು ಹೇಳಿದರು.
ಇನ್ನೋರ್ವ ರೈತ ರಾಜಶೇಖರ ನಿಂಬರಗಿ ಮಾತನಾಡಿ, ಅಪ್ಪಾಜೀಯವರು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದಂತವರು. ಕೃಷಿಯ ಮಹತ್ವದ ಬಗ್ಗೆ ಇಡೀ ಮನುಕೂಲಕ್ಕೆ ತಲುಪಿಸಿದಂತವರು. ಅವರ ಸಲಹೆ ಸೂಚನೆಗಳು ಕೃಷಿಕರಿಗೆ ಸಾಕಷ್ಟು ಸಹಕಾರಿಯಾಗಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೂ ಮುನ್ನ ಹಂತಿಪದಗಳನ್ನು ಹಾಡಿ ಜಾನಪದ ಕಲೆಯನ್ನು ಮರುಕಳಿಸಿದ ರೈತರನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ವಿವಿಧ ಮಠಾಧೀಶರು, ಪೂಜ್ಯರು, ರೈತ ಮುಖಂಡರು, ನಾಯಕರು, ಸಾವಿರಾರು ಭಕ್ತಾಧಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಸುಭಾಷ್ ಕನ್ನೂರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಸಾಹಿತಿ ಜಂಬುನಾಥ ಕಂಚ್ಯಾಣಿ ಸ್ವಾಗತಿಸಿದರು, ಶಿಕ್ಷಕ ಅಶೋಕ ಹಂಚಲಿ ನಿರೂಪಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬೆಟ್ಟಿಂಗ್ ದಂಧೆಯ ಭಸ್ಮಾಸುರರಿಗೆ ಬಿಸಿ ಮುಟ್ಟಿಸಿ!

ಎ.೨ ರಂದು ಹಳ್ಳಿ ಮೋಟಾರ್ಸ್ ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಮುಕ್ಕೋಟಿ ದೇವರ ಸಮಾಗಮ ಹೊಂದಿದ ಶ್ರೀ ಬಲಭೀಮ

ಸೆಕೆಂಡಿನ ಮಹತ್ವ ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾದವನಿಗೆ ಕೇಳಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬೆಟ್ಟಿಂಗ್ ದಂಧೆಯ ಭಸ್ಮಾಸುರರಿಗೆ ಬಿಸಿ ಮುಟ್ಟಿಸಿ!
    In ವಿಶೇಷ ಲೇಖನ
  • ಎ.೨ ರಂದು ಹಳ್ಳಿ ಮೋಟಾರ್ಸ್ ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
    In (ರಾಜ್ಯ ) ಜಿಲ್ಲೆ
  • ಮುಕ್ಕೋಟಿ ದೇವರ ಸಮಾಗಮ ಹೊಂದಿದ ಶ್ರೀ ಬಲಭೀಮ
    In ವಿಶೇಷ ಲೇಖನ
  • ಸೆಕೆಂಡಿನ ಮಹತ್ವ ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾದವನಿಗೆ ಕೇಳಿ
    In ವಿಶೇಷ ಲೇಖನ
  • ಒಬ್ಬಂಟಿ ಜೀವಗಳ ತೊಳಲಾಟಗಳು
    In ಭಾವರಶ್ಮಿ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026
    In ದಿನಪತ್ರಿಕೆ
  • ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ
    In (ರಾಜ್ಯ ) ಜಿಲ್ಲೆ
  • ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಕಲಾಶ್ರೀ ಚವ್ಹಾಣ ಗೆ ಅಭಿನಂದಿಸಿದ ಡಾ.ಸುರೇಖಾ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.