ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಾಜಪೇಯಿ ಅವರ ಗುಣಗಳು ನಮ್ಮ ಜೀವನದಲ್ಲಿ ಅಳಡಿಸಿಕೋಳ್ಳಬೇಕು ಅವರ ಅಭಿವೃದ್ಧಿ ಯೋಜನೆಗಳು ಈ ದೇಶದಲ್ಲಿ ಶಾಶ್ವತವಾಗಿ ಉಳಿದಿವೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಹೇಳಿದರು.
ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಬೂತ್ ಅಧ್ಯಕ್ಷರ ಮನೆಯ ಮೇಲೆ ಸಿಂದಗಿ ಬಿಜೆಪಿ ಮಂಡಲ ವತಿಯಿಂದ ಈ ದೇಶ ಕಂಡ ಅತ್ಯುತ್ತಮ ರಾಜಕಾರಣಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ೧೦೦ನೆಯ ಹುಟ್ಟು ಹಬ್ಬದ ಅಂಗವಾಗಿ ಸುಶಾಸನ ದಿನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಸ್ಪಾಚರಣೆ ಮಾಡಿ ಮಾತನಾಡಿದರು.
ವಾಜಪೇಯಿ ಅವರ ಯೋಜನೆ ನದಿ ಜೋಡಣೆ, ಚಥುಸ್ಪದ ರಸ್ತೆ, ಗ್ರಾಮ ಸಡಕ್ ಅವರ ವಿದೇಶಿ ನೀತಿಗಳು ಇಂದಿಗೂ ಸಹ ಅಜರಾಮರವಾಗಿವೆ. ಅವರ ತ್ವ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಗುರು ತಳವಾರ, ಶ್ರೀಶೈಲ ಚಳ್ಳಗಿ, ಸಿದ್ರಾಮ್ ಆನಗೊಂಡ, ನೀಲಮ್ಮ ಯಡ್ರಾಮಿ, ಬಸವರಾಜ ಸಜ್ಜನ, ಅಶೋಕ ನಾರಾಯಣಪೂರ, ಅನಸೂಯ ಪರಗೊಂಡ, ಮಡಿವಾಳಪ್ಪಗೌಡ ಬಿರಾದಾರ, ಬಸಲಿಂಗ ಬಿರಾದಾರ, ಶಿವಯ್ಯ ಹಿರೇಮಠ, ಬಸಯ್ಯ ಮಠಪತಿ, ಗಂಗಾಧರ್ ಶಿಂಪಗೇರ, ದೌವಲಪ್ಪ ಬಿರಾದಾರ, ಶಂಕರೇಪ್ಪ ರಾಮಗೊಂಡ, ಜಿ.ಎಮ್.ಬಿರಾದಾರ ವಿಶ್ವನಾಥ್ ಯಾಳವಾರ, ಭೀಮಾಶಂಕರ ಚೆನ್ನೂರ ಸೇರಿದಂತೆ ಅನೇಕರಿದ್ದರು.

